• Home
  • »
  • News
  • »
  • entertainment
  • »
  • Tamannaah Bhatia: ಮಲಯಾಳಂ ಚಿತ್ರದಲ್ಲಿ ನಟಿ ತಮನ್ನಾ; ನಟ ದಿಲೀಪ್‌ಗೆ ಜೋಡಿಯಾದ ಮಿಲ್ಕಿ ಬ್ಯೂಟಿ

Tamannaah Bhatia: ಮಲಯಾಳಂ ಚಿತ್ರದಲ್ಲಿ ನಟಿ ತಮನ್ನಾ; ನಟ ದಿಲೀಪ್‌ಗೆ ಜೋಡಿಯಾದ ಮಿಲ್ಕಿ ಬ್ಯೂಟಿ

ಮಾಲಿವುಡ್​ಗೆ ತಮನ್ನಾ ಎಂಟ್ರಿ

ಮಾಲಿವುಡ್​ಗೆ ತಮನ್ನಾ ಎಂಟ್ರಿ

ಅರುಣ್ ಗೋಪಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಾಂದ್ರಾ ಚಿತ್ರದಲ್ಲಿ ತಮನ್ನಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಮಾಲಿವುಡ್​ಗೆ ಎಂಟ್ರಿ ಕೊಡ್ತಿದ್ದಾರೆ.

  • Share this:

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಚಿತ್ರರಂಗದಲ್ಲಿ ಉತ್ತಮ ಬೇಡಿಕೆ ಇರುವ ನಟಿಯಾಗಿದ್ದಾರೆ. ಟಾಲಿವುಡ್ (Tollywood), ಬಾಲಿವುಡ್, ಕಾಲಿವುಡ್‌ನ ಬೇಡಿಕೆಯ ನಟಿ ಎಂದೆನಿಸಿರುವ ತಮನ್ನಾ ಇದೀಗ ಮಾಲಿವುಡ್‌ಗೂ ಕೂಡ ಕಾಲಿಟ್ಟಿದ್ದಾರೆ. ದಿಲೀಪ್‌ರೊಂದಿಗೆ (Dileep) ಬಣ್ಣ ಹಚ್ಚುತ್ತಿರುವ ನಟಿ ಮಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಬಾಂದ್ರಾ  ಚಿತ್ರದಲ್ಲಿ ತಮನ್ನಾ ದಿಲೀಪ್‌ಗೆ ನಾಯಕಿಯಾಗಿದ್ದಾರೆ. ಸಪ್ಟೆಂಬರ್ 2022 ರಲ್ಲಿ ಚಿತ್ರದ ಮುಹೂರ್ತ ಪೂಜೆಯ ನಂತರ ಚಿತ್ರ ನಿರ್ಮಾಪಕರು (Producer) ಚಿತ್ರದ ಪ್ರೊಡಕ್ಷನ್ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನು ಸುದ್ದಿ ಮಾಧ್ಯಮಕ್ಕೆ ದೊರೆತಿರುವ ವರದಿಯ ಪ್ರಕಾರ ಶೂಟಿಂಗ್ ಸಲುವಾಗಿ ತಮನ್ನಾ ಜನವರಿ 20 ರಂದು ಕೊಚ್ಚಿಗೆ ಪ್ರಯಾಣಿಸಲಿದ್ದಾರೆ ಎಂಬುದು ತಿಳಿದುಬಂದಿದೆ. ಅರುಣ್ ಗೋಪಿ ನಿರ್ದೇಶನದಲ್ಲಿ (Director) ಮೂಡಿಬಂದಿರುವ ಬಾಂದ್ರಾ ಚಿತ್ರದಲ್ಲಿ ತಮನ್ನಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.


ಮುಂಬೈನಲ್ಲಿ ಶೂಟಿಂಗ್


ಬಾಂದ್ರಾ ಚಿತ್ರದ ಎಂಟು ದಿನಗಳ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ನಟಿ ತಮನ್ನಾ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾರೆ. ರಾಜಕುಮಾರಿ ಕಿಂಡ ಪಾತ್ರದಲ್ಲಿ ತಮನ್ನಾ ಮಿಂಚಲಿದ್ದು ಚಿತ್ರದಲ್ಲಿ ಆಕೆ ಮಲಯಾಳಂ ಹಾಗೂ ಹಿಂದಿ ಎರಡೂ ಭಾಷೆಯಲ್ಲಿ ಮಾತನಾಡುತ್ತಾರೆ.


ಚಿತ್ರ ತಂಡ ಮುಂಬೈನಲ್ಲಿ ಶೂಟಿಂಗ್ ಮಾಡುವ ಯೋಜನೆಯನ್ನು ಕೂಡ ಹಮ್ಮಿಕೊಂಡಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.


ಎರಡನೇ ಬಾರಿಗೆ ಮೋಡಿ ಮಾಡಲಿರುವ ಅರುಣ್ ದಿಲೀಪ್ ಜೋಡಿ


ಅರುಣ್ 2017 ರಲ್ಲಿ ದಿಲೀಪ್ ನಟಿಸಿದ್ದ ಬ್ಲಾಕ್‌ಬಸ್ಟರ್ ಚಿತ್ರ ರಾಮಲೀಲಾವನ್ನು ನಿರ್ದೇಶಿಸಿದ್ದರು. ಇದೀಗ ಈ ಜೋಡಿ ಪುನಃ ಎರಡನೇ ಬಾರಿ ಜೊತೆಯಾಗಿದೆ. ಚಿತ್ರವು ಆ್ಯಕ್ಷನ್ ಹಾಗೂ ವಿನೋದಮಯವಾಗಿದೆ. ಚಿತ್ರದ ರಾಜಸ್ಥಾನ ಶೂಟಿಂಗ್ ಡಿಸೆಂಬರ್‌ನಲ್ಲಿ ಕೊನೆಯಾಗಲಿದೆ.


ದಿಲೀಪ್ ಹಾಗೂ ತಮನ್ನಾರ ಫಸ್ಟ್ ಲುಕ್ ಚಿತ್ರ ವೀಕ್ಷಕರಲ್ಲಿ ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರದ ಸಂಗೀತ ಸಂಯೋಜನೆಯನ್ನು ಸ್ಯಾಮ್ ಸಿಎಸ್ ಮಾಡಿದ್ದು ಸಿನಿಮಾಟೊಗ್ರಫಿಯನ್ನು ಶಾಜಿ ಕುಮಾರ್ ಮಾಡಲಿದ್ದಾರೆ.


ತಮನ್ನಾ ಬಿಡುಗಡೆಯ ಚಿತ್ರಗಳು


2023 ರಲ್ಲಿ ತಮನ್ನಾ ಅಭಿನಯದ ಸಾಲು ಸಾಲು ಚಿತ್ರಗಳು ಬಿಡುಗಡೆಗೊಳ್ಳಲಿವೆ. ಅಮೆಜಾನ್ ಪ್ರೈಮ್‌ನಲ್ಲಿ ಜೀ ಕರ್ದಾ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಲಸ್ಟ್ ಸ್ಟೋರೀಸ್ ಬಿಡುಗಡೆಗೆ ಸಜ್ಜಾಗಿವೆ.


ಕೊನೆಯದಾಗಿ ಬಬ್ಲಿ ಬೌನ್ಸರ್‌ನಲ್ಲಿ ಬಣ್ಣ ಹಚ್ಚಿದ್ದ ತಮನ್ನಾ ದಕ್ಷಿಣದ ಚಿತ್ರಗಳು ಹಾಗೂ ಹಿಂದಿ ಚಿತ್ರಗಳೆರಡರಲ್ಲೂ ಬಣ್ಣ ಹಚ್ಚುವ ಮೂಲಕ ಎರಡೂ ಕಡೆ ಉತ್ತಮ ಫ್ಯಾನ್ ಬಳಗವನ್ನು ಹೊಂದಿದ್ದಾರೆ.


ಕನ್ನಡದ ಲವ್ ಮೋಕ್‌ಟೈಲ್ ಚಿತ್ರದ ರಿಮೇಕ್ ಆಗಿರುವ ಗುರ್ತುಂದಾ ಸೀತಾಕಲಮ್ ಕೊನೆಯ ಬಿಡುಗಡೆಯ ಚಿತ್ರವೆಂದೆನಿಸಿದೆ.


ಚಿರಂಜೀವಿ ಹಾಗೂ ಕೀರ್ತಿ ಸುರೇಶ್ ಅಭಿನಯದ ಭೋಲಾ ಶಂಕರ್ ಚಿತ್ರದಲ್ಲಿ ತಮನ್ನಾ ನಟಿಸುತ್ತಿದ್ದಾರೆ. ಚಿತ್ರವನ್ನು ಮೆಹೆರ್ ರಮೇಶ್ ನಿರ್ದೇಶಿಸಿದ್ದು ಎಕೆ ಎಂಟಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರ ತೆರೆಕಾಣಲಿದೆ.


ಕೇನ್ಸ್ ಜಾಗತಿಕ ಗರಿಮೆ


ನಟಿ ಮೇ 2022 ರಲ್ಲಿ 75 ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದು ತಮ್ಮ ಗ್ಲಾಮರಸ್ ಲುಕ್‌ನಿಂದ ನೆರೆದವರ ಮನಸೂರೆಗೊಂಡಿದ್ದರು. ಐದು ಅತ್ಯದ್ಭುತ ದಿರಿಸುಗಳನ್ನು ಧರಿಸಿ ವೈಭವೋಪೇತ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದಾರೆ.


ತಮನ್ನಾ ವಿಜಯ್ ವರ್ಮಾ ಡೇಟಿಂಗ್ ನಡೆಸುತ್ತಿದ್ದಾರೆಯೇ?


ತಮ್ಮ ವೃತ್ತಿ ಕ್ಷೇತ್ರದಲ್ಲಿ ತಮನ್ನಾ ಯಶಸ್ಸನ್ನು ಅನುಭವಿಸುತ್ತಿರುವ ಸಮಯದಲ್ಲಿಯೇ ಡಾರ್ಲಿಂಗ್ಸ್ ನಟ ವಿಜಯ್ ವರ್ಮಾ ಜೊತೆಗೆ ನಟಿ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ರೂಮರ್ ಕೇಳಿಬರುತ್ತಿದೆ.


ನಟ ವಿಜಯ್ ವರ್ಮಾ ಜೊತೆಗೆ ನಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೀಗ ಗಾಢವಾಗಿ ಹಬ್ಬಿದೆ. ಗೋವಾದ ಹೊಸ ವರ್ಷದ ಪಾರ್ಟಿಯಲ್ಲಿ ಇಬ್ಬರೂ ಕಂಡುಬಂದಿದ್ದರು.


ಅದಾಗ್ಯೂ ಇಬ್ಬರೂ ತಮ್ಮ ಡೇಟಿಂಗ್ ಸುದ್ದಿಯ ಕುರಿತು ಮಾಹಿತಿ ನೀಡಿಲ್ಲ. ಆದರೆ ಗೋವಾದ ಪಾರ್ಟಿಯಲ್ಲಿ ಇಬ್ಬರೂ ನಿಕಟವಾಗಿದ್ದಾರೆ ಎಂಬುದು ಕೆಲವೊಂದು ವಿಡಿಯೋಗಳಿಂದ ದೃಢವಾಗಿದೆ.

Published by:ಪಾವನ ಎಚ್ ಎಸ್
First published: