news18-kannada Updated:May 26, 2020, 10:09 PM IST
Majaa Talkies
ಕನ್ನಡದ ಕಿರುತೆರೆಯಲ್ಲಿ ಹೊಸ ಅಲೆ ಎಬ್ಬಿಸಿದ ಟಾಕಿಂಗ್ ಶೋ ಮಜಾ ಟಾಕೀಸ್ ಸಾಕಷ್ಟು ಜನಪ್ರಿಯಗೊಂಡಿತ್ತು. ಸಿಸನ್ 1 ಮತ್ತು ಸೀಸನ್ 2 ಕಾರ್ಯಕ್ರಮ ಯಶಸ್ವಿಗೊಂಡು ಜನಮನ್ನಣೆ ಗೆದ್ದಿತ್ತು. ಈ ಕಾರ್ಯಕ್ರಮವನ್ನು ಟಾಕಿಂಗ್ ಸ್ಟಾರ್ ಸೃಜನ್ ಲೋಕೆಶ್ ನಿರೂಪಣೆ ಮಾಡುತ್ತಾ ಬಂದಿದ್ದರು. ಇದೀಗ ಮಜಾ ಟಾಕೀಸ್ ಸೀಸನ್ 3 ಶೋ ಬರಲು ಸಜ್ಜಾಗಿದೆ.
ಮಜಾ ಟಾಕೀಸ್ ಸೀಸನ್ 2 ಕಾರ್ಯಕ್ರಮ ಪೂರ್ಣಗೊಂಡ ನಂತರ ಇದೀಗ ಸೀಸನ್ 3 ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಈ ಕಾರ್ಯಕ್ರಮ ಟಿವಿಯಲ್ಲಿ ಮೂಡಿ ಬರಲಿದೆ. ಮಜಾ ಟಾಕೀಸ್ ಸೀಸನ್ 1 ಮತ್ತು ಸೀಸನ್ 2 ಕಲರ್ಸ್ ವಾಹಿನಿಯಲ್ಲಿ ಪ್ರಸಾರಗೊಂಡಿತ್ತು.
ಸೃಜನ್ ಲೋಕೆಶ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಮಜಾ ಟಾಕೀಸ್ ಸೀಸನ್ 1 ಮತ್ತು ಸೀಸನ್ 2ದಲ್ಲಿ ಇಂದ್ರಜಿತ್ ಲಂಕೇಶ್ ಸೇರಿದಂತೆ ನಟಿ ಶ್ವೇತ ಚಂಗಪ್ಪ, ಅಪರ್ಣ, ಮಿಮಿಕ್ರಿ ದಯಾನಂದ್, ಮಂಡ್ಯ ರಮೇಶ್, ಕುರಿ ಪ್ರತಾಪ್, ವಿಶ್ವ, ಪವನ್ ಕುಮಾರ್ ಮತ್ತು ರೇಖಾ ಕಾಣಿಸಿಕೊಂಡಿದ್ದರು. ಪ್ರತಿ ಎಪಿಸೋಡ್ನಲ್ಲಿ ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ವೀಕ್ಷಕರಿಗೆ ಮನರಂಜನೆಯನ್ನು ನೀಡಲಾಗುತ್ತಿತ್ತು.
ಇದೀಗ ಮತ್ತೆ ಪ್ರೇಕ್ಷಕರನ್ನು ನಗುವಿತ್ತ ಕೊಂಡೊಯ್ಯಲು ಮಜಾ ಟಾಕೀಸ್ ಸೀಸನ್ 3 ಮೂಲಕ ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಈ ಕಾರ್ಯಕ್ರಮ ಟಿವಿ ಪರದೆಯ ಮೇಲೆ ಬರುವ ಮೂಲಕ ಪ್ರೇಕ್ಷಕರಿಗೆ ನಗುವಿನ ಟಾನಿಕ್ ನೀಡಲಿದೆ
ಕಾಡು ಪ್ರಾಣಿಗಳ ಕುರಿತು ವಿಭಿನ್ನ ಕಥೆ ಹೇಳಲು ಹೊರಟಿದ್ದಾರೆ ರಿಷಬ್ ಶೆಟ್ಟಿ!
First published:
May 26, 2020, 5:43 PM IST