ಇದು ತಮನ್ನಾ ವೃತ್ತಿಜೀವನದಲ್ಲೇ ಅತ್ಯಂತ ಮಾದಕ ಸಾಂಗ್​; ಮಿಲ್ಕಿ ಬ್ಯೂಟಿ ಹಾಡಿಗೆ ಪ್ರೇಕ್ಷಕರು ಫಿದಾ

ಕೆಜಿಎಫ್​ ವಿಶೇಷ ಹಾಡಿನಲ್ಲೂ ತಮನ್ನಾ ಸಖತ್​ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದರು. ಆದರೆ, ರೆಡಿ ರೆಡಿಯಲ್ಲಿ ಈ ಮೊದಲು ಎಂದು ಕಾಣಿಸಿಕೊಳ್ಳದಷ್ಟು ಹಾಟ್​ ಆಗಿ ತಮನ್ನಾ ಹೆಜ್ಜೆ ಹಾಕಿದ್ದಾರೆ.

Rajesh Duggumane | news18
Updated:May 24, 2019, 1:58 PM IST
ಇದು ತಮನ್ನಾ ವೃತ್ತಿಜೀವನದಲ್ಲೇ ಅತ್ಯಂತ ಮಾದಕ ಸಾಂಗ್​; ಮಿಲ್ಕಿ ಬ್ಯೂಟಿ ಹಾಡಿಗೆ ಪ್ರೇಕ್ಷಕರು ಫಿದಾ
ತಮನ್ನಾ
Rajesh Duggumane | news18
Updated: May 24, 2019, 1:58 PM IST
‘ಕೆಜಿಎಫ್​’ ಚಿತ್ರದ ‘ಜೋಕೆ ನಾನು ಬಳ್ಳಿಯ ಮಿಂಚು..’ ಹಾಡಿಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಸೊಂಟ ಬಳುಕಿಸಿದ್ದರು. ಆಧುನಿಕ ಟಚ್​ನೊಂದಿಗೆ ಬಂದಿದ್ದ ಹಳೆಯ ಹಾಡು ಎಲ್ಲರ ಗಮನ ಸೆಳೆದಿತ್ತು. ಈ ಹಾಡಿನಲ್ಲಿ ತಮನ್ನಾ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ಮತ್ತೊಂದು ಹಾಡಿನ ಮೂಲಕ ಪ್ರೇಕ್ಷರ ಕಣ್ಣು ಕುಕ್ಕಿದ್ದಾರೆ.

ಪ್ರಭುದೇವ ಅಭಿನಯದ ‘ಅಭಿನೇತ್ರಿ 2’ ಸಿನಿಮಾದಲ್ಲಿ ತಮನ್ನಾ ಹೆಜ್ಜೆ ಹಾಕಿದ್ದಾರೆ. ಈ ಚಿತ್ರದ ‘ರೆಡಿ ರೆಡಿ’ ಹಾಡು ರಿಲೀಸ್​ ಆಗಿದ್ದು, ಲಕ್ಷಾಂತರಬಾರಿ ವೀಕ್ಷಣೆ ಕಂಡಿದೆ. ಪ್ರಭುದೇವ ಎಂದರೆ ನೃತ್ಯಕ್ಕೆ ಫೇಮಸ್​. ಅವರ ಜೊತೆ ತಮನ್ನಾ ಕೂಡ ಹೆಜ್ಜೆ ಹಾಕಿರುವುದು ಹಾಡಿಗೆ ಪ್ಲಸ್​ ಪಾಯಿಂಟ್​ ಆಗಿದೆ.

ಕೆಜಿಎಫ್​ ವಿಶೇಷ ಹಾಡಿನಲ್ಲೂ ತಮನ್ನಾ ಸಖತ್​ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದರು. ಆದರೆ, 'ರೆಡಿ ರೆಡಿ'ಯಲ್ಲಿ ಈ ಮೊದಲು ಎಂದು ಕಾಣಿಸಿಕೊಳ್ಳದಷ್ಟು ಹಾಟ್​ ಆಗಿ ತಮನ್ನಾ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ತಮನ್ನಾ ಮೈಮಾಟ ನೋಡಿ ಅನೇಕರು ಮನಸೋತಿದ್ದಾರೆ. ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ಬಾಲಿವುಡ್​ನ ಈ​ ನಟನಿಗಾಗಿ ತಮನ್ನಾ ತೆರೆ ಮೇಲೆ ಕಿಸ್​ ಮಾಡಲು ರೆಡಿಯಂತೆ..!ತೆಲುಗಿನಲ್ಲಿ ಹಿಟ್​ ಆಗಿದ್ದ 'ಅಭಿನೇತ್ರಿ' ಸಿನಿಮಾದ ಸೀಕ್ವೇಲ್​  ‘ಅಭಿನೇತ್ರಿ 2’. ಈ ಚಿತ್ರ ಮೇ 31ರಂದು ತೆರೆಗೆ ಬರುತ್ತಿದೆ. ಹಾರರ್​ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ತಮನ್ನಾ ಜೊತೆಗೆ ನಂದಿತಾ ಶ್ವೇತಾ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
Loading...

First published:May 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...