ಭೂತವಿಲ್ಲ, ಪಿಶಾಚಿಯಿಲ್ಲ ಪ್ರಭು-ತಮನ್ನಾನೇ ಎಲ್ಲಾ:  ಹಾರರ್ ಸಿನಿಮಾಗಳಿಂದ ತಾವೇ ಹೆದರುವಂತಾಯಿತಲ್ಲ ?

ಡ್ಯಾನ್ಸ್ ಕಿಂಗ್ ಪ್ರಭುದೇವಾ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಇಬ್ಬರೂ ಸದ್ಯ ಸಖತ್ ತಲೆ ಕೆಡಿಸಿಕೊಂಡಿದ್ದಾರೆ. ಕಾರಣ ಅವರಿಬ್ಬರೂ ನಾಯಕ, ನಾಯಕಿಯಾಗಿ ನಟಿಸಿರುವ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆಗ್ತಿವೆ. ಹೌದು, ತಮಿಳು ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿರುವ ದೇವಿ 2 ಹಾಗೂ ಬಾಲಿವುಡ್‍ನ ಖಾಮೋಶಿ, ಸದ್ಯ ರಿಲೀಸ್‍ಗೆ ರೆಡಿಯಿದ್ದು, ಹೆಚ್ಚು ಕಮ್ಮಿ ಒಂದೇ ದಿನ ತೆರೆಗೆ ಅಪ್ಪಳಿಸುವ ಸಾಧ್ಯತೆಗಳಿವೆ.

Anitha E | news18
Updated:May 18, 2019, 8:21 PM IST
ಭೂತವಿಲ್ಲ, ಪಿಶಾಚಿಯಿಲ್ಲ ಪ್ರಭು-ತಮನ್ನಾನೇ ಎಲ್ಲಾ:  ಹಾರರ್ ಸಿನಿಮಾಗಳಿಂದ ತಾವೇ ಹೆದರುವಂತಾಯಿತಲ್ಲ ?
ನಟಿ ತಮನ್ನಾ ಹಾಗೂ ಪ್ರಭುದೇವಾ
Anitha E | news18
Updated: May 18, 2019, 8:21 PM IST
ಇಂಡಿಯನ್ ಮೈಕಲ್ ಜ್ಯಾಕ್ಸನ್ ಖ್ಯಾತಿಯ ಡ್ಯಾನ್ಸ್ ಕಿಂಗ್ ಪ್ರಭುದೇವಾ ಮತ್ತು ಮಿಲ್ಕಿ ಬ್ಯೂಟಿ ತಮನ್ನಾ ಅವರದ್ದು ಅದೃಷ್ಟ ಅನ್ನಬೇಕೋ, ಅಥವಾ ದುರಾದೃಷ್ಟ ಅನ್ನಬೇಕೋ ಗೊತ್ತಿಲ್ಲ. ಏಕೆಂದರೆ ಇವರಿಬ್ಬರೂ ನಟಿಸಿದ ಮೂರು ಭಾಷೆಗಳ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿವೆ. ಹೆದರಿಸೋಕೆ ಬರ್ತಿರೋ ಈ ಜೋಡಿ ಈಗ ತಾವೇ ಹೆದರುವಂತಾಗಿದೆ.

ಡ್ಯಾನ್ಸ್ ಕಿಂಗ್ ಪ್ರಭುದೇವಾ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಇಬ್ಬರೂ ಸದ್ಯ ಸಖತ್ ತಲೆ ಕೆಡಿಸಿಕೊಂಡಿದ್ದಾರೆ. ಕಾರಣ ಅವರಿಬ್ಬರೂ ನಾಯಕ, ನಾಯಕಿಯಾಗಿ ನಟಿಸಿರುವ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆಗ್ತಿವೆ. ಹೌದು, ತಮಿಳು ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿರುವ 'ದೇವಿ 2' ಹಾಗೂ ಬಾಲಿವುಡ್‍ನ 'ಖಾಮೋಶಿ', ಸದ್ಯ ರಿಲೀಸ್‍ಗೆ ರೆಡಿಯಿದ್ದು, ಹೆಚ್ಚು ಕಮ್ಮಿ ಒಂದೇ ದಿನ ತೆರೆಗೆ ಅಪ್ಪಳಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: AMAR Movie: ಡಿಬಾಸ್ ದರ್ಶನ್​​-ರಚಿತಾ ರಾಮ್​ ಅಭಿನಯದ 'ಜೋರು ಪಟ್ಟು' ಹಾಡು ನಾಳೆ ಬಿಡುಗಡೆ

ಎರಡೂ ಸಿನಿಮಾಗಳು ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿವೆಯಲ್ಲ, ಅದರಿಂದ ಏನು ಸಮಸ್ಯೆ ಅಂತ ನೀವೂ ಕೇಳಬಹುದು. ಆದರೆ 'ದೇವಿ 2' ಹಾಗೂ 'ಖಾಮೋಶಿ', ಎರಡೂ ತಮಿಳು ಹಾಗೂ ಹಿಂದಿಯಲ್ಲಿ ಮೂಡಿಬರುತ್ತಿದ್ದರೂ, ಪರಿಕಲ್ಪನೆ ಒಂದೇ. ಎರಡೂ ಹಾರರ್ ಸಿನಿಮಾಗಳೇ. ಜತೆಗೆ ಎರಡೂ ಚಿತ್ರಗಳ ಹೀರೋ ಮತ್ತು ಹೀರೋಯಿನ್ ಕೂಡ ಸೇಮ್ ಆಗಿರೋದು, ಎಲ್ಲಿ ಯಾವ ಚಿತ್ರಕ್ಕೆ ಪೆಟ್ಟು ಬೀಳುತ್ತೋ ಅನ್ನೋ ಆತಂಕ ಚಿತ್ರತಂಡಗಳದ್ದು.

ಅಷ್ಟೇ ಅಲ್ಲ ಈಗ ಎಲ್ಲ ಭಾಷೆಗಳ ಚಿತ್ರಗಳೂ ಆಯಾ ರಾಜ್ಯಗಳಿಗೆ ಮಾತ್ರ ಸೀಮಿತವಾಗದೇ, ಬೇರೆ ರಾಜ್ಯಗಳಲ್ಲೂ ರಿಲೀಸ್ ಆಗುತ್ತಿವೆ. ಆದರೆ ಒಂದೇ ಜೋಡಿಯ, ಒಂದೇ ಜಾನರ್​ನ ಎರಡು ಸಿನಿಮಾಗಳು ಬಂದರೆ, ಥಿಯೇಟರ್ ಸಮಸ್ಯೆ, ಜತೆಗೆ ಸಿನಿಮಾ ನೋಡಲು ಬರುವ ಜನರ ಸಮಸ್ಯೆಯೂ ಎದುರಾಗೋದ್ರಲ್ಲಿ ಅನುಮಾನವೇ ಇಲ್ಲ.

ಆದರೆ 'ದೇವಿ 2' ಹಾಗೂ ಕಾಮೋಶಿ' ಚಿತ್ರತಂಡಗಳಂತೂ ಪೈಪೋಟಿಗೆ ಬಿದ್ದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಆದರೆ ಬಾಕ್ಸಾಫಿಸ್ ಬ್ಯಾಟಲ್‍ನಲ್ಲಿ ಯಾರು ಗೆಲ್ತಾರೆ ಅನ್ನೋದು ಮಾತ್ರ ಇದೇ ತಿಂಗಳ 31ರಂದು ಗೊತ್ತಾಗಲಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
Loading...

Cannes 2019: ಮೆಟ್​ಗಾಲಾದಲ್ಲಿ ವಿಚಿತ್ರ ಉಡುಗೆಯಿಂದ ಟ್ರಾಲ್​ ಆಗಿದ್ದ ಪ್ರಿಯಾಂಕಾ ಕಾನ್ಸ್​​ನಲ್ಲಿ ಬೆಂಕಿ ಹೊತ್ತಿಸಿದ್ದು ಹೀಗೆ..!


 
First published:May 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...