ಪಾಕಿಸ್ತಾನದವರಂತೆ ನಟಿ ತಮನ್ನಾ ಭಾಟಿಯಾ ಗೊತ್ತಾ ನಿಮಗೆ?

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಪಾಕಿಸ್ತಾನದವರಂತೆ. ಹೀಗೆಂದು ಹೇಳಿದ್ದು ನಾವಲ್ಲ. ಈ ಸುದ್ದಿ ಟಾಲಿವುಡ್​ ತುಂಬೆಲ್ಲ ಈಗ ಗುಲ್ಲಾಗಿದೆ.

Anitha E | news18
Updated:February 1, 2019, 6:02 PM IST
ಪಾಕಿಸ್ತಾನದವರಂತೆ ನಟಿ ತಮನ್ನಾ ಭಾಟಿಯಾ ಗೊತ್ತಾ ನಿಮಗೆ?
ನಟಿ ತಮನ್ನಾ ಭಾಟಿಯಾ
Anitha E | news18
Updated: February 1, 2019, 6:02 PM IST
ಮಿಲ್ಕಿ ಬ್ಯೂಟಿ ತಮನ್ನಾಗೆ 'ಬಾಹುಬಲಿ' ನಂತರ ಸರಿಯಾದ ಹಿಟ್​ ಸಿನಿಮಾ ಸಿಗಲೇ ಇಲ್ಲ. ಆದರೆ ಇತ್ತೀಚೆಗೆ ತೆರೆಕಂಡ 'ಎಫ್​ 5' ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು, ಇದು ತಮನ್ನಾಗೆ ಕೊಂಚ ಉಸಿರಾಡುವಂತೆ ಮಾಡಿದೆ. ಇನ್ನೇನು ತಮನ್ನಾ ಹಿಂದಿಯ 'ಕ್ವೀನ್​' ಸಿನಿಮಾದ ತೆಲುಗು ರಿಮೇಕ್​ 'ದಡ್​ ಇಸ್​ ಮಹಾಲಕ್ಷ್ಮಿ' ಸಿನಿಮಾದ್ಲಿ ಅಭಿನಯಿಸುತ್ತಿದ್ದು, ಅದು ಸಹ ತೆರೆಗಪ್ಪಳಿಸಲು ಸಿದ್ದವಾಗಿದೆ.  ಹೀಗಿರುವಾಗಲೇ ತಮನ್ನಾ ಕುರಿತ ಸತ್ಯವೊಂದು ಹೊರ ಬಿದ್ದಿದೆ.

ಇದನ್ನೂ ಓದಿ: ಟಾಲಿವುಡ್​ನ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್ಸ್​​ ಪಟ್ಟಿಯಲ್ಲಿ 'ಬಾಹುಬಲಿ' ಪ್ರಭಾಸ್​ಗೆ ಮೊದಲ ಸ್ಥಾನ..!

ಹೌದು, ಅದೇನೆಂದರೆ, ತಮನ್ನಾ ಪಾಕಿಸ್ತಾನದವರಂತೆ. ಹೀಗೆಂದು ಹೇಳಿದ್ದು ನಾವಲ್ಲ. ಇಡೀ ಟಾಲಿವುಡ್​ನಲ್ಲೇ ಈ ಸುದ್ದಿ ಗುಲ್ಲಾಗಿದೆ. ಅದ್ಕೂ ಕರಾಣವಿದೆ. ತಮನ್ನಾ ಅಭಿನಯಿಸುತ್ತಿರುವ ಹೊಸ ಸಿನಿಮಾದಲ್ಲಿ ಅವರು ಪಾಕಿಸ್ತಾನಿ ಸ್ಪೈ ಆಗಿ ಮಿಲ್ಕಿ ಅಭಿನಯಿಸುತ್ತಿದ್ದಾರಂತೆ.

ಗೋಪಿಚಂದ್​ ಹಾಗೂ ತಿರು ನಿರ್ದೇಶನದಲ್ಲಿ ನಿರ್ಮಾಣವಾಗಲಿರುವ ಸ್ಪೈ ತ್ರಿಲ್ಲರ್​ ಸಿನಿಮಾದಲ್ಲಿ ತಮನ್ನಾ ಪಾಕಿಸ್ತಾನಿ ಸ್ಪೈ ಪಾತ್ರಕ್ಕೆ ಓಕೆ ಹೇಳಿದ್ದಾರಂತೆ. 35 ಕೋಟಿ ಬಜೆಟ್​ನಲ್ಲಿ ಈ ಸಿನಿಮಾವನ್ನು ಅನಿಲ್​ ಸುಂಕರ್​ ನಿರ್ದೇಶಿಸುತ್ತಿದ್ದಾರೆ.

ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ'  ಸಿನಿಮಾದಲ್ಲೂ ತಮನ್ನಾಗೆ ವಿಶೇಷ ಪಾತ್ರವೊಂದು ಸಿಕ್ಕಿದ್ದು, ಜೊತೆಗೆ 'ಅಭಿನೇತ್ರಿ' ಸಿನಿಮಾದ ಸೀಕ್ವಲ್​ಗೂ ತಮನ್ನಾ ಓಕೆ ಅಂದಿದ್ದಾರಂತೆ.

First published:February 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ