ತಮನ್ನಾ ನಟನೆಯ 'ದಟ್​ ಇಸ್​ ಮಹಾಲಕ್ಷ್ಮೀ' ಚಿತ್ರಕ್ಕೆ ನಿರ್ದೇಶಕರ ಹೆಸರನ್ನೇ ಹಾಕಲ್ವಂತೆ!

ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್​ ಹಾಗೂ ಟೀಸರ್​ನಲ್ಲಿ ನಿರ್ದೇಶಕರು ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಸದ್ಯ ಈ ವಿಚಾರ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

Rajesh Duggumane | news18
Updated:February 3, 2019, 12:55 PM IST
ತಮನ್ನಾ ನಟನೆಯ 'ದಟ್​ ಇಸ್​ ಮಹಾಲಕ್ಷ್ಮೀ' ಚಿತ್ರಕ್ಕೆ ನಿರ್ದೇಶಕರ ಹೆಸರನ್ನೇ ಹಾಕಲ್ವಂತೆ!
ತಮನ್ನಾ
Rajesh Duggumane | news18
Updated: February 3, 2019, 12:55 PM IST
ಹಿಂದಿಯಲ್ಲಿ ತೆರೆಕಂಡು ಹಿಟ್​ ಆಗಿದ್ದ ‘ಕ್ವೀನ್​’ ಚಿತ್ರ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಹಾಗೂ ತಮಿಳಿನಲ್ಲಿ ರಮೇಶ್​ ಅರವಿಂದ್​ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಕನ್ನಡದಲ್ಲಿ ಪಾರೂಲ್​ ಯಾದವ್​ ಹಾಗೂ ತಮಿಳಿನಲ್ಲಿ ಕಾಜಲ್​ ಅಗರ್​ವಾಲ್​ ಬಣ್ಣ ಹಚ್ಚುತ್ತಿದ್ದಾರೆ. ತೆಲುಗಿನಲ್ಲಿ ‘ದಟ್​ ಈಸ್​ ಮಹಾಲಕ್ಷ್ಮೀ’ ಹೆಸರಿನಲ್ಲಿ ತೆರೆಕಾಣುತ್ತಿರುವ ಈ ಚಿತ್ರ ವಿವಾದಗಳನ್ನು ಸೃಷ್ಟಿಸುತ್ತಲೇ ಬರುತ್ತಿದೆ. ಲೇಟೆಸ್ಟ್​ ಮಾಹಿತಿ ಏನೆಂದರೆ, ‘…ಮಹಾಲಕ್ಷ್ಮೀ' ಚಿತ್ರಕ್ಕೆ ನಿರ್ದೇಶಕರ ಹೆಸರನ್ನು ಉಲ್ಲೇಖ ಮಾಡುವುದಿಲ್ಲವಂತೆ.

‘…ಮಹಾಲಕ್ಷ್ಮೀ' ಚಿತ್ರಕ್ಕೆ ಈ ಮೊದಲು ನೀಲಕಾಂತ್​ ನಿರ್ದೇಶನ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವರು ಚಿತ್ರದಿಂದ ಹಿಂದೆ ಸರಿದಿದ್ದರು. ಈ ವೇಳೆ ರಮೇಶ್​ ಅರವಿಂದ್​ ಈ ಚಿತ್ರವನ್ನೂ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಹಾಗಾಗಲಿಲ್ಲ. ಪ್ರಶಾಂತ್​ ವರ್ಮಾ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು.

ಹೀಗಿದ್ದರೂ, ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್​ ಹಾಗೂ ಟೀಸರ್​ನಲ್ಲಿ ನಿರ್ದೇಶಕರು ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಸದ್ಯ ಈ ವಿಚಾರ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಸಿನಿಮಾ ತೆರೆಕಾಣುವವ ವೇಳೆಗೂ ನಿರ್ದೇಶಕರ ಹೆಸರನ್ನು ಬಳಸದೇ ಇರಲು ನಿರ್ಧರಿಸಲಾಗಿದೆಯಂತೆ.

‘ಕ್ವೀನ್​’ ಚಿತ್ರದಲ್ಲಿ ಕಂಗನಾ ರಣಾವತ್​ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ: ಎಲ್ಲೆಲ್ಲೂ 'ನಟಸಾರ್ವಭೌಮ'ನ ಕ್ರೇಜ್​; ಊರ್ವಶಿಯಲ್ಲಿ ಮೊದಲ ಶೋನ ಎಲ್ಲಾ ಟಿಕೆಟ್​ ಖರೀದಿಸಿದ ಅಭಿಮಾನಿ ಬಳಗ!

First published:February 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626