ಮಿಲ್ಕಿ ಬ್ಯೂಟಿ, ಬಾಹುಬಲಿ ಸುಂದರಿ ತಮನ್ನಾ ಭಾಟಿಯಾ ಬಹುಭಾಷಾ ನಟಿ. ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡದಲ್ಲಿ ಅಭಿನಯಿಸಿರುವ ಈ ನಟಿ ಯಾವುದೇ ಸಿನಿಮಾದಲ್ಲಿ ಅಭಿನಯಿಸಿದರೂ ತೆರೆ ಮೇಲೆ ಯಾರಿಗೂ ಕಿಸ್ ಮಾಡೋದಿಲ್ಲ ಅಂತ ಮೊಲದೇ ಷರತ್ತು ಹಾಕಿರುತ್ತಾರಂತೆ.
ಇದನ್ನೂ ಓದಿ: Yajamana Movie Review: ಕಾವೇರಿ ಕಾಯುವ ದಾಸ ಎಲ್ಲರಿಗೂ ಖಾಸ ಖಾಸ: ಸಿನಿಮಾ ನೋಡಿದವ ಹೇಳೋದು ನಾನೇ 'ಯಜಮಾನ'..!
ಆದರೆ ಅವರ 'No Kissing' ಪಾಲಿಸಿಯನ್ನು ಅವರು ಬಾಲಿವುಡ್ನ ಒಬ್ಬ ನಟನಿಗಾಗಿ ಮಾತ್ರ ಕೈ ಬಿಡುತ್ತಾರಂತೆ. ಹೀಗೆಂದು ಅವರ ಈ ರಹಸ್ಯವನ್ನು ಖುದ್ದು ತಮನ್ನಾ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
ಇತ್ತೀಚೆಗೆ ನಡೆದ ತಮಿಳು ಫಿಲ್ಮ್ಫೇರ್ನಲ್ಲಿ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ತಮನ್ನಾ. ಸಾಮಾನ್ಯವಾಗಿ ತೆರೆ ಮೇಲೆ ಅವರು ಕಿಸ್ ಮಾಡುವುದಿಲ್ಲ ಎಂದು ಸಿನಿಮಾಗೆ ಸಹಿ ಮಾಡುವ ಮೊದಲೇ ಒಪ್ಪಂದಲ್ಲಿ ಷರತ್ತು ಹಾಕಿರುತ್ತಾರಂತೆ. ಆದರೆ ಅವರು ಸಹಾ ಸ್ನೇಹಿತರೊಂದಿಗೆ ಈ ವಿಷಯವಾಗಿ ಮಾತನಾಡುವಾಗ ಹೃತಿಕ್ ನಾಯಕನಾದರೆ ನಾನು ಕಿಸ್ ಮಾಡಲು ಸಿದ್ದ ಎಂದು ತಮಾಷೆ ಮಾಡುತ್ತಾರಂತೆ. ಆದರೆ ಅದನ್ನು ನಿಜವಾಗಿಯೂ ಮಾಡಲು ಸಿದ್ದ ಎಂದು ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಾಡಿನ ರಕ್ಷಣೆಗೆ ಟೊಂಕ ಕಟ್ಟಿದ ಡಿಬಾಸ್ : ಸಸಿ ನೆಡಲು ದರ್ಶನ್ ಮನವಿ
ತಮನ್ನಾಗೆ ಹೃತಿಕ್ ಎಂದರೆ ತುಂಬಾ ಇಷ್ಟವಂತೆ. ಹೀಗಿಗಾಯೆ ಒಮ್ಮೆ ಹೃತಿಕ್ರನ್ನು ಭೇಟಿಯಾಗಿದ್ದಾಗ ನಾನು ಸಂಪೂರ್ಣವಾಗಿ ಒಬ್ಬ ಅಭಿಮಾನಿಯಾಗಿ ಅವರೊಂದಿಗೆ ಕಾಲಕಳೆದಿದ್ದೆ ಎಂದು ತಮನ್ನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ