ಕನ್ನಡದಲ್ಲಿ ‘99’ ಆಗಿ ಬರಲಿದೆ ತಮಿಳಿನ ‘96’; ಗಣೇಶ್-ಪ್ರೀತಮ್ ಹೊಸ ಪ್ರಯತ್ನ

ಪ್ರೀತಮ್​ ಗುಬ್ಬಿ ಈವರೆಗೆ 9 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ರಿಮೇಕ್​ ಪ್ರಯತ್ನಕ್ಕೆ ಮುಂದಾಗಿದ್ದಾರೆ. ‘ಗೋಲ್ಟನ್​ ಸ್ಟಾರ್​’ ಗಣೇಶ್​​ ಚಿತ್ರದ ಹೀರೋ.

Rajesh Duggumane | news18
Updated:December 5, 2018, 12:42 PM IST
ಕನ್ನಡದಲ್ಲಿ ‘99’ ಆಗಿ ಬರಲಿದೆ ತಮಿಳಿನ ‘96’; ಗಣೇಶ್-ಪ್ರೀತಮ್ ಹೊಸ ಪ್ರಯತ್ನ
ಗಣೇಶ್​-ಪ್ರೀತಮ್​
  • News18
  • Last Updated: December 5, 2018, 12:42 PM IST
  • Share this:
‘ಚಮಕ್​’ ಯಶಸ್ಸಿನ ನಂತರ ‘ಗೋಲ್ಟನ್​ ಸ್ಟಾರ್​’ ಗಣೇಶ್​​ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ‘ಆರೆಂಜ್​’ ಚಿತ್ರ ಬಿಡುಗಡೆಗೆ ಸಿದ್ಧವಾದರೆ, ‘ಗಿಮಿಕ್​’ ಹಾಗೂ ‘ಗೀತಾ’ ಚಿತ್ರಗಳ ಶೂಟಿಂಗ್​ ಪ್ರಗತಿಯಲ್ಲಿದೆ. ಈ ಮಧ್ಯೆ ಅವರ ಖಾತೆಗೆ ಹೊಸ ಸಿನಿಮಾವೊಂದು ಸೇರ್ಪಡೆಯಾಗಿದೆ. ಆ ಚಿತ್ರದ ಹೆಸರು ‘99’!

ಇತ್ತೀಚೆಗೆ ತಮಿಳಿನಲ್ಲಿ ತೆರೆಕಂಡ ವಿಜಯ್​ ಸೇತುಪತಿ ಹಾಗೂ ತ್ರಿಶಾ ನಟನೆಯ ‘96’ ಚಿತ್ರ ಸೂಪರ್ ಹಿಟ್​ ಆಗಿತ್ತು. ವಿಜಯ್​ ಸೇತುಪತಿ-ತ್ರಿಶಾ ನಟನೆ, ಸಿನಿಮಾದ ಹಾಡು, ಚಿತ್ರಕಥೆ ಎಲ್ಲವೂ ಚಿತ್ರಕ್ಕೆ ಪ್ಲಸ್​​ ಪಾಯಿಂಟ್​ ಆಗಿತ್ತು. ಈಗ ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್​ ಮಾಡುತ್ತಿದ್ದಾರೆ ನಿರ್ದೇಶಕ ಪ್ರೀತಮ್​ ಗುಬ್ಬಿ. ತಮಿಳಿನಲ್ಲಿ ವಿಜಯ್​ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಗಣೇಶ್​​ ನಿರ್ವಹಿಸಲಿದ್ದಾರೆ. ಇದಕ್ಕೆ ‘99’ ಎನ್ನುವ ಶೀರ್ಷಿಕೆ ಇಡಲಾಗಿದೆ.

ಪ್ರೀತಮ್​ ಗುಬ್ಬಿ ಈವರೆಗೆ 9 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ರಿಮೇಕ್​ ಪ್ರಯತ್ನಕ್ಕೆ ಮುಂದಾಗಿದ್ದಾರೆ. ‘ತಮಿಳಿನಲ್ಲಿ ‘96’ ಸಿನಿಮಾ ನೋಡಿದಮೇಲೆ ನಾನು ರಿಮೇಕ್​ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದೆ. ಈ ಚಿತ್ರಕ್ಕೆ ಗಣೇಶ್​ ಸೂಕ್ತ ಎನಿಸಿತು. ಗಣೇಶ್​ ಕೂಡ ಚಿತ್ರ ನೋಡಿ ಇಷ್ಟಪಟ್ಟರು. ಹಾಗಾಗಿ ನಾನು ಈ ಪ್ರಯತ್ನಕ್ಕೆ ಮುಂದಾದೆ’ ಎನ್ನುತ್ತಾರೆ ಪ್ರೀತಮ್​.

ಇದನ್ನೂ ಓದಿ: 'ಕೆಜಿಎಫ್​‘ ಹಾಡಿನಲ್ಲಿ ಹಿಂದಿ ಹೇರಿಕೆ!; ಟ್ವಿಟ್ಟರ್​ನಲ್ಲಿ ಭುಗಿಲೆದ್ದ ಆಕ್ರೋಶ

ಇನ್ನು ಈ ಚಿತ್ರಕ್ಕೆ ‘99’ ಎನ್ನುವ ಶೀರ್ಷಿಕೆ ಇಡುವುದರ ಹಿಂದೆ ಒಂದು ಅಚ್ಚರಿಯ ವಿಚಾರವಿದೆ. ಅದೇನೆಂದರೆ, 1999ರಿಂದ ಪ್ರೀತಮ್​ ಹಾಗೂ ಗಣೇಶ್​ ಗೆಳೆತನ ಆರಂಭವಾಯಿತಂತೆ. ಹಾಗಾಗಿ ಈ ಶೀರ್ಷಿಕೆ ಇಡಲಾಗಿದೆ. ಸದ್ಯ ಚಿತ್ರದ ನಾಯಕಿಯ ಆಯ್ಕೆ ಇನ್ನಷ್ಟೇ ಅಂತಿಮವಾಗಬೇಕಿದೆ.

ಗಣೇಶ್​ ಅಭಿನಯದ ‘ಮುಂಗಾರು ಮಳೆ’ ಚಿತ್ರದಲ್ಲಿ ಕ್ಲೈಮ್ಯಾಕ್ಸ್​​ನಲ್ಲಿ ನಾಯಕನಿಗೆ ನಾಯಕಿ ಸಿಗುವುದಿಲ್ಲ. ಗಣೇಶ್​ ಈ ಚಿತ್ರದ ಮೂಲಕ ಕ್ಲಿಕ್​ ಆದರು. ನಂತರ ಅದೇ ಮಾದರಿಯ ಪ್ರಯತ್ನಗಳು ನಡೆದವು. ಈಗ ‘99’ ಅದಕ್ಕೆ ಹೊಸ ಸೇರ್ಪಡೆಯಾಗಲಿದೆ. ಹೊಸ ವರ್ಷದ ಆರಂಭದಿಂದ ಚಿತ್ರದ ಶೂಟಿಂಗ್​ ಆರಂಭಗೊಳ್ಳಲಿದೆ. ರಾಮು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅರ್ಜುನ್​ ಜನ್ಯ ಸಂಗೀತ ಸಂಯೋಜನೆ ಇದೆ. ಮಾರ್ಚ್​ ವೇಳೆಗೆ ಸಿನಿಮಾ ತೆರೆಗೆ ತರಬೇಕು ಎನ್ನುವ ಯೋಚನೆ ನಿರ್ದೇಶಕರದ್ದು.

ಇದನ್ನೂ ಓದಿ: ಫೋರ್ಬ್ಸ್ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹ್ಯಾಟ್ರಿಕ್; ಈ ಬಾರಿಯು ಅಗ್ರಸ್ಥಾನ ಉಳಿಸಿಕೊಂಡ ಸಲ್ಲು
First published: December 5, 2018, 12:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading