ಚಿತ್ರೀಕರಣದ ಸೆಟ್​ನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಸಿನಿಮಾ ನಟ..!

ರಿಯಾಲಿಟಿ ಕಾರ್ಯಕ್ರಮದಲ್ಲಿ ಚಿತ್ರೀಕರಣದ ವೇಳೆ ಗಾಡ್​ ಫ್ರೆ ಓಡುತ್ತಿದ್ದರಂತೆ. ಇದ್ದಕ್ಕಿದ್ದಂತೆ ನಿಧಾನವಾಗಿ ನಿಂತ ಅವರು ಕುಸಿದು ಬಿದಿದ್ದಾರೆ. ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಎರಡು ಗಂಟೆಗಳ ಹೋರಾಟ ನಂತರ ಸಾವನ್ನಪ್ಪಿದ್ದಾರೆ.

Anitha E | news18-kannada
Updated:November 28, 2019, 2:57 PM IST
ಚಿತ್ರೀಕರಣದ ಸೆಟ್​ನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಸಿನಿಮಾ ನಟ..!
ಸಾಂದರ್ಭಿಕ ಚಿತ್ರ
  • Share this:
ಸಿನಿಮಾ ಚಿತ್ರೀಕರಣದ ವೇಳೆ ನಟರು ಸಾವನ್ನಪ್ಪಿರುವ ಘಟನೆ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೇವೆ. ಈಗಲೂ ಸಹ ಇಂತಹದ್ದೇ ಒಂದು ಘಟನೆ ನಡೆದಿದೆ. ಚಿತ್ರೀಕರಣ ನಡೆಯುವಾಗಲೇ ನಟರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಗಾಡ್​ ಫ್ರೆ ಎಂಬ ನಟ ಚೀನಾದ ಕಿರುತೆರೆಯಲ್ಲಿ ಪ್ರಸಾರವಾಗುವ 'ಚೇಸ್​ ಮಿ' ರಿಯಾಲಿಟಿ ಕಾರ್ಯಕ್ರಮದ ಚಿತ್ರೀಕರಣದ ವೇಳೆ ಸೆಟ್​ನಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ. ತೈವಾನಿ ಹಾಗೂ ಕೆನಡಿಯನ್​ ಮಾಡೆಲ್​ ಆಗಿದ್ದ ಗಾಡ್​ ಫ್ರೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

Taiwanese-Canadian Actor Godfrey Gao Dies While Filming a Show
ನಟ ಹಾಗೂ ಮಾಡೆಲ್​ ಆಗಿದ್ದ ಗಾಡ್​ಫ್ರೆ


ರಿಯಾಲಿಟಿ ಕಾರ್ಯಕ್ರಮದಲ್ಲಿ ಚಿತ್ರೀಕರಣದ ವೇಳೆ ಗಾಡ್​ ಫ್ರೆ ಓಡುತ್ತಿದ್ದರಂತೆ. ಇದ್ದಕ್ಕಿದ್ದಂತೆ ನಿಧಾನವಾಗಿ ನಿಂತ ಅವರು ಕುಸಿದು ಬಿದಿದ್ದಾರೆ. ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಎರಡು ಗಂಟೆಗಳ ಹೋರಾಟ ನಂತರ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಜನರು ಪೋಸ್ಟ್​ ಮಾಡಿದಾಗ ವಿಷಯ ಹರಡಿದೆ.

ಇದನ್ನೂ ಓದಿ: Kichcha Sudeep Cycling Video: ಸೈಕಲ್​ ಹತ್ತಿ ಬೆಂಗಳೂರಿನ ರಸ್ತೆಗಿಳಿದ ಕಿಚ್ಚ ಸುದೀಪ್​..!

ತೈವಾನ್​ನಲ್ಲಿ ಹುಟ್ಟಿ ಕೆನಡಾದಲ್ಲಿ ಬೆಳೆದ ಗಾಡ್​ ಫ್ರೆ ಮಾಡೆಲಿಂಗ್​ ಜತೆಗೆ ಹಲವಾರು ಹಾಲಿವುಡ್​ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. 'ದ ಜೇಡ್​ ಪೆಂಡೆಂಟ್​',  'ದ ಮಾರ್ಟಲ್​ ಇನ್​ಸ್ಟ್ರುಮೆಂಟ್​', 'ಲವ್​ ಇಸ್​ ಎ ಬೋರ್ಡ್​ವೇ ಹಿಟ್​', 'ಶಾಂಗೈ ಫೋಟ್ರೆಸ್​' ಸೇರಿದಂತೆ ಹಲವಾರು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

Radhika Panit: ಗರ್ಭಿಣಿಯಾಗಿದ್ದ ದಿನಗಳನ್ನು ಮಿಸ್​ ಮಾಡಿಕೊಳ್ಳುತ್ತಿರುವ ರಾಧಿಕಾ ಪಂಡಿತ್​
First published:November 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading