VIDEO: ಆನೆ ನಡೆದಿದ್ದೇ ದಾರಿಯಲ್ಲಿ...ದಾಸನ ಗರಡಿ ಹುಡುಗನ ಟಕ್ಕರ್

Takkar movie: ಈ ಚಿತ್ರವು ಆ್ಯಕ್ಷನ್ ಮಿಶ್ರಿತ ಲವ್​ ಸ್ಟೋರಿ ಕಥೆಯನ್ನು ಹೊಂದಿದ್ದು, ಇಲ್ಲಿ ಮನೋಜ್​ ಹೃದಯಕ್ಕೆ ಟಕ್ಕರ್ ಕೊಡಲು ಪುಟ್ಟ ಗೌರಿ ಮದುವೆ ಖ್ಯಾತಿಯ ನಟಿ ರಂಜನಿ ರಾಘವನ್ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಖಳರಾಗಿ ಭಜರಂಗಿ ಲೋಕಿ ಸೇರಿದಂತೆ ಪ್ರಮುಖರು ಕಾಣಿಸಿಕೊಂಡಿದ್ದಾರೆ.

zahir | news18-kannada
Updated:January 19, 2020, 2:47 PM IST
VIDEO: ಆನೆ ನಡೆದಿದ್ದೇ ದಾರಿಯಲ್ಲಿ...ದಾಸನ ಗರಡಿ ಹುಡುಗನ ಟಕ್ಕರ್
Takkar-Darshan
  • Share this:
ಖಡಕ್ ಲುಕ್, ಕಂಚಿನ ಕಂಠ...ದಾಸನ ಗರಡಿಯ ಹುಡುಗ. ಹೌದು, ಶೀಘ್ರದಲ್ಲೇ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಆರಡಿ ಕಟೌಟ್ ತಲೆ ಎತ್ತಲಿದೆ. ಅದು ಕೂಡ ಮಾಸ್ ಹೀರೋಗಳಿಗೆ 'ಟಕ್ಕರ್' ಕೊಡುತ್ತಾ ಎಂಬುದು ವಿಶೇಷ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ಅಭಿನಯದ 'ಟಕ್ಕರ್' ಚಿತ್ರ ಸೆಟ್ಟೇರಿದಾಗಲೇ ಸಖತ್ ಸದ್ದು ಮಾಡಿತ್ತು.

ಚಿತ್ರದ ಫಸ್ಟ್​ ಲುಕ್ ಪೋಸ್ಟರ್​ನಲ್ಲೇ​ ಸ್ಯಾಂಡಲ್​ವುಡ್​ನಲ್ಲಿ ಹೊಸ ಭರವಸೆ ಮೂಡಿಸಿದ್ದರು. ಅದರ ಬೆನ್ನಲ್ಲೇ ರಿಲೀಸ್ ಆದ ಚಿತ್ರದ ಟೀಸರ್ ನೋಡಿದ ಮೇಲಂತು ಇವ ದಾಸನ ಗರಡಿ ಹುಡುಗನೇ ಎಂದು ಇಡೀ ಗಾಂಧಿನಗರ ಮಾತನಾಡಲಾರಂಭಿಸಿತ್ತು. ಇದೀಗ 'ಟಕ್ಕರ್​'ನ ಮೊದಲ ಹಾಡು​ ಬಿಡುಗಡೆಯಾಗಿದೆ.

ಆನೆ ನಡೆದಿದ್ದೇ ದಾರಿ...ಎಂದು ಪ್ರಾರಂಭವಾಗುವ ಈ ಪವರ್​ಫುಲ್ ಗೀತೆ ಈಗಾಗಲೇ ದಾಸನ ಅಭಿಮಾನಿಗಳನ್ನು ಸೆಳೆದಿದೆ. 'ಸವಾರಿ' ಚಿತ್ರದ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರ  ರಾಗ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಕಂಚಿನ ಕಂಠ ನೀಡಿದ್ದು ಶಶಾಂಕ್ ಶೇಷಗಿರಿ. ಹಾಗೆಯೇ ಟಕ್ಕರ್​ಗೆ ಕಿಕ್ ಕೊಡುವಂತಹ ಸಾಹಿತ್ಯ ಬರೆದಿರುವುದು ವಿ. ನಾಗೇಂದ್ರ ಪ್ರಸಾದ್.

ಇನ್ನು ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್​ ಮೂಲಕವೇ ಟಕ್ಕರ್ ಮನೋಜ್ ಸಖತ್ ಸೌಂಡ್  ಮಾಡಿದ್ದರು. ನೀನು ಟಕ್ಕರ್ ಕೊಡೋಕ್ ಬಂದಿರೋದು ಯಾರ್ ಜೊತೆ ಗೊತ್ತಾ? ದಾಸನ್ ಗರಡಿ ಹುಡುಗನ್ ಜೊತೆ ಎಂಬ ಮಾಸ್ ಡೈಲಾಗ್​ಗೆ ಡಿ ಬಾಸ್ ಅಭಿಮಾನಿಗಳಂತು ಮರಳಾಗಲಿದ್ದರು. ಪಕ್ಕಾ ಆ್ಯಕ್ಷನ್ ಸಿನಿಮಾ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಮನೋಜ್ ಟೀಸರ್​ನಲ್ಲೇ ಭರವಸೆ ಮೂಡಿಸಿದ್ದರು.

'ರನ್​ ಆ್ಯಂಟನಿ' ಖ್ಯಾತಿಯ ನಿರ್ದೇಶಕ ರಘುಶಾಸ್ತ್ರಿ ನಿರ್ದೇಶಿಸಿರುವ ಈ ಜಬರ್​ದಸ್ತ್​ ಆ್ಯಕ್ಷನ್ ಚಿತ್ರದ ಟೀಸರ್​ ಅನ್ನು ಬಿಡುಗಡೆಗೊಳಿಸಿದ್ದು ಮಾವ ನಿರ್ದೇಶಕ ದಿನಕರ್ ತೂಗುದೀಪ್.  ಹಾಗೆಯೇ ಚಿತ್ರದ ಆಡಿಯೋ ಲಾಂಚ್ ಮಾಡಿರುವುದು ಅಭಿಮಾನಿಗಳ ದಾಸ ಚಾಲೆಂಜಿಂಗ್ ಸ್ಟಾರ್ ದರ್ಶನ್.


'ಹುಲಿರಾಯ' ಚಿತ್ರವನ್ನು ನಿರ್ಮಿಸಿದ್ದ ನಾಗೇಶ್ ಕೋಗಿಲು ಎಸ್​ಎಲ್​ಎನ್​ ಬ್ಯಾನರ್​ ಅಡಿಯಲ್ಲಿ 'ಟಕ್ಕರ್'​ಗೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಮತ್ತು ಸಿನಿಮಾ ಟೀಸರ್​ ಅನ್ಯಭಾಷಾ ಸಿನಿಪ್ರಿಯರ ಗಮನ ಸೆಳೆದಿದ್ದು, ಅತ್ತ ಕಾಲಿವುಡ್-ಟಾಲಿವುಡ್​ನಿಂದಲೂ ಚಿತ್ರಕ್ಕೆ ಬೇಡಿಕೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಜೊತೆ ನಿರ್ಮಾಪಕ ನಾಗೇಶ್ ಕೋಗಿಲು.


ಈ ಚಿತ್ರವು ಆ್ಯಕ್ಷನ್ ಮಿಶ್ರಿತ ಲವ್​ ಸ್ಟೋರಿ ಕಥೆಯನ್ನು ಹೊಂದಿದ್ದು, ಇಲ್ಲಿ ಮನೋಜ್​ ಹೃದಯಕ್ಕೆ ಟಕ್ಕರ್ ಕೊಡಲು 'ಪುಟ್ಟ ಗೌರಿ ಮದುವೆ' ಖ್ಯಾತಿಯ ನಟಿ ರಂಜನಿ ರಾಘವನ್ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಖಳರಾಗಿ ಭಜರಂಗಿ ಲೋಕಿ ಸೇರಿದಂತೆ ಪ್ರಮುಖರು ಕಾಣಿಸಿಕೊಂಡಿದ್ದಾರೆ.

'ಟಕ್ಕರ್​'​ ಟೀಸರ್​ ಅನ್ನು ಈಗಾಗಲೇ ಡಿ ಬಾಸ್ ಅಭಿಮಾನಿಗಳು ಹಾಗೂ ಸಿನಿ ಪ್ರಿಯರು ಮೆಚ್ಚಿಕೊಂಡಿದ್ದು, ಮೊದಲ ಚಿತ್ರದ ಮೂಲಕವೇ ಪರದೆಯ ಮೇಲೆ ಮನೋಜ್ ಮಾಸ್ ಮಹರಾಜರಾಗಿ ವಿಜೃಂಭಿಸಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ದರ್ಶನ್ ಗರಡಿಯಿಂದ ಎಂಟ್ರಿ ಕೊಡುತ್ತಿರುವ ಹೊಸ ಹೀರೊ ಫೆಬ್ರವರಿ ಅಂತ್ಯಕ್ಕೆ ಬಾಕ್ಸಾಫೀಸ್​ಗೆ ಟಕ್ಕರ್​ ಕೊಡಲಿದ್ದಾರೆ.

First published:January 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading