ಬ್ಯಾಟ್​ ಬೀಸಲಿದ್ದಾರೆಯೇ ನಟಿ ತಾಪ್ಸಿ ಪನ್ನು?

news18
Updated:August 3, 2018, 10:13 PM IST
ಬ್ಯಾಟ್​ ಬೀಸಲಿದ್ದಾರೆಯೇ ನಟಿ ತಾಪ್ಸಿ ಪನ್ನು?
news18
Updated: August 3, 2018, 10:13 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ ಬ್ಯೂಟಿ ತಾಪ್ಸಿ ಪನ್ನು ಸಹ ಬಯೋಪಿಕ್ ಚಿತ್ರವೊಂದರಲ್ಲಿ ನಟಿಸಲು ಉತ್ಸುಕರಾಗಿದ್ದಾರೆ. ಅದು ಅಂತಿಂಥ ಕಥೆಯ ಸಿನಿಮಾದಲ್ಲಿ ಅಲ್ಲ. ಬದಲಾಗಿ  ಭಾರತ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ ಮಿಥಾಲಿ ರಾಜ್ ಅವರ ಜೀವನ ಚರಿತ್ರೆಯಲ್ಲಿ ಎಂಬುದು ವಿಶೇಷ.

ಈ ಹಿಂದೆ ಭಾರತ ವನಿತೆಯರ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ಕುರಿತು ಚಿತ್ರ ನಿರ್ಮಿಸುವುದಾಗಿ ವಯಾಕಾಮ್18 ಮೋಷನ್ ಪಿಕ್ಚರ್ಸ್ ಸಂಸ್ಥೆ ತಿಳಿಸಿತ್ತು. ಆದರೆ ಈ ಚಿತ್ರದಲ್ಲಿ ನಾಯಕಿ ಯಾರಾಗಲಿದ್ದಾರೆಂಬ ಕುತೂಹಲ ರಹಸ್ಯವಾಗಿಡಲಾಗಿತ್ತು. ಆದರೆ ಇದೀಗ ಸ್ವತಃ ತಾಪ್ಸಿ ಪನ್ನು ಮಿಥಾಲಿ ರಾಜ್ ಅವರ ಬಯೋಪಿಕ್​ನಲ್ಲಿ ಕಾಣಿಸಿಕೊಳ್ಳಲು ಬಯಸುವುದಾಗಿ ತಿಳಿಸಿದ್ದಾರೆ.

ಮಹಿಳಾ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಸಿಡಿಸಿರುವ ಮಹಿಳಾ ಆಟಗಾರ್ತಿ ಎಂಬ ಕೀರ್ತಿ ಭಾರತೀಯ ವನಿತೆಯರ ಕ್ರಿಕೆಟ್​ ತಂಡದ ನಾಯಕಿ ಮಿಥಾಲಿ ರಾಜ್ ಹೆಸರಿನಲ್ಲಿದೆ.  6000 ರನ್ ಪೂರೈಸಿರುವ ಏಕೈಕ ಆಟಗಾರ್ತಿ ಆಗಿರುವ ಮಿಥಾಲಿ ಅವರ ಜೀವನದ ಏಳು ಬೀಳಿನ ಕಥೆಯನ್ನು ತೆರೆ ಮೇಲೆ ಪ್ರಯತ್ನದಲ್ಲಿದೆ  ವಯಾಕಾಮ್18 ಸಂಸ್ಥೆ.

ಈ ಸಿನಿಮಾ ಸೆಟ್ಟೇರಿದರೆ ಕ್ರಿಕೆಟ್ ಅಂಗಳದ ಆಟಗಾರ್ತಿಯೊಬ್ಬರ ಕಥೆಯನ್ನು ಬೆಳ್ಳಿಪರದೆಯಲ್ಲಿ ವೀಕ್ಷಿಸುವ ಅವಕಾಶ ಸಿನಿಮಾ ಪ್ರೇಮಿಗಳಿಗೆ ಒದಗಲಿದೆ. ಸದ್ಯ ಮುಲ್ಕ್​ ಎಂಬ ವಿಭಿನ್ನ ಕಥೆಯ ಚಿತ್ರದಲ್ಲಿ ಅಭಿನಯಿಸಿರು ತಾಪ್ಸಿ ಪನ್ನು ಮಹಿಳಾ ಪ್ರಧಾನ ಕಥಾಚಿತ್ರಗಳತ್ತ  ಮುಖ ಮಾಡಿದ್ದಾರೆ.

ಅನುರಾಗ್ ಕಶ್ಯಪ್ ಕೈಗೆತ್ತಿಕೊಳ್ಳಲಿರುವ ವುಮೆನಿಯಾ ಎಂಬ ಪ್ರಯೋಗಾತ್ಮಕ ಚಿತ್ರದಲ್ಲೂ ಮುಖ್ಯ ಅಭಿನೇತ್ರಿಯಾಗಿ ತಾಪ್ಸಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.  ಪಿಂಕ್ ಚಿತ್ರದೊಂದಿಗೆ ಬಾಲಿವುಡ್​ನ ಭರವಸೆಯ ನಟಿಯಾಗಿ ಗುರುತಿಸಿಕೊಂಡಿರುವ ತಾಪ್ಸಿ ಪನ್ನು ಕ್ರೀಡಾ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಳ್ಳಲು ಮನಸ್ಸು ಮಾಡಿದ್ದು ಉತ್ತಮ ಬೆಳವಣಿಗೆ. ಆದರೆ ಇನ್ನೂ ಚಿತ್ರಕಥೆ ರೆಡಿಯಾಗಿರದ ಈ ಬಯೋಪಿಕ್​ನಲ್ಲಿ ತಾಪ್ಸಿ ಪನ್ನು ಸಿಕ್ಸರ್ ಹೊಡಿಯಲ್ಲಿದ್ದಾರಾ ಎಂಬುದು ಮಾತ್ರ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ