'ಬಾಹುಬಲಿ' ಚಿತ್ರ ನಾಯಕಿ ತಮನ್ನಾರ ನೃತ್ಯದ ವಿಡಿಯೋ ವೈರಲ್

news18
Updated:May 16, 2018, 7:32 PM IST
'ಬಾಹುಬಲಿ' ಚಿತ್ರ ನಾಯಕಿ ತಮನ್ನಾರ ನೃತ್ಯದ ವಿಡಿಯೋ ವೈರಲ್
news18
Updated: May 16, 2018, 7:32 PM IST
ನ್ಯೂಸ್ 18 ಕನ್ನಡ

ದಕ್ಷಿಣ ಭಾರತ ಚಿತ್ರರಂಗದ ಹಾಲು ಬಿಳುಪಿನ ಚೆಲುವೆ ತಮನ್ನಾ ಭಾಟಿಯಾ ಮಾಡಿರುವ ನೃತ್ಯದ ವಿಡಿಯೋ ಸಖತ್ ವೈರಲ್ ಆಗಿದೆ. ಡಿಜೆ ಸ್ನ್ಯಾಕ್ ಸಂಯೋಜಿಸಿರುವ 'ಮೆಗೆಂಥ ರಿದಿಂ...' ಗೀತೆಗೆ 'ಬಾಹುಬಲಿ' ಚಿತ್ರದ ನಟಿ ಮೈ ಬಳುಕಿಸಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಎರಡು ದಿನಗಳ ಹಿಂದೆಯಷ್ಟೇ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದರು.

ನೃತ್ಯದ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು, ಈಗಾಗಲೇ 65ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ತಮ್ಮ ಸುಂದರ ಮೈಮಾಟದಿಂದ ಮತ್ತು ಮನೋಜ್ಞ ಅಭಿನಯದಿಂದ ಬಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್​ನಲ್ಲಿ ಮೋಡಿ ಮಾಡಿರುವ ತಮನ್ನಾ, ನಟ ಚಿರಂಜೀವಿ ಹಾಗೂ ಅಮಿತಾಭ್ ಬಚ್ಚನ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ 'ಸೈರಾ ನರಸಿಂಹ ರೆಡ್ಡಿ' ಎಂಬ ಐತಿಹಾಸಿಕ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.First published:May 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ