Ajith Kumar: ಶೂಟಿಂಗ್​ನಲ್ಲಿ ಚಿನ್ನದ ಪದಕ ಬಾಚಿಕೊಂಡ ನಟ ಅಜಿತ್, ರಿಯಲ್ ಲೈಫ್​ನಲ್ಲೂ ಹೀರೋ ಆದ 'ತಲಾ'

Ajith Wins Medals: ತಮಿಳುನಾಡಿನ ತಿರುಚಿ ರೈಫಲ್​ ಕ್ಲಬ್​ನಲ್ಲಿ ಈ ಸ್ಫರ್ಧೆಗಳು ನಡೆದಿದ್ದು, ನೆಚ್ಚಿನ ನಟನನ್ನ ನೋಡಲು ಅಭಿಮಾನಿಗಳು ಸಹ ಬಂದು ಸೇರಿದ್ದರು. ಸ್ಪರ್ಧೆ ನಡೆಯುವ ಕಟ್ಟಡದ ಹೊರಗೆ ಹೆಚ್ಚಿನ ಅಭಿಮಾನಿಗಳು ಸೇರಿದ ಹಿನ್ನೆಲೆ ಭದ್ರತೆಯನ್ನು ಹೆಚ್ಚು ಮಾಡಲಾಗಿತ್ತು.

ಅಜಿತ್ ಕುಮಾರ್

ಅಜಿತ್ ಕುಮಾರ್

  • Share this:
ಕಾಲಿವುಡ್ ಸ್ಟಾರ್ (Kollywood Star) ಅಜಿತ್ ಕುಮಾರ್ (Ajith Kumar) ಸಿನಿಮಾದಲ್ಲಿ ಶೂಟ್​ ಮಾಡುವ ದೃಶ್ಯಗಳನ್ನು ನೋಡಿರುತ್ತೇವೆ. ಪರ್ಫೆಕ್ಟ್ ಗನ್​ ಶಾಟ್​ ಎನ್ನುತ್ತೇವೆ. ಆದರೆ ಅವರು ರಿಯಲ್​ ಲೈಫ್​ನಲ್ಲಿ ಸಹ  ಅವರು ಶೂಟರ್​. ಅಜಿತ್ ಮಲ್ಟಿಟ್ಯಾಲೆಂಟೆಡ್ ಎಂಬುದು ಎಲ್ಲರಿಗೂ ಗೊತ್ತಿದೆ. ನಟನೆ ಅಲ್ಲದೇ, ಹಲವು ಕ್ಷೇತ್ರಗಳಲ್ಲಿ ಅವರು ಗುರುತಿಸಿಕೊಂಡಿರುವುದಲ್ಲದೇ, ಸಾಧನೆ ಮಾಡಿದ್ದಾರೆ. ಈ ಮತ್ತೊಮ್ಮೆ ತಮ್ಮ ಪ್ರತಿಭೆ ತೋರಿಸಿದ್ದು, ಪ್ರಶಸ್ತಿ ಪಡೆದಿದ್ದಾರೆ.  ಹೌದು, 47ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ (Tamilnadu State Shooting Championship) ನಟ ಅಜಿತ್ ಭಾಗವಹಿಸಿದ್ದು, ಒಟ್ಟು 6 ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

4 ಚಿನ್ನದ ಪದಕ ಗೆದ್ದ ನಟ

ನಾಲ್ಕು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಹಾಗೂ ಎರಡು ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಸಿಕ್ಕಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸೆಂಟರ್ ಫೈರ್​ ಪಿಸ್ತೂಲ್ ಪುರುಷ ವಿಭಾಗ, ಸ್ಟ್ಯಾಂಡರ್ಡ್​ ಪಿಸ್ತೂಲ್ ಮಾಸ್ಟರ್​ ಪುರುಷ ವಿಭಾಗ, 50 ಮೀಟರ್ ಫ್ರೀ ಪಿಸ್ತೂಲ್​ ಮಾಸ್ಟರ್ ಪುರುಷ ವಿಭಾಗ ಹಾಗೂ ಸ್ಟ್ಯಾಂಡರ್ಡ್​ ಪಿಸ್ತೂಲ್ ಮಾಸ್ಟರ್ ಪುರುಷ ವಿಭಾಗದಲ್ಲಿ ನಟ ಅಜಿತ್ ಚಿನ್ನದ ಪದಕ ಗೆದ್ದಿದ್ದು,  50 ಮೀಟರ್ ಫ್ರೀ ಪಿಸ್ತೂಲ್ ಪುರುಷ ವಿಭಾಗ ಹಾಗೂ ಸ್ಟ್ಯಾಂಡರ್ಡ್​ ಪಿಸ್ತೂಲ್ ಪುರುಷ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ.

ತಮಿಳುನಾಡಿನ ತಿರುಚಿ ರೈಫಲ್​ ಕ್ಲಬ್​ನಲ್ಲಿ ಈ ಸ್ಫರ್ಧೆಗಳು ನಡೆದಿದ್ದು, ನೆಚ್ಚಿನ ನಟನನ್ನ ನೋಡಲು ಅಭಿಮಾನಿಗಳು ಸಹ ಬಂದು ಸೇರಿದ್ದರು. ಸ್ಪರ್ಧೆ ನಡೆಯುವ ಕಟ್ಟಡದ ಹೊರಗೆ ಹೆಚ್ಚಿನ ಅಭಿಮಾನಿಗಳು ಸೇರಿದ ಹಿನ್ನೆಲೆ ಭದ್ರತೆಯನ್ನು ಹೆಚ್ಚು ಮಾಡಲಾಗಿತ್ತು. ಅಲ್ಲದೇ, ಅಭಿಮಾನಿಗಳನ್ನು ನೋಡಿದ ಅಜಿತ್ ಅವರತ್ತ ಕೈ ಬೀಸಿದ್ದು, ಅಭಿಮಾನಿಗಳು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಸಂಭ್ರಮ ಪಟ್ಟಿದ್ದಾರೆ.

ಇನ್ನು ನಟ ಅಜಿತ್ ಅವರು ಈ ರೀತಿ ಪ್ರಶಸ್ತಿ ಬಾಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ.  ಹಿಂದೆ ನಡೆದ 46ನೇ ತಮಿಳುನಾಡು ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಸಹ ಹಲವಾರು ಪದಕಗಳನ್ನು ಪಡೆದಿದ್ದಾರೆ. ಇನ್ನು ಅಜಿತ್​​ಗೆ ಶೂಟಿಂಗ್ ಮಾತ್ರ ಅಲ್ಲ, ಕಾರ್​ ಮತ್ತು ಬೈಕ​ ರೈಡಿಂಗ್ ಹವ್ಯಾಸವಿದ್ದು, ಬೈಕ್​ನಲ್ಲಿ ಬಹಳ ದೂರದ ಊರುಗಳಿಗೆ ಹೋಗಿದ್ದಾರೆ. ಮತ್ತೊಂದು ವಿಶೇಷ ವಿಚಾರ ಎಂದರೆ ಡ್ರೋನ್ ಡಿಸೈನಿಂಗ್ ಕೂಡ ಮಾಡುತ್ತಾರೆ.

ಇದನ್ನೂ ಓದಿ: ವಿಕ್ರಾಂತ್ ರೋಣನ 3ನೇ ದಿನದ ಕಲೆಕ್ಷನ್ ಎಷ್ಟು? ಇಂದು ಮತ್ತೊಮ್ಮೆ ಶೇಕ್ ಆಗುತ್ತಾ ಗಲ್ಲಾಪೆಟ್ಟಿಗೆ?ನಟ ಅಜಿತ್ ಅವರ ಸಿನಿಮಾ ವಿಚಾರಕ್ಕೆ ಬಂದರೆ, ಈಗ ನಿರ್ದೇಶಕ ಎಚ್. ವಿನೋದ್ ಅವರ ಮುಂದಿನ ಚಿತ್ರಕ್ಕಾಗಿ ತಯಾರಿಯಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಕೆಲಸ ಮಾಡುತ್ತಿದ್ದಾರೆ, ಈ ಚಿತ್ರವನ್ನು ತಾತ್ಕಾಲಿಕವಾಗಿ ‘ಎಕೆ 61’ ಎಂದು ಹೆಸರಿಡಲಾಗಿದೆ. ವಿನೋದ್ ನಿರ್ದೇಶನದ ಕೊನೆಯ ಚಿತ್ರವಾದ ‘ವಲಿಮೈ’ ಯಲ್ಲಿ ಅಜಿತ್ ತಮ್ಮ ದೈಹಿಕ ಲುಕ್ ಬಗ್ಗೆ ಎಲ್ಲರ ಗಮನಸೆಳೆದಿದ್ದರು. ಚಲನಚಿತ್ರದಲ್ಲಿ ನಟಿಸುವ ನಟರು ವಿಭಿನ್ನ ಚಿತ್ರಗಳಲ್ಲಿನ ವಿಭಿನ್ನವಾದ ಪಾತ್ರಗಳಿಗೆ ಸರಿ ಹೋಗುವಂತೆ ಭಿನ್ನ ಆಕಾರ ಮತ್ತು ಗಾತ್ರಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಜಿತ್ ಚಲನಚಿತ್ರ ಅಭಿಮಾನಿಗಳಿಗೆ ತೋರಿಸಿದ್ದರು.

ಇದನ್ನೂ ಓದಿ: ಕಿಚ್ಚಂಗೂ ಶೆಟ್ರಿಗೂ ಕೋಲ್ಡ್​ ವಾರ್​? ಇಬ್ಬರ ಕಾಂಬಿನೇಷನ್​ ಸಿನಿಮಾ ನೋಡೋದು ಯಾವಾಗ?

ಸಿನಿಮಾಗಾಗಿ ಫಿಟ್ ಆಗಿದ್ದಾರೆ ನಟ

ಈಗ ಮತ್ತೆ ಈ ಸಿನಿಮಾಗಾಗಿ ಮೊದಲಿನ ಲುಕ್​ಗೆ ಮರಳಿದ್ದಾರೆ.  ಎಕೆ 61’ ಚಿತ್ರದ ನಿರ್ದೇಶಕ ವಿನೋದ್ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರೊಂದಿಗೆ ಅಜಿತ್ ಅವರ ಸತತ ಮೂರನೇ ಚಿತ್ರ ಇದಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು, ಈ ಮೂವರು ಹಿಂದಿಯ ಹಿಟ್ ‘ಪಿಂಕ್’ ಚಿತ್ರದ ರಿಮೇಕ್ ಆಗಿರುವ ‘ನೇರ್ಕೊಂಡ ಪಾರ್ವೈ’ ಚಿತ್ರಕ್ಕಾಗಿ ಒಂದಾಗಿದ್ದರು. ತದ ನಂತರ ಅವರು ‘ವಲಿಮೈ’ ಗಾಗಿ ಮತ್ತೆ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರವನ್ನು ಪೂರ್ಣಗೊಳಿಸಿದ ನಂತರ, ಅಜಿತ್ ಮುಂದಿನ ಚಿತ್ರದ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
Published by:Sandhya M
First published: