News18 India World Cup 2019

ತಮನ್ನಾ ಎಷ್ಟು ಮದುವೆಯಾಗಿದ್ದಾರೆ: ಇದಕ್ಕೆ ಅವರೇ ಕೊಟ್ಟಿದ್ದಾರೆ ಉತ್ತರ...!

news18
Updated:July 28, 2018, 5:11 PM IST
ತಮನ್ನಾ ಎಷ್ಟು ಮದುವೆಯಾಗಿದ್ದಾರೆ: ಇದಕ್ಕೆ ಅವರೇ ಕೊಟ್ಟಿದ್ದಾರೆ ಉತ್ತರ...!
news18
Updated: July 28, 2018, 5:11 PM IST
ನ್ಯೂಸ್​ 18 ಕನ್ನಡ 

ಬಹು ಭಾಷಾ ನಟಿ ತಮನ್ನ ಸದ್ಯ ಬಹು ಬೇಡಿಕೆಯಲ್ಲಿರುವ ನಟಿ. ಹೀಗಾಗಿಯೇ ಅದೆಷ್ಟೋ ಜನ ಇವರಿಗೆ ಫಿದಾ ಆಗಿದ್ದಾರೆ.ಆದರೆ ತಮ್ಮನ್ನಾ ಮಾತ್ರ ಅಭಿಮಾನಿಗಳಿಗೆ ಒಂದು ಮಾತು ತಿಳಿಸದೇ ಮದುವೆ ಆಗಿದ್ದಾರೆ. ಅರೇ ಹೌದಾ..? ಯಾಕಷ್ಟು ರಹಸ್ಯವಾಗಿ ಮದುವೆ ಆದರು ಅಂದರಾ? ಇಲ್ಲಿದೆ ಈ ಕುರಿತ ಒಂದು ಆಸಕ್ತಿಕರ ವರದಿ.

ಹೇಳಿ ಕೇಳಿ ಕಲರ್ ಫುಲ್ ದುನಿಯಾದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿರೊ ಪತಂಗ ಈ ಬ್ಯೂಟಿ. ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಬ್ಯಾಕ್ ಟು ಬ್ಯಾಕ್ ಬ್ಯುಸಿಯಾಗಿರೋ ಈ ಮಿಲ್ಕಿ ಬ್ಯೂಟಿ ತಾವಾಯಿತು, ತಮ್ಮ ಕೆಲಸ ಆಯಿತು ಅಂತ ಇರೋರು. ಇತ್ತೀಚೆಗೆ ಅಂದರೆ ಕೆಲ ದಿನಗಳಿಂದ ತಮನ್ನಾ ಮದುವೆ ಆಗಿದ್ದಾರೆ ಅಂತ ಮಾಯಾಬಜಾರ್ ಫುಲ್ ಗುಲ್ಲೊಡೆಯುತ್ತಿದೆ. ಅಷ್ಟಕ್ಕು ಮಿಲ್ಕಿ ಬ್ಯೂಟಿ ಮದುವೆ ಆಗಿರೋದಾದರು ನಿಜಾನಾ? ನಿಜಾ ಆಗಿದ್ದರೆ ಯಾರನ್ನ ವರಿಸಿದ್ದಾರೆ? ರಹಸ್ಯವಾಗಿ ಮದುವೆಯಾಗಿದ್ದಾರೆ ಅಂತ ಹುಡುಕುತ್ತಾ ಹೋದಾಗ ಗೊತ್ತಾದ ಅಸಲಿಯತ್ತೆ ಬೇರೆ.

ಸಿನಿಮಾ ನಟ ನಟಿಯರು ಅದೇನೆ ಮಾಡಿದರೂ ಸುದ್ದಿಯಾಗುತ್ತೆ. ಅವರು ಏನೂ ಮಾಡದೇ ಇದ್ದರೂ ಕೂಡ ಜನ ಸುಮ್ಮನಿರುವುದಿಲ್ಲ. ಹೀಗಾಯಿತು, ಹಾಗಾಯಿತು ಅಂತ ಸುದ್ದಿ ಹಬ್ಬಿಸಿ ಬಿಡುತ್ತಾರೆ. ಹಾಗೇ ಆಗಿದೆ ನೋಡಿ ತಮನ್ನಾ ಮದುವೆ ಗಾಸಿಪ್. ಅದ್ಯಾರಿಗೆ ಏನ್ ಅನ್ನಿಸಿತೋ ಏನೋ, ಮಿಲ್ಕಿ ಬ್ಯೂಟಿ ಅಮೆರಿಕದ ಖ್ಯಾತ ಡಾಕ್ಟರ್ ಒಬ್ಬರನ್ನ ಮದುವೆಯಾಗಿದ್ದಾರೆ ಅಂತ ಸುದ್ದಿ ಹಬ್ಬಿಸಿಯೇ ಬಿಟ್ಟರು. ಅದು ಕಾಡ್ಗಿಚ್ಚನಂತೆ ಹರಡಿ ಇಡೀ ಮಾಯನಗರಿಯಲ್ಲಿ ಗಿರಿಗಿಟ್ಟಲೆ ಹೊಡೆಯೋಕೆ ಆರಂಭಿಸಿತ್ತು. ಆಗ ಹೇಗಿತ್ತು ಗೊತ್ತಾ ಈ ಬ್ಯೂಟಿಯ ರಿಯಾಕ್ಷನ್.

'ಒಮ್ಮೆ ನಟ, ಮತ್ತೊಮ್ಮೆ ಕ್ರಿಕೆಟರ್, ಈಗ ಡಾಕ್ಟರ್... ಈ ಯಾವ ವಿಷಯಗಳನ್ನೂ ನಂಬಬೇಡಿ. ನಾನೀಗ ಸಿಂಗಲ್ ಆಗೆ ತುಂಬ ಖುಷಿಯಾಗಿದ್ದೇನೆ. ನನ್ನ ಮನೆಯವರು ಕೂಡ ಈ ವಿಷಯದ ಬಗ್ಗೆ ಯೋಚಿಸುತ್ತಿಲ್ಲ. ಯಾವ ಹುಡುಗನನ್ನು ಹುಡುಕುತ್ತಿಲ್ಲ. ಮದುವೆ ಅನ್ನೋದು ನನ್ನ ವೈಯುಕ್ತಿಕ ವಿಷಯ .ಯಾರನ್ನ, ಯಾವಾಗ ಮದುವೆ ಆಗಬೇಕು ಅನ್ನೋದು ನನ್ನ ನಿರ್ಧಾರಕ್ಕೆ ಬಿಟ್ಟಿದ್ದು. ಮದುವೆ ಆಗುವ ಸಂದರ್ಭ ಬಂದಾಗ ನಾನೆ ಖುದ್ದಾಗಿ ತಿಳೀಸುತ್ತೇನೆ. ಯಾರು ಈ ಬಗ್ಗೆ ಸುಳ್ಳು ಸುದ್ದಿಗಳನ್ನ ಹಬ್ಬಿಸಬೇಡಿ' ಎಮದು ತಮ್ಮನ್ನಾ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

 
Loading...
ಹೀಗೆ ಖಡಕ್ ಆಗಿ ಟ್ವಿಟರ್​ನಲ್ಲಿ ಬರೆದುಕೊಂಡಿರೋ ತಮ್ಮನ್ನಾ ಮದುವೆ ಬಗ್ಗೆ ಹಬ್ಬಿದ್ದ ಗಾಸಿಪ್‍ಗಳಿಗೆ ತೆರೆ ಎಳೆದಿದ್ದಾರೆ. ಹಾಗೇ ಈ ರೀತಿ ಸುದ್ದಿ ಹಬ್ಬಸಿದವರ ಬಾಯಿ ಮುಚ್ಚಿಸಿದ್ದಾರೆ.ಇದರಿಂದ ಅಭಿಮಾನಿಗಳು ಕೂಡ ಖುಷಿಯಾಗಿದ್ದು, ಮದುವೆ ಸುದ್ದಿ ನಿಜವಾಗಿಲ್ಲವಲ್ಲ ಅಂತ ನಿಟ್ಟುಸಿರು ಬಿಡುತ್ತಿದ್ದಾರೆ. ಏನೇ ಇರಲಿ ತಮನ್ನಾರ ಟ್ವಿಟ್ಟರ್ ಪೋಸ್ಟ್ ನೋಡುತ್ತಿದ್ದರೆ, ಮದುವೆ ಬಗ್ಗೆ ಇನ್ನು ಚಿಂತಿಸಿಲ್ಲ ಅನ್ನೋದು ಖಚಿತವಾಗಿದೆ.ಇನ್ನು ಯಾವುದಕ್ಕೂ ನೀವು ಈ ವಿಷಯವನ್ನ ಮಾತಾಡದೇ ಇರೋದೆ ಉತ್ತಮ ಅನಿಸುತ್ತೆ.

ತಮನ್ನಾ ಸದ್ಯ 'ನಾ...ನುವ್ವೆ' ಹಾಗೂ ಹಿಂದಿಯ 'ಕ್ವೀನ್​' ಸಿನಿಮಾದ ತೆಲುಗು ರಿಮೇಕ್​ನಲ್ಲಿ ಅಭಿನಯಿಸುತ್ತಿದ್ದಾರೆ.

 

 

 

 
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...