Hrithik Roshan: ನಾನು ಹೃತಿಕ್​ ರೋಷನ್​ ಅಭಿಮಾನಿ ಎಂದ ತಾಪ್ಸಿ: ಅದಕ್ಕೆ ನಟನ ಪ್ರತಿಕ್ರಿಯೆ ಹೀಗಿತ್ತು..!

Hrithik Roshan And Taapsee Pannu: ತಾಪ್ಸಿ ಪನ್ನು ಹಾಗೂ ಅವರ ಸಹೋದರಿ ಶಗುನ್​ ಪನ್ನು ಸಹ ಹೃತಿಕ್​ ರೋಷನ್​ ಅವರ ದೊಡ್ಡ ಅಭಿಮಾನಿಗಳಂತೆ. ಇತ್ತೀಚೆಗಷ್ಟೆ ತಾಪ್ಸಿ ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಒಂದು ವಿಡಿಯೋ ಪೋಸ್ಟ್​ ಮಾಡಿದ್ದು, ಅದರಲ್ಲಿ ತಾಪ್ಸಿ ಹಾಗೂ ಅವರ ಸಹೋದರಿ ಶಗುನ್​ ಇಬ್ಬರೂ ಹೃತಿಕ್​ ಅವರ ಫ್ಯಾನ್ಸ್​ ಎಂದು ಹೇಳಿಕೊಂಡಿದ್ದಾರೆ. 

ಹೃತಿಕ್ ​ರೋಷನ್​ ಹಾಗೂ ತಾಪ್ಸಿ ಪನ್ನು

ಹೃತಿಕ್ ​ರೋಷನ್​ ಹಾಗೂ ತಾಪ್ಸಿ ಪನ್ನು

  • Share this:
ನಟ ಹೃತಿಕ್ ರೋಷನ್​ ಅವರ ಅಭಿನಯ, ಸ್ಟೈಲ್​, ಡ್ಯಾನ್ಸ್​ಗೆ ಈಗಾಗಲೇ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಈ ಬಳಗದಲ್ಲಿ ಸ್ಟಾರ್ ನಟ-ನಟಿಯರೂ ಇದ್ದಾರೆ. ಈಗ ಈ ಬಳಗಕ್ಕೆ ಮತ್ತಿಬ್ಬರು ಅಭಿಮಾನಿಗಳ ಹೆಸರು ಸೇರ್ಪಡೆಯಾಗಿದೆ.

ತಾಪ್ಸಿ ಪನ್ನು ಹಾಗೂ ಅವರ ಸಹೋದರಿ ಶಗುನ್​ ಪನ್ನು ಸಹ ಹೃತಿಕ್​ ರೋಷನ್​ ಅವರ ದೊಡ್ಡ ಅಭಿಮಾನಿಗಳಂತೆ. ಇತ್ತೀಚೆಗಷ್ಟೆ ತಾಪ್ಸಿ ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಒಂದು ವಿಡಿಯೋ ಪೋಸ್ಟ್​ ಮಾಡಿದ್ದು, ಅದರಲ್ಲಿ ತಾಪ್ಸಿ ಹಾಗೂ ಅವರ ಸಹೋದರಿ ಶಗುನ್​ ಇಬ್ಬರೂ ಹೃತಿಕ್​ ಅವರ ಫ್ಯಾನ್ಸ್​ ಎಂದು ಹೇಳಿಕೊಂಡಿದ್ದಾರೆ.

taapsee pannu told herself hrithik roshan big fan then the actor gave this reply
ತಾಪ್ಸಿ ಅವರ ಇನ್​ಸ್ಟಾ ಸ್ಟೋರಿ


ಜೊತೆಗೆ ಈ ವಿಡಿಯೋ ಮಾಡಿದ ಸಮಯದಲ್ಲಿ ಟಿವಿಯಲ್ಲಿ ಈ ಇಬ್ಬರು 'ಕಹೋ ನಾ ಪ್ಯಾರ್​ ಹೈ' ಸಿನಿಮಾ ನೋಡುತ್ತಿರುತ್ತಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದ ತಾಪ್ಸಿ ತಾವು ಹೃತಿಕ್​ ಅವರ ಫ್ಯಾನ್ಸ್ ಎಂದು ಹೇಳಿದ್ದರು.

ಇದನ್ನೂ ಓದಿ: Saif-Kareena: ಮಾಸ್ಕ್​ ಇಲ್ಲದೆ ತೈಮೂರ್​ ಜೊತೆ ಹೊರಗಡೆ ಬಂದು ಟ್ರೋಲ್​ ಆದ ಸೈಫ್​-ಕರೀನಾ: ಬುದ್ಧಿ ಹೇಳಿದ ಪೊಲೀಸ್​..!

ತಾಪ್ಸಿ ಹಂಚಿಕೊಂಡಿದ್ದ ಸ್ಟೋರೀನ ಫೋಟೋವನ್ನು ಹಂಚಿಕೊಂಡ ನಟ ಹೃತಿಕ್​ ಈ ಹೊಗಳಿಕೆ ನನಗೆ ಖುಷಿ ಕೊಟ್ಟಿದೆ ಎಂದು ಬರೆದುಕೊಂಡು ಪೋಸ್ಟ್​ ಮಾಡಿದ್ದಾರೆ.

taapsee pannu told herself hrithik roshan big fan then the actor gave this reply
ಹೃತಿಕ್​ ರೋಷನ್​ ಅವರ ಇನ್​ಸ್ಟಾ ಪೋಸ್ಟ್​


ಹೃತಿಕ್​ ರೋಷನ್​ ಅಭಿನಯದ 'ಕಹೋ ನಾ ಪ್ಯಾರ್​ ಹೈ' ಸಿನಿಮಾ 2000 ರಿಲೀಸ್​ ಆಗಿದ್ದು, ಬ್ಲಾಕ್​ಬಸ್ಟರ್ ಆಗಿತ್ತು. ಈ ಸಿನಿಮಾವನ್ನು ರಾಕೇಶ್ ರೋಷನ್​ ಅವರೇ ನಿರ್ದೇಶಿಸಿದ್ದರು. ಇದಾದ ನಂತರ ಅಪ್ಪನ ನಿರ್ದೇಶನದಲ್ಲಿ ಹೃತಿಕ್​ ಸಾಲು ಸಾಲು ಸಿನಿಮಾಗಳನ್ನು ಮಾಡಿದ್ದು, ಈಗ 'ಕ್ರಿಷ್​ 4'ಕ್ಕೆ ತಯಾರಿ ನಡೆಸಿದ್ದಾರೆ.

HDB Rakshit Shetty: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ..!

First published: