Ajith Kumar: ವ್ಹಾ, ಕಿಲ್ಲರ್​​ ಲುಕ್ ಗುರೂ! ಮುಂದಿನ ಸಿನಿಮಾಗಾಗಿ ಅಜಿತ್​ ಕಸರತ್ತು ಜೋರು

ನಟ ಅಜಿತ್ ಅವರು ತಮ್ಮ ಅಭಿಮಾನಿಯೊಂದಿಗೆ ತೆಗೆಸಿಕೊಂಡಂತಹ ಒಂದು ಫೋಟೋ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ. ಆ ವೈರಲ್ ಆಗುತ್ತಿರುವ ಫೋಟೋದಲ್ಲಿ, ಅಜಿತ್ ಕೆಲವು ತಿಂಗಳ ಹಿಂದೆ ನೋಡಿದ್ದಕ್ಕಿಂತ ತುಂಬಾ ತೆಳ್ಳಗೆ ಮತ್ತು ಫಿಟ್ ಆಗಿ ಕಾಣುತ್ತಾರೆ.

ನಟ ಅಜಿತ್​​

ನಟ ಅಜಿತ್​​

  • Share this:
ಸಾಮಾನ್ಯವಾಗಿ ಯಾವುದೇ ಚಲನಚಿತ್ರೋದ್ಯಮದ ನಟ (Actor) , ನಟಿ (Actress) ಯರು ತಮ್ಮ ಚಿತ್ರದಲ್ಲಿನ ಪಾತ್ರಕ್ಕೆ ನ್ಯಾಯ ಒದಗಿಸಲು ಮತ್ತು ಜೀವ ತುಂಬಲು ಆ ಪಾತ್ರಕ್ಕೆ ಬೇಕಾಗುವ ತಯಾರಿಯನ್ನು ಮಾಡಿಕೊಳ್ಳುವುದನ್ನು ನಾವು ಹಿಂದಿನಿಂದಲೂ ನೋಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವು ಪಾತ್ರಗಳಿಗಾಗಿ ಕೆಲವರು ತಮ್ಮ ದೇಹದ ತೂಕ (Body Weight) ವನ್ನು ಈ ಜಿಮ್ (Gym) ಗಳಿಗೆ ಹೋಗಿ ಕಠಿಣವಾದ ತಾಲೀಮುಗಳನ್ನು ಮಾಡುವುದರೊಂದಿಗೆ ಕಡಿಮೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಚೆನ್ನಾಗಿ ತಿಂದು ಮೈ ಬೆಳಸಿಕೊಂಡು ಅವರ ಚಿತ್ರದಲ್ಲಿನ ಆ ಪಾತ್ರ (Character) ಕ್ಕೆ ರೆಡಿ ಆಗುವುದನ್ನು ನಾವು ನೋಡಿರುತ್ತೇವೆ.

ಒಟ್ಟಿನಲ್ಲಿ ಹೇಳುವುದಾದರೆ ಒಂದು ಚಿತ್ರದಲ್ಲಿ ಬರುವಂತಹ ಆ ಬಹು ಮುಖ್ಯವಾದ ಪಾತ್ರ ಹೇಗಿರಬೇಕೆಂದು ನಿರೀಕ್ಷಿಸುತ್ತದೆಯೋ, ಹಾಗೆಯೇ ನಟ, ನಟಿಯರು ಆ ಪಾತ್ರಕ್ಕಾಗಿ ಚಿತ್ರೀಕರಣ ಶುರುವಾಗುವ ತುಂಬಾ ದಿನಗಳ ಮುಂಚಿತವಾಗಿಯೇ ಆ ಪಾತ್ರಕ್ಕೆ ಹೊಂದಿಕೊಳ್ಳಲು ರೆಡಿ ಆಗಿರುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ.

ಮುಂದಿನ ಚಿತ್ರಕ್ಕಾಗಾಗಿ ಜೋರು ಕಸರತ್ತು!

ಈಗ ಇಲ್ಲೊಬ್ಬ ಚಿತ್ರ ನಟ ಸಹ ತಮ್ಮ ಮುಂಬರುವ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ಫಿಟ್ ಆಗಿ ಕಾಣಿಸಬೇಕೆಂದು ಫಿಟ್ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಆ ನಟ ಯಾರಿರಬಹುದು ಅಂತ ನಿಮಗೆ ತಿಳಿದುಕೊಳ್ಳುವುದಕ್ಕೆ ತುಂಬಾನೇ ಕುತೂಹಲ ಇರಬೇಕಲ್ಲವೇ? ಆ ನಟ ತಮಿಳು ಚಿತ್ರರಂಗದ ಜನಪ್ರಿಯ ನಟ ಅಜಿತ್ ಕುಮಾರ್. ಹೌದು.. ನಟ ಅಜಿತ್ ಅವರು ಈಗ ನಿರ್ದೇಶಕ ಎಚ್. ವಿನೋದ್ ಅವರ ಮುಂದಿನ ಚಿತ್ರಕ್ಕಾಗಿ ತಯಾರಿಯಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಕೆಲಸ ಮಾಡುತ್ತಿದ್ದಾರೆ, ಈ ಚಿತ್ರವನ್ನು ತಾತ್ಕಾಲಿಕವಾಗಿ ‘ಎಕೆ 61’ ಎಂದು ಹೆಸರಿಸಲಾಗಿದೆ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶಿವಣ್ಣ, ತಮಿಳು ಸೂಪರ್ ಸ್ಟಾರ್​ ಸಿನಿಮಾದಲ್ಲಿ ಸೆಂಚುರಿ ಸ್ಟಾರ್​!

ನಟ ಅಜಿತ್ ಅವರು ತಮ್ಮ ಅಭಿಮಾನಿಯೊಂದಿಗೆ ತೆಗೆಸಿಕೊಂಡಂತಹ ಒಂದು ಫೋಟೋ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ. ಆ ವೈರಲ್ ಆಗುತ್ತಿರುವ ಫೋಟೋದಲ್ಲಿ, ಅಜಿತ್ ಕೆಲವು ತಿಂಗಳ ಹಿಂದೆ ನೋಡಿದ್ದಕ್ಕಿಂತ ತುಂಬಾ ತೆಳ್ಳಗೆ ಮತ್ತು ಫಿಟ್ ಆಗಿ ಕಾಣುತ್ತಾರೆ.

ಸಖತ್​ ವರ್ಕೌಟ್​ ಮಾಡ್ತಿದ್ದಾರಂತೆ ಅಜಿತ್​!

ವಿನೋದ್ ನಿರ್ದೇಶನದ ಕೊನೆಯ ಚಿತ್ರವಾದ ‘ವಲಿಮೈ’ ಯಲ್ಲಿ ಅಜಿತ್ ತಮ್ಮ ದೈಹಿಕ ಲುಕ್ ಬಗ್ಗೆ ಎಲ್ಲರ ಗಮನಸೆಳೆದಿದ್ದರು ಎಂಬುದು ಗಮನಾರ್ಹವಾಗಿದೆ. ಚಲನಚಿತ್ರದಲ್ಲಿ ನಟಿಸುವ ನಟರು ವಿಭಿನ್ನ ಚಿತ್ರಗಳಲ್ಲಿನ ವಿಭಿನ್ನವಾದ ಪಾತ್ರಗಳಿಗೆ ಸರಿ ಹೋಗುವಂತೆ ಭಿನ್ನ ಆಕಾರ ಮತ್ತು ಗಾತ್ರಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಜಿತ್ ಚಲನಚಿತ್ರ ಅಭಿಮಾನಿಗಳಿಗೆ ತೋರಿಸಿದ್ದಾರೆ. ಆದರೆ, ಪಾತ್ರಕ್ಕೆ ಅಗತ್ಯವಿದ್ದರೆ, ಅವರು ಮತ್ತೆ ಅವರ ಮೊದಲಿನ ಆಕಾರಕ್ಕೆ ಮರಳುವುದರಲ್ಲಿ ಯಾವುದೇ ಆಲೋಚನೆ ಮಾಡುವುದಿಲ್ಲ.


ಸಖತ್​ ಮಾಸ್​ ಲುಕ್​ನಲ್ಲಿ ಅಜಿತ್ ಕಮ್​ಬ್ಯಾಕ್!

ನಿರ್ದೇಶಕ ಶಿವ ಅವರ ಸ್ಪೈ ಥ್ರಿಲ್ಲರ್ ‘ವಿವೇಗಮ್’ ಗಾಗಿ ಅವರು ಚೂರು ಪಾರು ಫಿಟ್ ಆಗಿರುವ ಮೈಕಟ್ಟನ್ನು ಹೊಂದಿದ್ದರು ಮತ್ತು ಇತ್ತೀಚಿನ ವೈರಲ್ ಫೋಟೋವನ್ನು ನೋಡಿದರೆ, ಅವರು ವಿನೋದ್ ಅವರ ಮುಂದಿನ ಚಿತ್ರಕ್ಕಾಗಿ ಅದನ್ನು ಮತ್ತೆ ಮಾಡುತ್ತಿದ್ದಾರೆಂದು ತೋರುತ್ತದೆ. ಈ ಹಿಂದೆ, ‘ಎಕೆ 61’ ಚಿತ್ರದ ನಿರ್ಮಾಣದ ಪ್ರಾರಂಭವನ್ನು ಘೋಷಿಸಲು ಅವರ ಟ್ರಿಪ್ಪಿ ಫೋಟೋವನ್ನು ಬಿಡುಗಡೆ ಮಾಡಿದ ನಂತರ ಸ್ಟಾರ್ ಎಲ್ಲರನ್ನೂ ಕುತೂಹಲಗೊಳಿಸಿದ್ದರು. ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ ಎಂದು ಸಹ ಹೇಳಿದ್ದರು.

ಇದನ್ನೂ ಓದಿ: ಡಾಲಿ ಧನಂಜಯ ಹೆಡ್ ಬುಷ್ ಸಿನಿಮಾ ಬಿಡುಗಡೆಯಾಗುತ್ತಾ ಇಲ್ವಾ?

‘ಎಕೆ 61’ ಚಿತ್ರದ ನಿರ್ದೇಶಕ ವಿನೋದ್ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರೊಂದಿಗೆ ಅಜಿತ್ ಅವರ ಸತತ ಮೂರನೇ ಚಿತ್ರ ಇದಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು, ಈ ಮೂವರು ಹಿಂದಿಯ ಹಿಟ್ ‘ಪಿಂಕ್’ ಚಿತ್ರದ ರಿಮೇಕ್ ಆಗಿರುವ ‘ನೇರ್ಕೊಂಡ ಪಾರ್ವೈ’ ಚಿತ್ರಕ್ಕಾಗಿ ಒಂದಾಗಿದ್ದರು. ತದ ನಂತರ ಅವರು ‘ವಲಿಮೈ’ ಗಾಗಿ ಮತ್ತೆ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರವನ್ನು ಪೂರ್ಣಗೊಳಿಸಿದ ನಂತರ, ಅಜಿತ್ ಮುಂದಿನ ಚಿತ್ರದ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
Published by:Vasudeva M
First published: