Taimur Ali Khan: ಫೋಟೋಗ್ರಾಫರ್​ಗಳ ಮೇಲೆ ಸಿಟ್ಟಾಗಿ ಕೂಗಾಡಿದ ಛೋಟಾ ನವಾಬ ತೈಮೂರ್​ ಅಲಿ ಖಾನ್​..!

Taimur Ali Khan: ಕರೀನಾ ಕಪೂರ್​ ಹಾಗೂ ಸೈಫ್​ ಅಲಿ ಖಾನ್​ ಅವರ ಮಗ ತೈಮೂರ್​ ಯಾವಾಗಲು ನಗುತ್ತಾ, ಆಡುತ್ತಾ ಛಾಯಾಗ್ರಾಹಕರೊಂದಿಗೆ ಸ್ನೇಹದಿಂದ ಇರುವ ಮಗು. ಆದರೆ ದೀಪಾವಳಿಯ ಸಮಯದಲ್ಲಿ ಛಾಯಾಗ್ರಾಹಕರು ಕರೀನಾರ ಜತೆಗಿದ್ದ ತೈಮೂರ್ ಫೋಟೋ ತೆಗೆಯಲು ಹೋದಾಗ ಕೂಗಾಡಿದ್ದಾನೆ.

ನಟಿ ಕರೀನಾ ಕಪೂರ್​ ಹಾಗೂ ಮಗ ತೈಮೂರ್​ ಅಲಿ ಖಾನ್​

ನಟಿ ಕರೀನಾ ಕಪೂರ್​ ಹಾಗೂ ಮಗ ತೈಮೂರ್​ ಅಲಿ ಖಾನ್​

  • Share this:
ಬಿ-ಟೌನ್​ನ ಸೆಲೆಬ್ರಿಟಿ ಕಿಡ್ಸ್​ನ ಲಿಸ್ಟ್​ನಲ್ಲಿ ಅತಿ ಹೆಚ್ಚು ಕೇಳಿ ಬರುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಹೆಸರು ತೈಮೂರ್ ಅಲಿ ಖಾನ್​. ಛಾಯಾಗ್ರಾಹಕರಿಗೆ ಬೇಕಾದಂತೆ ಹ್ಯಾಪಿ ಹ್ಯಾಪಿ ಪೋಸ್​ ಕೊಡುವ ಮುದ್ದು ಮುಖದ ಮಗು ತಮೂರ್​ ಅಲಿಖಾನ್ ಛಾಯಾಗ್ರಾಹಕರ ಮೇಲೆ ಸಿಟ್ಟಾಗಿದ್ದಾನೆ.

ಕರೀನಾ ಕಪೂರ್​ ಹಾಗೂ ಸೈಫ್​ ಅಲಿ ಖಾನ್​ ಅವರ ಮಗ ತೈಮೂರ್​ ಯಾವಾಗಲು ನಗುತ್ತಾ, ಆಡುತ್ತಾ ಛಾಯಾಗ್ರಾಹಕರೊಂದಿಗೆ ಸ್ನೇಹದಿಂದ ಇರುವ ಮಗು. ಆದರೆ ದೀಪಾವಳಿಯ ಸಮಯದಲ್ಲಿ ಛಾಯಾಗ್ರಾಹಕರು ಕರೀನಾರ ಜತೆಗಿದ್ದ ತೈಮೂರ್ ಫೋಟೋ ತೆಗೆಯಲು ಹೋದಾಗ ಕೂಗಾಡಿದ್ದಾನೆ.

 



 




View this post on Instagram




 

#TaimurAliKhan in phataka mood this Diwali #kareenakapoor 😱😱😘😍 #happydiwali #ManavManglani


A post shared by Manav Manglani (@manav.manglani) on






ಹೌದು, ತೈಮೂರ್​ ಈ ಸಲ ಫೋಟೋಗ್ರಾಫರ್​ಗಳಿಗೆ ಬೇಕಾದಂತೆ ಯಾವ ಪೋಸು ಕೊಟ್ಟಿಲ್ಲ. ಸಾಲದಕ್ಕೆ ಅವರು ಹ್ಯಾಪಿ ದೀಪಾವಳಿ ಎಂದು ವಿಶ್​ ಮಾಡಿ, ಫೋಟೋ ತೆಗೆಯುವಾಗ ನೋ ನೋ... ಎಂದು ಜೋರಾಗಿ ಕೂಗಿ ಸಿಟ್ಟಾಗಿದ್ದಾನೆ ತೈಮೂರ್​. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: Bigil Movie Collections: ಬಿಡುಗಡೆಯಾದ ಮೂರೇ ದಿನದಲ್ಲಿ ನೂರು ಕೋಟಿ ಕ್ಲಬ್​ ಸೇರಿದ ಬಿಗಿಲ್​..!

ತೈಮೂರ್​ ಪಾಪರಾಜಿಗಳ ಅಚ್ಚುಮೆಚ್ಚಿನ ಮಗು. ಅಪ್ಪ-ಅಮ್ಮನೊಂದಿಎ ತೈಮೂರ್​ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಾಕು ಫೋಟೋಗ್ರಾಫರ್​ಗಳು ಫೋಟೋ ಕ್ಲಿಕ್ಕಿಸೋಕೆ ಹಿಂದೆ ಬೀಳುತ್ತಿದ್ದರು. ಇದದರಿಂದ ಬೇಸರಗೊಂಡಿದ್ದ ಸೈಫ್​ ಹಾಗೂ ಕರೀನಾ ಸಾಕಷ್ಟು ಸಲ ಫೋಟೋ ತೆಗೆಯುವ ನೆಪದಲ್ಲಿ ಹಿಂಸೆ ಕೊಡಬೇಡಿ. ಮಗುವನ್ನು ಸಾಮಾನ್ಯ ಮಗುವಂತೆ ಇರಲು ಬಿಡಿ ಎಂದು ಮನವಿ ಮಾಡಿದ್ದರು.

ನಾಯಿ ಬಾಲಕ್ಕೆ ಪಟಾಕಿ ಇಟ್ಟು ವಿಕೃತ ಮೇರೆದ ಯುವಕರ ಗುಂಪು: ವೈರಲ್

First published: