Tamannaah Bhatia: ಫಲಭರಿತ ವರ್ಕೌಟ್​ ಮಾಡುವುದು ಹೇಗೆಂದು ತೋರಿಸಿ ಕೊಟ್ಟ ತಮನ್ನಾ ..!

ಮಿಲ್ಕಿ ಬ್ಯೂಟಿ ತಮನ್ನಾ

ಮಿಲ್ಕಿ ಬ್ಯೂಟಿ ತಮನ್ನಾ

Tamannaah bhatia New Style of Workout: ಟಾಲಿವುಡ್​ ಮಿಲ್ಕಿ ಬ್ಯೂಟಿ ತಮನ್ನಾ ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಆರಾಮಾಗಿರಲು ಸಮಯ ಸಿಕ್ತು ಅಂತ ಮಿಲ್ಕಿ ಬ್ಯೂಟಿ ಮನೆಯಲ್ಲಿ ಹಾಯಾಗಿ ಕಾಲ ಕಳೆಯುತ್ತಿಲ್ಲ. ಉಪಕರಣಗಳು ಇಲ್ಲ ಅಂತ ಕಾರಣ ಕೊಡದೆ ಅದಕ್ಕಾಗಿ ಹೊಸ ಹೊಸ ದಾರಿ ಹುಡುಕಿಕೊಂಡಿದ್ದಾರೆ. 

ಮುಂದೆ ಓದಿ ...
  • Share this:

ತಮನ್ನಾ ಭಾಟಿಯಾ ಮನೆಯಲ್ಲಿ ನಿತ್ಯ ತಮ್ಮ ಫಿಟ್ನೆಸ್​ ಕಾಯ್ದುಕೊಳ್ಳುವಷ್ಟು ವರ್ಕೌಟ್​ ಮಾಡುತ್ತಿದ್ದಾರೆ. ವ್ಯಾಯಾಮ, ಯೋಗಾಭ್ಯಾಸ ಅಂತ ಬೆವರಿಳಿಸುತ್ತಿದ್ದಾರೆ. ಅದರಲ್ಲೂ ಮನೆಯಲ್ಲಿ ವ್ಯಾಯಾಮ ಮಾಡಲು ಹೊಸ ವಿಧಾನಗಳನ್ನು ಕಂಡುಕೊಂಡಿದ್ದಾರೆ.  


ಟಾಲಿವುಡ್​ ಮಿಲ್ಕಿ ಬ್ಯೂಟಿ ತಮನ್ನಾ ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಆರಾಮಾಗಿರಲು ಸಮಯ ಸಿಕ್ತು ಅಂತ ಮಿಲ್ಕಿ ಬ್ಯೂಟಿ ಮನೆಯಲ್ಲಿ ಹಾಯಾಗಿ ಕಾಲ ಕಳೆಯುತ್ತಿಲ್ಲ. ಉಪಕರಣಗಳು ಇಲ್ಲ ಅಂತ ಕಾರಣ ಕೊಡದೆ ಅದಕ್ಕಾಗಿ ಹೊಸ ಹೊಸ ದಾರಿ ಹುಡುಕಿಕೊಂಡಿದ್ದಾರೆ.




ಮನೆಯಲ್ಲಿ ಹೇಗೆ ಫಲಭರಿತ ವ್ಯಾಯಾಮ ಮಾಡೋದು ಅಂತ ಹೊಸ ವಿಧಾನ ಹೇಳಿ ಕೊಟ್ಟಿದ್ದಾರೆ. ಹೌದು, ಖಾಲಿ ಬಕೆಟ್​ಗೆ ಭಾರವಾದ ಹಣ್ಣುಗಳನ್ನು ತುಂಬಿ ಹೇಗೆ ತೂಕ ಎತ್ತುವ ಕಸರತ್ತು ಮಾಡುತ್ತಿದ್ದಾರೆ ನೋಡಿ. ಅದಕ್ಕೆ ಅವರು ಕೊಟ್ಟಿರುವ ಹೆಸರು ಫ್ರೂಟ್​ಫುಲ್ ವರ್ಕೌಟ್.




ನಟಿಯರಿಗೆ ದೇಹದ ಆಕಾರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಈ ಕಾರಣದಿಂದಲೇ ತಮನ್ನಾ ಸಹ ತಮ್ಮ ತರಬೇತುದಾರನಿಂದ ಆನ್​ಲೈನ್​ನಲ್ಲಿ ಹೊಸ ಹೊಸ ವ್ಯಾಯಾಮ ಮಾಡುವುದನ್ನು ಕಲಿಯುತ್ತಿದ್ದಾರೆ.




ಆನ್​ಲೈನ್​ನಲ್ಲಿ ಕ್ಲಾಸ್​ ತೆಗೆದುಕೊಳ್ಳುವಾಗ ಅವರಿಗೆ ಸಾಕಷ್ಟು ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತಿವೆ. ಅವುಗಳಿಗೂ ಅವರ ಬಳಿ ಪರಿಹಾರವಿದೆ. ಟಿಶು ಬಾಕ್ಸ್​ ಹಾಗೂ ಇತರೆ ವಸ್ತುಗಳನ್ನು ಮೊಬೈಲ್​ ಇಡುವ ಸ್ಟ್ಯಾಂಡ್​ ಆಗಿ ಬಳಸಿಕೊಳ್ಳುತ್ತಿದ್ದಾರೆ.


Adah Sharma: ಹೊಸ ಚಾಲೆಂಜ್​ ಕೊಟ್ಟ ಅದಾ ಶರ್ಮಾ: ಹಾಟ್​ ಫೋಟೋಗಳು ವೈರಲ್​..!


Published by:Anitha E
First published: