Taimur Ali Khan: ಗಣಪತಿ ಬಪ್ಪಾ ಮೋರೆಯಾ ಎಂದ ಜೂನಿಯರ್ ಸೈಫ್; ತೈಮೂರ್ ಖಾನ್ ವಿಡಿಯೋ ವೈರಲ್

Taimur Ali Khan: ಸೈಫ್ ಅಲಿ ಖಾನ್​ ಅಮ್ಮ ಶರ್ಮಿಳಾ ಟಾಗೋರ್, ಸೈಫ್​ ಮೊದಲ ಹೆಂಡತಿ ಅಮೃತಾ ಸಿಂಗ್ ಹಾಗೂ ಈಗಿನ ಹೆಂಡತಿ ಕರೀನಾ ಕಪೂರ್ ಕೂಡ ಹಿಂದೂಗಳಾಗಿದ್ದರಿಂದ ಮೊದಲಿನಿಂದಲೂ ಹಿಂದುಗಳ ಹಬ್ಬವನ್ನು ಕೂಡ ವಿಜೃಂಭಣೆಯಿಂದಲೇ ಆಚರಿಸಲಾಗುತ್ತಿದೆ.

Sushma Chakre | news18-kannada
Updated:September 10, 2019, 6:00 PM IST
Taimur Ali Khan: ಗಣಪತಿ ಬಪ್ಪಾ ಮೋರೆಯಾ ಎಂದ ಜೂನಿಯರ್ ಸೈಫ್; ತೈಮೂರ್ ಖಾನ್ ವಿಡಿಯೋ ವೈರಲ್
ತೈಮೂರ್ ಅಲಿ ಖಾನ್
Sushma Chakre | news18-kannada
Updated: September 10, 2019, 6:00 PM IST
ನವಾಬ ವಂಶದ ಕುಡಿ, ಬಾಲಿವುಡ್​ ಸ್ಟಾರ್​ಗಳಾದ ಸೈಫ್ ಅಲಿ ಖಾನ್- ಕರೀನಾ ಕಪೂರ್ ಜೋಡಿಯ ಮಗ ತೈಮೂರ್ ಅಲಿ ಖಾನ್ ಬಾಲಿವುಡ್​ನ ಸ್ಟಾರ್​ ಕಿಡ್. ಕರೀನಾ ಕಪೂರ್​ ತೈಮೂರ್​ಗೆ ಜನ್ಮ ನೀಡಿದಾಗಿನಿಂದ ಹಿಡಿದು ಇಂದಿನವರೆಗೂ ತೈಮೂರ್ ಇದ್ದಲ್ಲೆಲ್ಲ ಕ್ಯಾಮೆರಾಗಳು ಆತನನ್ನು ಹಿಂಬಾಲಿಸುತ್ತವೆ.

ಆತನಿಗೆ ತೈಮೂರ್ ಎಂಬ ಹೆಸರಿಟ್ಟಿದ್ದಕ್ಕೂ ಅನೇಕ ಹಿಂದೂ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಪಟೌಡಿ ಕುಟುಂಬದಲ್ಲಿ ಹಿಂದು ಮತ್ತು ಮುಸ್ಲಿಂ ಹಬ್ಬಗಳೆರಡನ್ನೂ ಅದ್ದೂರಿಯಾಗೇ ಆಚರಿಸಲಾಗುತ್ತದೆ. ಸೈಫ್ ಅಲಿ ಖಾನ್​ ಅಮ್ಮ ಶರ್ಮಿಳಾ ಟಾಗೋರ್, ಸೈಫ್​ ಮೊದಲ ಹೆಂಡತಿ ಅಮೃತಾ ಸಿಂಗ್ ಹಾಗೂ ಈಗಿನ ಹೆಂಡತಿ ಕರೀನಾ ಕಪೂರ್ ಕೂಡ ಹಿಂದೂಗಳಾಗಿದ್ದರಿಂದ ಮೊದಲಿನಿಂದಲೂ ಹಿಂದುಗಳ ಹಬ್ಬವನ್ನು ಕೂಡ ವಿಜೃಂಭಣೆಯಿಂದಲೇ ಆಚರಿಸಲಾಗುತ್ತಿದೆ.

ತನ್ನ ಕುರಿತ ಗಾಸಿಪ್​ಗಳಿಗೆ ಫುಲ್​ಸ್ಟಾಪ್ ಇಟ್ಟ ಕಿಂಗ್ ಖಾನ್​; ಹೊಸ ಸಿನಿಮಾ ಮಾಡ್ತಾರಾ ಶಾರುಖ್?

ಮುದ್ದು ಮುದ್ದಾಗಿರುವ ತೈಮೂರ್ ಅಲಿ ಖಾನ್​ಗೆ ಈಗ 2 ವರ್ಷ. ಈ ಬಾರಿಯ ಗಣೇಶ ಚತುರ್ಥಿಗೆ ಸೈಫ್​ ಅಲಿ ಖಾನ್ ಮನೆಯಲ್ಲಿ ಕರೀನಾ ಕಪೂರ್​ ಕುಟುಂಬದವರು, ಶರ್ಮಿಳಾ ಟಾಗೋರ್​ ಕುಟುಂಬದವರೆಲ್ಲ ಸೇರಿದ್ದರು. ಬಿಳಿ ಬಣ್ಣದ ಪೈಜಾಮ ಧರಿಸಿ ಹಬ್ಬದಲ್ಲಿ ಓಡಾಡುತ್ತಿದ್ದ ತೈಮೂರ್ ಖಾನ್​ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈ ವೇಳೆ ನೆಂಟರೊಂದಿಗೆ ಕುಳಿತುಕೊಂಡು 'ಗಣಪತಿ ಬಪ್ಪಾ ಮೋರೆಯ' ಎಂದು ಮುದ್ದು ಮುದ್ದಾಗಿ ತೈಮೂರ್ ಘೋಷಣೆ ಕೂಗುತ್ತಿರುವ ವಿಡಿಯೋವೊಂದು ಅಭಿಮಾನಿಗಳ ಮನ ಗೆದ್ದಿದೆ.



 
Loading...





View this post on Instagram




 

#ganpatibappamoriya🙏🏼 #family❤️ @therealarmaanjain @anissamalhotra @rimosky #ourboys


A post shared by KK (@therealkarismakapoor) on





ಈ ವಿಡಿಯೋವನ್ನು ಕರಿಷ್ಮಾ ಕಪೂರ್ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬಾಲಿವುಡ್​ ಸ್ಟಾರ್​ ಸಲ್ಮಾನ್​ ಖಾನ್​ ಮನೆಯಲ್ಲೂ ಗಣಪತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಸೈಫ್ ಮನೆಯಲ್ಲಿ ಕುಟುಂಬದವರೆಲ್ಲರೂ ಸೇರಿ ಕ್ಲಿಕ್ಕಿಸಿಕೊಂಡ ಫೋಟೋಗಳು ಮೆಚ್ಚುಗೆಗೆ ಪಾತ್ರವಾಗಿದೆ.



 




View this post on Instagram




 

Ganpati celebration with family and friends 😍✨


A post shared by Kareena Kapoor Khan FC (@kareenakapoorteam) on





ಸೈಫ್​ ಮನೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ಮುಂದೆ ಕೈಮುಗಿದು ಕುಳಿತಿರುವ ತೈಮೂರ್ ಅಲಿ ಖಾನ್.



 




View this post on Instagram




 

Tim🙏😃❤️❤️


A post shared by Taimur Ali Khan Pataudi (@taimuralikhan16) on




First published:September 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...