ಕಲರ್ಸ್​ ಕನ್ನಡದಲ್ಲಿ ನಾಳೆಯಿಂದ ಹೊಸ ಡಾನ್ಸ್​ ಶೋ 'ತಕಧಿಮಿತ'

Anitha E | news18
Updated:February 1, 2019, 1:47 PM IST
ಕಲರ್ಸ್​ ಕನ್ನಡದಲ್ಲಿ ನಾಳೆಯಿಂದ ಹೊಸ ಡಾನ್ಸ್​ ಶೋ 'ತಕಧಿಮಿತ'
ಕಲರ್ಸ್​ ಕನ್ನಡದಲ್ಲಿ ಡಾನ್ಸ್​ ಶೋ 'ತಕಧಿಮಿತ'
Anitha E | news18
Updated: February 1, 2019, 1:47 PM IST
ಕಲರ್ಸ್​ ಕನ್ನಡ ವಾಹಿನಿಯಲ್ಲಿ ಹೊಸ ಡಾನ್ಸ್​ ರಿಯಾಲಿಟಿ ಶೋ ಪ್ರಸಾರವಾಗಲಿದೆ. ನಾಳೆ (ಫೆ.2)ರಿಂದ ಹೊಸ ಡಾನ್ಸ್​ ಶೋ 'ತಕಧಿಮಿತ' ಪ್ರಸಾರವಾಗಲಿದೆ.

ಇದನ್ನೂ ಓದಿ: ಇದು ದರ್ಶನ್ ಸಿನಿಜೀವನದ ಹೊಸ ವರ್ಷನ್: ರಾಜಕೀಯ ರಣರಂಗಕ್ಕೆ ಕಾಲಿಡಲಿದ್ದಾರಾ ದಾಸ..?

ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 8ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಒಬ್ಬೊಬ್ಬ ಸಾಮಾನ್ಯ ವ್ಯಕ್ತಿ ಒಬ್ಬರು ಸೆಲೆಬ್ರಿಟಿಯೊಂದಿಗೆ ಜೋಡಿಯಾಗಲಿದ್ದಾರೆ. ಇಂತಹ 14 ಜೋಡಿಗಳು ಇದರಲ್ಲಿ ಭಾಗವಹಿಸಲಿದ್ದು, ನಾಳೆಯಿಂದಲೇ ಕಾರ್ಯಕ್ರಮದ ಮೊದಲ ಸಂಚಿಕೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕ್ರೇಜಿ ಸ್ಟಾರ್​ ರವಿಚಂದ್ರನ್​, ಬಹು ಭಾಷಾ ನಟಿ ಸುಮನ್​ ರಂಗನಾಥ್​ ಹಾಗೂ ಅನುರಾಧಾ ವಿಕ್ರಾಂತ್​  ಇರಲಿದ್ದಾರೆ.

ಇದನ್ನೂ ಓದಿ: ಬೆಳ್ಳಿ ತೆರೆಗೆ ಕಿಚ್ಚ ಸುದೀಪ್​ ಸವೆಸಿದ ಹಾದಿಗೆ ಇಂದು 23ರ ಪ್ರಾಯ..!

ಅಲ್ಲದೆ ನಟ-ನಿರೂಪಕ ಅಕುಲ್​ ಬಾಲಾಜಿ ಈ ಕಾರ್ಯಕ್ರಮದ ನಿರೂಪಕರಾಗಿದ್ದು, ಪ್ರತಿ ವಾರಾಂತ್ಯ ಒಂದು ತಂಡ ಸ್ಪರ್ಧೆಯಿಂದ ಹೊರ ಬೀಳಲಿದೆ.PHOTOS: ಮುದ್ದು ಮೊಗದ ಅಲಿಯಾ ಭಟ್​ರ ಲೆಟೆಸ್ಟ್​ ಫೋಟೋಗಳು..!

First published:February 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ