Taapse Pannu: ತಾಪ್ಸಿ ಪನ್ನು ಅಭಿನಯದ ರಶ್ಮಿ ರಾಕೆಟ್ ಅಕ್ಟೋಬರ್ 15ರಂದು ಬಿಡುಗಡೆ ಸಿದ್ಧ..

Rashmi Rocket: ಕಳೆದ ತಿಂಗಳು, ದೇಶಾದ್ಯಂತ ಚಿತ್ರಮಂದಿರಗಳಿಗೆ ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಮತ್ತು ಇತರ  ಸುರಕ್ಷತಾ ನಿಯಮಗಳನ್ನು ಅನುಸರಿಸಿ  ಆರಂಭಿಸಲು ಅನುಮತಿ ನೀಡಲಾಗಿತ್ತು.  ನಂತರ ಅಕ್ಷಯ್ ಕುಮಾರ್ ಅವರ ಬೆಲ್ ಬಾಟಮ್, ಅಮಿತಾಬ್ ಬಚ್ಚನ್ ಅವರ ಚೆಹ್ರೆ, ಮತ್ತು ಕಂಗನಾ ರಣಾವತ್ ಅವರ ತಲೈವಿ ಸೇರಿದಂತೆ ಕೆಲವು ದೊಡ್ಡ  ಚಿತ್ರಗಳು  ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ, ಆದರೆ ಯಾವುದೇ ಚಿತ್ರಗಳು ವ್ಯವಹಾರಿಕವಾಗಿ ಲಾಭ ಪಡೆಯಲಿಲ್ಲ ಎನ್ನಲಾಗುತ್ತಿದೆ.  

ತಾಪ್ಸಿ ಪನ್ನು

ತಾಪ್ಸಿ ಪನ್ನು

  • Share this:
ತಾಪ್ಸಿ ಪನ್ನು(Taapsee Pannu) ಅಭಿನಯದ ರಶ್ಮಿ ರಾಕೆಟ್(Rashmi Rocket) ಅಕ್ಟೋಬರ್ 15 ರಂದು ಜೀ 5 ರಂದು ಬಿಡುಗಡೆಯಾಗಲಿದೆ ಎಂದು ನಟಿ  ಸಾಮಾಜಿಕ ಜಾಲಾತಾಣದಲ್ಲಿ  ಪೋಸ್ಟ್  ಮಾಡುವ ಮೂಲಕ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ  ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಬಯಕೆ ಹೊಂದಿರುವ  ಸಣ್ಣ ಪಟ್ಟಣದ ಕ್ರೀಡಾಪಟುವಿನ ಪಾತ್ರವನ್ನು  ಈ ಚಿತ್ರದಲ್ಲಿ ತಾಪ್ಸಿ  ನಿರ್ವಹಿಸಿದ್ದು,. ರಶ್ಮಿ ರಾಕೆಟ್ ನಲ್ಲಿ ಪ್ರಿಯಾಂಶು ಪೈನ್ಯುಲಿ, ಅಭಿಷೇಕ್ ಬ್ಯಾನರ್ಜಿ, ಶ್ವೇತಾ ತ್ರಿಪಾಠಿ ಮತ್ತು ಸುಪ್ರಿಯಾ ಪಾಠಕ್ ಕೂಡ ಅಭಿನಯಿಸಿದ್ದಾರೆ.

ಚಿತ್ರದ ಪೋಸ್ಟರ್ ಅನ್ನು ತಾಪ್ಸೀ  ನಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಟ್ರ್ಯಾಕ್ನಲ್ಲಿ ಮತ್ತು ಹೊರಗೆ ಈ ಓಟದಲ್ಲಿ ರಶ್ಮಿಯೊಂದಿಗೆ ಓಡಲು ಸಿದ್ಧರಾಗಿ. ಈ ವಿಷಯದಲ್ಲಿ ಆಕೆಗೆ ನಿಮ್ಮ ಸಹಕಾರ ಅಗತ್ಯ. #ರಶ್ಮಿರಾಕೆಟ್ ಅಕ್ಟೋಬರ್  15 ನೇ 2021 ರಂದು @zee5 ನಲ್ಲಿ ಮಾತ್ರ  ಬಿಡುಗಡೆಗೆ ಸಿದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.
View this post on Instagram


A post shared by Taapsee Pannu (@taapsee)


ಪಾತ್ರವನ್ನು ನಿರ್ವಹಿಸಲು ನಟಿ ಕಠಿಣ ದೈಹಿಕ ತರಬೇತಿ ಪಡೆದಿದ್ದಾರೆ, ಆಕರ್ಶ್ ಖುರಾನಾ ನಿರ್ದೇಶನ ಮತ್ತು ಆರ್‌ಎಸ್‌ವಿಪಿ ನಿರ್ಮಿಸಿದ ಈ ಚಿತ್ರದ ಚಿತ್ರೀಕರಣ ಕಳೆದ ವರ್ಷ ನವೆಂಬರ್‌ನಲ್ಲಿ ಆರಂಭವಾಗಿ ಜನವರಿ 2021 ರಲ್ಲಿ  ಮುಕ್ತಾಯವಾಗಿತ್ತು.

ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುವ ಅವಕಾಶ ನಿಮ್ಮದಾಗಬಹುದು..!

ಕೊರೊನಾ ನಂತರ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರುಳುತ್ತದೆ ಎಂದು ಸಿನಿಮಾ ನಿರ್ಮಾಪಕ ಯೋಚಿಸಿದ್ದರು, ಆದರೆ ಚಿತ್ರಗಳನ್ನು ಥಿಯೇಟರ್​ನಲ್ಲಿ ಬಿಡುಗಡೆ ಮಾಡುವುದು ಸುಕ್ಷಿತವಲ್ಲ, ಹಾಗೂ ವ್ಯವಹಾರಿಕ ನಷ್ಟ ಸಾಧ್ಯವಾಗುವುದರಿಂದ  ತಂಡವು ನೇರವಾಗಿ ಡಿಜಿಟಲ್ ಮಾಧ್ಯಮದಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿದೆ.

ರಶ್ಮಿ ರಾಕೆಟ್ ZEE5 ರಂದು ದಸರ ಸಮಯದಲ್ಲಿ ಬಿಡುಗಡೆಯಾಗಲಿದೆ, ಅದೇ ವಾರಾಂತ್ಯದಲ್ಲಿ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ವಿಕ್ಕಿ ಕೌಶಲ್ ಅವರ ಸರ್ದಾರ್ ಉಧಮ್ ಸಿಂಗ್ ಪ್ರೀಮಿಯರ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಕಳೆದ ತಿಂಗಳು, ದೇಶಾದ್ಯಂತ ಚಿತ್ರಮಂದಿರಗಳಿಗೆ ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಮತ್ತು ಇತರ  ಸುರಕ್ಷತಾ ನಿಯಮಗಳನ್ನು ಅನುಸರಿಸಿ  ಆರಂಭಿಸಲು ಅನುಮತಿ ನೀಡಲಾಗಿತ್ತು.  ನಂತರ ಅಕ್ಷಯ್ ಕುಮಾರ್ ಅವರ ಬೆಲ್ ಬಾಟಮ್, ಅಮಿತಾಬ್ ಬಚ್ಚನ್ ಅವರ ಚೆಹ್ರೆ, ಮತ್ತು ಕಂಗನಾ ರಣಾವತ್ ಅವರ ತಲೈವಿ ಸೇರಿದಂತೆ ಕೆಲವು ದೊಡ್ಡ  ಚಿತ್ರಗಳು  ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ, ಆದರೆ ಯಾವುದೇ ಚಿತ್ರಗಳು ವ್ಯವಹಾರಿಕವಾಗಿ ಲಾಭ ಪಡೆಯಲಿಲ್ಲ ಎನ್ನಲಾಗುತ್ತಿದೆ.  ಬಾಕ್ಸ್ ಆಫೀಸ್ ನಲ್ಲಿ ಸುಮಾರು 30 ಪ್ರತಿಶತದಷ್ಟು ಕೊಡುಗೆ ನೀಡುವ ಮಹಾರಾಷ್ಟ್ರದಲ್ಲಿ ಇನ್ನೂ ಥಿಯೇಟರ್​ಗಳನ್ನು ಮುಚ್ಚಲಾಗಿದೆ, ಅನೇಕ ಚಲನಚಿತ್ರ ನಿರ್ಮಾಪಕರು ಈಗ ತಮ್ಮ ಚಲನಚಿತ್ರಗಳನ್ನು ದೊಡ್ಡ ಪರದೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ  ಹಲವಾರು ಬಾರಿ ಆಲೋಚಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಅವರ ಫೋಟೋವೊಂದರ ವಿಚಾರವಾಗಿ ತಾಪ್ಸಿ ಪನ್ನು ಸುದ್ದಿಯಲ್ಲಿದ್ದಾರೆ. ಈಗ ಬಿಡುಗಡೆಯಾಗಲಿರುವ ರಶ್ಮಿ ರಾಕೆಟ್ ಚಿತ್ರಕ್ಕಾಗಿ ತಮ್ಮ ದೇಹವನ್ನು ಹುರಿಗೊಳಿಸಿದ್ದರು.  ವಿಚಾರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಟ್ರೋಲ್ ಮಾಡಲಾಗಿತ್ತು.ಇದಕ್ಕೆ ತಾಪ್ಸಿ ಪನ್ನು ಕೂಡ ಅಷ್ಟೇ ಶಾಂತವಾಗಿ ಉತ್ತರ ನೀಡುವ ಮೂಲಕ ಟ್ರೋಲ್ ಮಾಡುವವರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ನಟಿ ಪ್ರೇಮಾ; ಮತ್ತೆ ತೆರೆಮೇಲೆ ಮಾಡ್ತಾರಾ ಮೋಡಿ?

ತಾಪ್ಸಿ ಪನ್ನು ದೇಹ ಗಂಡಸರ ರೀತಿ ಇದೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಅದನ್ನು ತಾಪ್ಸಿ ತುಂಬ ಪಾಸಿಟಿವ್ ಆಗಿ ಸ್ವೀಕರಿಸಿರುವುದು ವಿಶೇಷ. ನೀವು ಕಮೆಂಟ್​ ಮಾಡಿದ ಈ ಸಾಲನ್ನು ನೆನಪಿನಲ್ಲಿ ಇಟ್ಟುಕೊಳ್ಳಿ . ಮುಂಚಿತವಾಗಿ ನಿಮಗೆ ಧನ್ಯವಾದಗಳು. ಇಂಥ ಮಾತುಗಳನ್ನು ಕೇಳಲು ನಾನು ತುಂಬ ಶ್ರಮಪಟ್ಟಿದ್ದೇನೆ’ ಎಂದು ತಾಪ್ಸಿ ಟ್ವೀಟ್​ ಮಾಡಿದ್ದರು.
Published by:Sandhya M
First published: