Shah Rukh Khan New Movie: ಶಾರುಖ್​ ಅಭಿನಯಿಸುತ್ತಿರುವ ಹೊಸ ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿ..!

Taapsee Pannu: 2018ರಲ್ಲಿ ತೆರೆಕಂಡ ಝೀರೋ ಸಿನಿಮಾದ ಸೋಲಿನ ನಂತರ ಶಾರುಖ್​ ಮತ್ತೆ ತಮ್ಮ ಹೊಸ ಚಿತ್ರದ ಬಗ್ಗೆ ಚಕಾರ ಎತ್ತಲಿಲ್ಲ. ಆದರೆ ಅಭಿಮಾನಿಗಳು ಮಾತ್ರ ಯಾವಾಗ ಹೊಸ ಸಿನಿಮಾ ಪ್ರಕಟಿಸುತ್ತಾರೆ ಅಂತ ಕಾಯುತ್ತಿದ್ದರು. ಈಗ ಕಿಂಗ್​ ಖಾನ್​ ಅಭಿನಯದ ಹೊಸ ಸಿನಿಮಾಗೆ ನಾಯಕಿ ಫಿಕ್ಸ್​ ಆಗಿದ್ದಾಳೆ.

ತಾಪ್ಸಿ ಪನ್ನು ಹಾಗೂ ಶಾರುಖ್​ ಖಾನ್​

ತಾಪ್ಸಿ ಪನ್ನು ಹಾಗೂ ಶಾರುಖ್​ ಖಾನ್​

  • Share this:
ಕಿಂಗ್​ ಖಾನ್​ ಶಾರುಖ್​ ಖಾನ್​ ಅವರನ್ನು ನೆಟ್ಟಿಗರು ಹಾಗೂ ಅಭಿಮಾನಿಗಳು ಅವರ ಹೊಸ ಸಿನಿಮಾದ ಕುರಿತಾಗಿ ಸಾಕಷ್ಟು ಸಮಯದಿಂದ ಕೇಳುತ್ತಲೇ ಇದ್ದರು. ಶಾರುಖ್​ ಖಾನ್​ 2018ರಲ್ಲಿ ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್​ ಜೊತೆ ನಟಿಸಿದ್ದ ಝೀರೋ ಸಿನಿಮಾ ನೆಲಕಚ್ಚಿತ್ತು. ಈ ಸಿನಿಮಾದ ಸೋಲಿನ ನಂತರ ಶಾರುಖ್​ ಮತ್ತೆ ಹೊಸ ಸಿನಿಮಾದ ಮಾತೇ ಎತ್ತಲಿಲ್ಲ. ವರ್ಷಕ್ಕೆ ಒಂದಾದರೂ ಸಿನಿಮಾ ಕೊಡುತ್ತಿದ್ದ ಶಾರುಖ್​, ಕಳೆದ ಎರಡು ವರ್ವಗಳಿಂದ ತಮ್ಮ ಹೊಸ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಹಿಂದೆ ನೆಟ್ಟಿಗರು ಶಾರುಖ್​ ಅವರ ಹೊಸ ಚಿತ್ರ ಯಾವಾಗ ಎಂದು ಪ್ರಶ್ನಿಸುತ್ತಾ ಟ್ರೆಂಡ್​ ಮಾಡಿದ್ದರು. ಆಗ ಅಭಿಮಾನಿಗಳು ಮತ್ತೆ ಶಾರುಖ್​ ಅವರ ಬೆಂಬಲಕ್ಕೆ ನಿಂತರು. ಹಿಟ್​ ಸಿನಿಮಾಗಳನ್ನು ಕೊಟ್ಟು ರಂಜಿಸಿರುವ ನಟನ ಜೊತೆ ನಾವಿದ್ದೇವೆ ಎಂದರು. 

ಇನ್ನು, ಲಾಕ್​ಡೌನ್​ನಲ್ಲಿ ಶಾರುಖ್​ ತಮ್ಮ ಮನೆಯಲ್ಲೇ ಶೂಟಿಂಗ್​ ಮಾಡುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆಗಲೂ ಸಹ ಅದು ಯಾವುದೋ ಸಾಕ್ಷ್ಯಚಿತ್ರ ಅಥವಾ ಜಾಹೀರಾತಿನ ಚಿತ್ರೀಕರಣ ಇರಬೇಕು ಎನ್ನಲಾಗಿತ್ತು. ಈ ಸುದ್ದಿಗಳ ನಡುವೆಯೇ ಶಾರುಖ್​ ಅವರ ಹೊಸ ಸಿನಿಮಾದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡೋಕೆ ಆರಂಭವಾಗಿದೆ.

bollywood actor shah rukh khan tweeted about his upcoming films
ಶಾರುಖ್​ ಮಾಡಿದ್ದ ಟ್ವೀಟ್​


shahrukh khan donates 25000 ppe kits to fight covid 19 maharashtra minister rajesh tope says thanks
ನಟ ಶಾರುಖ್​ ಖಾನ್


ಸ್ಟಾರ್​ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ನಿರ್ದೇಶನದಲ್ಲಿ ಶಾರುಖ್​ ಬಹಳ ಸಮಯದ ನಂತರಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾಗೆ ಈಗ ನಾಐಕಿ ಸಹ ಫಿಕ್ಸ್​ ಆಗಿದ್ದಾರಂತೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತಾಪ್ಸಿ ಪನ್ನು ಶಾರುಖ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ.

Upcoming movie of @iamsrk -#Pathan #Sanki ಸಾಲು ಸಾಲು ಸೋಲು ಕಂಡಿರುವ ಶಾರುಖ್​ ಖಾನ್​ ಈಗ ಮತ್ತೆ ಕಮ್​ಬ್ಯಾಕ್​ ಮಾಡಲು ಸಾಕಷ್ಟು ಶ್ರಮಪಡುತ್ತಿದ್ದಾರೆ. ಹಿಟ್ ಸಿನಿಮಾಗಳನ್ನು ನೀಡಿರುವ ರಾಜ್​ಕುಮಾರ್ ಹಿರಾನಿ ಸಹ ಒಂದು ಸಖತ್​ ಲವ್ ಸ್ಟೋರಿ ಮಾಡಲು ಪ್ಲಾನ್​ ಮಾಡಿದ್ದಾರಂತೆ.ತಾಪ್ಸಿ ಈಗಾಗಲೇ ಶಾರುಖ್​ ಖಾನ್​ ಅವರ ಹೋಂ ಪ್ರೊಡಕ್ಷನ್​ನಲ್ಲಿ ನಿರ್ಮಿಸಿರುವ ಬದ್ಲಾ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಶಾರುಖ್​ ಜತೆಗೆ ಅಭಿನಯಿಸಲಿದ್ದಾರೆ. ಸದ್ಯ ಈ ಹೊಸ ಸಿನಿಮಾದ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಅದಕ್ಕಾಗಿ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: Premam Poojyam: 25ನೇ ಸಿನಿಮಾದ ಚಿತ್ರೀಕರಣ ಮುಗಿಸಿದ ನಟ ನೆನಪಿರಲಿ ಪ್ರೇಮ್​..!

ಇನ್ನು ಶಾರುಖ್​ ಲಾಕ್​ಡೌನ್​ನಲ್ಲಿ ಸಾಕಷ್ಟು ಮಂದಿಗೆ ನೆರವಿನ ಹಸ್ತ ಚಾಚಿದ್ದರು. ಆದರೆ ಸುಶಾಂತ್​ ಸಿಂಗ್​ ಸಾವಿನ ಪ್ರಕರಣದಲ್ಲಿ ಹಾಗೂ ಕಂಗನಾ ಜತೆ ಮಹಾರಾಷ್ಟ್ರದ ಸರ್ಕಾರ ವರ್ತಿಸುತ್ತಿರುವ ವಿಷಯದಲ್ಲಿ ಮೌನವಹಿಸಿದ್ದರಿಂದ ನೆಟ್ಟಿಗರು ಸಾಕಷ್ಟು ಟೀಕಿಸುತ್ತಿದ್ದಾರೆ.
Published by:Anitha E
First published: