Saif Ali Khan: ಸೈಫ್ ಸಹೋದರಿ ಸಬಾ ಹಂಚಿಕೊಂಡ ಮುದ್ದಾದ ಫೋಟೋದಲ್ಲಿ ಏನಿದೆ? ನೀವೇ ನೋಡಿ

ಸೈಫ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಸಹೋದರಿಯಾದ ಸಬಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸೈಫ್ ಮತ್ತು ಕರೀನಾರ ಹಿರಿಯ ಮಗನಾದ ತೈಮೂರ್ ತಮ್ಮ ಕಿರಿಯ ಸಹೋದರನಾದ ಜಹಾಂಗೀರ್ ಜೊತೆ ಆಟ ಆಡುವಂತಹ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ.

ಸೈಫ್ ಅಲಿ ಖಾನ್- ತೈಮೂರ್

ಸೈಫ್ ಅಲಿ ಖಾನ್- ತೈಮೂರ್

  • Share this:
ಚಿತ್ರರಂಗದ ನಾಯಕ ನಟರ ಮತ್ತು ನಟಿಯರ ಮಕ್ಕಳು ಏನೇ ಮಾಡಿದರೂ ಅದು ಸುದ್ದಿ ಆಗುತ್ತದೆ ಮತ್ತು ಅಭಿಮಾನಿಗಳಲ್ಲಿಯೂ ತಮ್ಮ ನೆಚ್ಚಿನ ನಾಯಕ ನಟ ಮತ್ತು ನಟಿಯರ ಮಕ್ಕಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕುತೂಹಲ ಇರುತ್ತದೆ.ಅದರಲ್ಲೂ ಬಾಲಿವುಡ್‌ನ ಸುಂದರವಾದ ಮತ್ತು ಹೆಚ್ಚು ಸುದ್ದಿಯಲ್ಲಿರುವಂತಹ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ದಂಪತಿ ಮತ್ತು ಅವರ ಇಬ್ಬರು ಮಕ್ಕಳ ಬಗ್ಗೆ ತಿಳಿದುಕೊಳ್ಳಲು ಕಾತುರರಾಗಿರುತ್ತಾರೆ.ಇತ್ತೀಚೆಗೆ, ಕರೀನಾ ಮತ್ತು ಸೈಫ್ ಅಲಿ ಖಾನ್ ಕಿರಿಯ ಮಗನ ಹೆಸರು ಜಹಾಂಗೀರ್ ಎಂದು ಇಟ್ಟಿರುವುದು ಈಗಾಗಲೆ ಗೊತ್ತಿರುವ ವಿಚಾರವಾಗಿದೆ. ದಂಪತಿ ಪ್ರಸ್ತುತ ತಮ್ಮ ಇಬ್ಬರು ಗಂಡು ಮಕ್ಕಳೊಂದಿಗೆ ರಜೆಯಲ್ಲಿದ್ದಾರೆ ಮತ್ತು ಅದೇ ಸಮಯದಲ್ಲಿ ಸೈಫ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.


ಸೈಫ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಸಹೋದರಿಯಾದ ಸಬಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸೈಫ್ ಮತ್ತು ಕರೀನಾರ ಹಿರಿಯ ಮಗನಾದ ತೈಮೂರ್ ತಮ್ಮ ಕಿರಿಯ ಸಹೋದರನಾದ ಜಹಾಂಗೀರ್ ಜೊತೆ ಆಟ ಆಡುವಂತಹ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಸಬಾ ಪಟೌಡಿ ಕುಟುಂಬದಲ್ಲಿನ ಅಪರೂಪದ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಅನುಯಾಯಿಗಳಿಗೆ ಹಂಚಿಕೊಳ್ಳುತ್ತಿರುತ್ತಾರೆ.


ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋದಲ್ಲಿ ಎರಡು ಚಿತ್ರಗಳನ್ನು ಜೋಡಿಸಲಾಗಿದ್ದು, ಒಂದರಲ್ಲಿ ತೈಮೂರ್ ಮತ್ತು ಸೈಫ್ ನಡುವಿನ ತಂದೆ-ಮಗನ ಬಾಂಧವ್ಯ ತೋರಿಸುವಂತ ಫೋಟೋ, ಇನ್ನೊಂದು ಫೋಟೋದಲ್ಲಿ ತೈಮೂರ್ ತನ್ನ ಪುಟ್ಟ ಮುದ್ದಾದ ತಮ್ಮ ಜಹಾಂಗೀರ್ ಜೊತೆ ಆಟ ಆಡುತ್ತಿರುವುದು. ಸಬಾ ತಾವು ಹಂಚಿಕೊಂಡ ಫೋಟೋಗೆ "ಅಪ್ಪ.. ಜನ್ಮದಿನದ ಶುಭಾಶಯಗಳು! ಟಿಮ್ ಮತ್ತು ಜೆಹ್‌ಗೆ ನಮ್ಮ ಪ್ರೀತಿ", ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.ಕರೀನಾ ಇತ್ತೀಚೆಗೆ ಪುಟ್ಟ ಮಗು ಜಹಾಂಗೀರ್, ತನ್ನ ಹಿರಿಯ ಮಗ ತೈಮೂರ್ ಮತ್ತು ಆಕೆಯ ಪತಿ ಸೈಫ್‌ರೊಂದಿಗೆ ಮಾಲ್ಡೀವ್ಸ್‌ನಲ್ಲಿ ಸೈಫ್‌ರ 51ನೇ ಹುಟ್ಟುಹಬ್ಬ ಆಚರಿಸಿದ ಅತ್ಯಂತ ಪ್ರೀತಿಯ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.ಕರೀನಾ ಸೋಮವಾರ ಈ ಫೋಟೋ ಹಂಚಿಕೊಂಡಿದ್ದು, ಇದನ್ನು ಈವರೆಗೆ 8 ಲಕ್ಷಕ್ಕೂ ಅಧಿಕ ಜನರು ಫೋಟೋಗೆ ಲೈಕ್‌ ಮಾಡಿದ್ದಾರೆ "ನನ್ನ ಜೀವನದ ಪ್ರೀತಿಗೆ ಜನ್ಮದಿನದ ಶುಭಾಶಯಗಳು.. ನಮ್ಮೊಂದಿಗೆ ನೀವು ಹೀಗೆ ಸದಾ ಇರಲಿ" ಎಂದು ಕರೀನಾ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಸೈಫ್ ಮತ್ತು ಕರೀನಾ ದಂಪತಿಯನ್ನು ತಮ್ಮ ಅಭಿಮಾನಿಗಳು ಪ್ರೀತಿಯಿಂದ ಸೈಫೀನಾ ಎಂದು ಕರೆಯುತ್ತಾರೆ. ಇವರಿಬ್ಬರು ಡಿಸೆಂಬರ್ 2012 ರಲ್ಲಿ ವಿವಾಹವಾಗಿದ್ದರು ಮತ್ತು ಕಿರಿಯ ಮಗ ಜೆಹ್ ಫೆಬ್ರುವರಿ 21ರಂದು ಜನಿಸಿದ್ದಾರೆ.


First published: