ಕೆಜಿಎಫ್ ತಂಡ ಕೊಂಡಾಡಿದ ಮಿಲ್ಕಿ ಬ್ಯೂಟಿ ತಮನ್ನಾ

news18
Updated:August 9, 2018, 7:03 PM IST
ಕೆಜಿಎಫ್ ತಂಡ ಕೊಂಡಾಡಿದ ಮಿಲ್ಕಿ ಬ್ಯೂಟಿ ತಮನ್ನಾ
news18
Updated: August 9, 2018, 7:03 PM IST
ನ್ಯೂಸ್ 18 ಕನ್ನಡ

ಕೆಜಿಎಫ್ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್​ ಜತೆ ಬೊಂಬಾಟಾಗಿ ಹೆಜ್ಜೆ ಹಾಕಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ದಿಲ್ ಖುಷ್ ಆಗಿದ್ದಾರೆ. ಕೆಜಿಎಫ್ ಚಿತ್ರತಂಡ ತಮ್ಮನ್ನ ಟ್ವೀಟ್ ಮಾಡಿದ್ದ ರೀತಿಯನ್ನ ಇಷ್ಟ ಪಟ್ಟಿದ್ದಾರೆ.

ಈ ಕೆ.ಜಿ.ಎಫ್‌ ಚಿತ್ರತಂಡವನ್ನ ಕೊಂಡಾಡಿದ್ದಾರೆ. ಜೊತೆಗೆ ಈ ಸಿನಿಮಾ ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ರಿಲೀಸ್‌ ಆಗ್ತಿದ್ದು, ಸದ್ಯದಲ್ಲೇ ನಿಮ್ಮುಂದೆ ಬರಲಿದೆ ಅಂತ ಟ್ವೀಟ್‌ ಮಾಡಿದ್ದಾರೆ.

ತಮನ್ನಾ ಈ ಹಿಂದೆ ನಟ ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಸಿನಿಮಾದ ಹಾಡಿನಲ್ಲಿ ಅಭಿನಯಿಸಿದ್ದರು. ಈಗ ಯಶ್ ಜೊತೆ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎರಡನೇ ಬಾರಿಗೆ ಅಭಿನಯಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾವನ್ನು ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿದೆ.
Loading...

ಕೆಜಿಎಫ್ ಸಿನಿಮಾದಲ್ಲಿ ಹಳೆಯ ಹಾಡು ಜೋಕೆ ನಾನು ಬಳ್ಳಿಯ ಮಿಂಚು ಹಾಡಿಗೆ ತಮನ್ನಾ ಸೊಂಟ ಬಳುಕಿಸಿದ್ದಾರೆ. 1970ರಲ್ಲಿ ಬಿಡುಗಡೆಯಾದ ಪರೋಪಕಾರಿ ಸಿನಿಮಾದಲ್ಲಿ ಈ ಹಾಡು ಇದೆ. ಈ ಹಾಡು ಇಂದಿಗೂ ಟ್ರೆಂಡ್ ಆಗಿದ್ದು, ಕೆಜಿಎಫ್ ಸಿನಿಮಾದಲ್ಲಿ ರೀ-ಕ್ರಿಯೇಟ್ ಮಾಡಲಾಗುತ್ತಿದೆ. ಈ ಹಾಡಿಗೆ ಯಶ್ ಮತ್ತು ತಮನ್ನಾ ಜೊತೆಯಾಗಿ ಡ್ಯಾನ್ಸ್ ಮಾಡಿದ್ದಾರೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ