ಗಂಡಸಿನಂತೆ ದೇಹ ಉಳ್ಳವಳು ಎಂದು ಟ್ರೋಲ್ ಮಾಡಿದವರಿಗೆ ಧನ್ಯವಾದ ಸಲ್ಲಿಸಿದ ನಟಿ Taapsee Pannu..!

ಸಿನಿಮಾದ ಪಾತ್ರವಾಗಿ ಮಾತ್ರವಲ್ಲ, ಅದರ ಚಿತ್ರೀಕರಣದ ಸೆಟ್‍ನಲ್ಲಿಯೂ ತಾಪ್ಸಿ ಪನ್ನು ಅದೇ ಹೋರಾಟದ ಮನೋಭಾವ ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಗ್ಗೆ ಮಾಡಲಾಗುವ ಟ್ರೋಲ್‍ಗಳಿಗೆ ಉತ್ತರಿಸುವುದಕ್ಕೂ ತಾಪ್ಸಿ ತನ್ನದೇ ಆದ ಮಾರ್ಗ ಕಂಡಿಕೊಂಡಿದ್ದಾರೆ.

ನಟಿ ತಾಪ್ಸಿ ಪನ್ನು

ನಟಿ ತಾಪ್ಸಿ ಪನ್ನು

  • Share this:
ತಾಪ್ಸಿ ಪನ್ನು (Taapsee Pannu)ಬಾಲಿವುಡ್‍ನ ಸ್ಟಾರ್ ನಟಿ ಅಲ್ಲದಿದ್ದರೂ, ತಮ್ಮ ಅಭಿನಯ ಮತ್ತು ವಿಭಿನ್ನ ರೀತಿಯ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅಮಿತಾಭ್ ಬಚ್ಚನ್ ಸೇರಿದಂತೆ ಸಿನಿಮಾ ರಂಗದ ಖ್ಯಾತ ನಾಯಕ ನಟರ ಜೊತೆ ತೆರೆ ಹಂಚಿಕೊಂಡಿರುವ ಈ ಬಹುಭಾಷಾ ನಟಿಗೆ ವಿಭಿನ್ನ ಹಾಗೂ ಅಥ್ಲೆಟಿಕ್ ಪಾತ್ರಗಳನ್ನು ಮಾಡುವುದೆಂದರೆ ಬಹಳ ಇಷ್ಟ. ಹಾಗಾಗಿಯೇ ಅವರು, ಜಿಮ್‍ನಲ್ಲಿ ವ್ಯಾಯಾಮಕ್ಕಾಗಿ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಚುರುಕು ವ್ಯಕ್ತಿತ್ವದ ತಾಪ್ಸಿ ಪನ್ನು ನಟನೆ ಮತ್ತು ಫಿಟ್ನೆಸ್​  (Fitness) ಎರಡರಲ್ಲೂ ಸೈ ಎನಿಸಿಕೊಂಡವರು. ತಮ್ಮ ಮುಂಬರುವ ಚಿತ್ರದ ಪಾತ್ರಕ್ಕಾಗಿ ಕಷ್ಟಕರವಾದ ವ್ಯಾಯಾಮಗಳನ್ನು ಮಾಡಿರುವ ಅವರು, ಫಿಟ್ನೆಸ್​ ಉತ್ಸಾಹಿಗಳಿಗೆ ಸ್ಪೂರ್ತಿ ನೀಡುತ್ತಿದ್ದಾರೆ. ಅಕ್ಟೋಬರ್ 15 ರಂದು ಆರಂಭವಾಗಲಿರುವ ಕ್ರೀಡೆ ಆಧಾರಿತ ಕಥೆಯುಳ್ಳ ಸಿನಿಮಾ ರಶ್ಮಿ ರಾಕೆಟ್‍ನಲ್ಲಿ (Rashmi Rocket) ತಾಪ್ಸಿ ಪನ್ನು ಓಟಗಾರ್ತಿಯ ಪಾತ್ರ ನಿರ್ವಹಿಸಲಿದ್ದಾರೆ.

ಸಿನಿಮಾದ ಪಾತ್ರವಾಗಿ ಮಾತ್ರವಲ್ಲ, ಅದರ ಚಿತ್ರೀಕರಣದ ಸೆಟ್‍ನಲ್ಲಿಯೂ ತಾಪ್ಸಿ ಪನ್ನು ಅದೇ ಹೋರಾಟದ ಮನೋಭಾವ ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಗ್ಗೆ ಮಾಡಲಾಗುವ ಟ್ರೋಲ್‍ಗಳಿಗೆ ಉತ್ತರಿಸುವುದಕ್ಕೂ ತಾಪ್ಸಿ ತನ್ನದೇ ಆದ ಮಾರ್ಗ ಕಂಡಿಕೊಂಡಿದ್ದಾರೆ.ಇತ್ತೀಚೆಗೆ ಟ್ವಿಟ್ಟರ್ ಬಳಕೆದಾರರೊಬ್ಬರು, ತಾಪ್ಸಿ ಪನ್ನು ಮಾತ್ರ “ಗಂಡಸರಂತೆ” ದೇಹ ಹೊಂದಲು ಸಾಧ್ಯ ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ನಟಿ ತಾಪ್ಸಿ ಪನ್ನು, “ಒಟ್ಟಾರೆಯಾಗಿ ನಾನು ಹೇಳುವುದೇನು ಎಂದರೆ, ಈ ವಾಕ್ಯವನ್ನು ನೆನಪಿಡಿ ಮತ್ತು 23 ಸೆಪ್ಟೆಂಬರ್‌ಗಾಗಿ ಕಾಯಿರಿ. ಮತ್ತು ಮುಂಚಿತವಾಗಿ ಧನ್ಯವಾದಗಳು. ಈ ಹೊಗಳಿಕೆ ಪಡೆಯುವುದಕ್ಕಾಗಿ ನಾನು ಬಹಳ ಕಷ್ಟ ಪಟ್ಟಿದ್ದೇನೆ” ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: Taapse Pannu: ತಾಪ್ಸಿ ಪನ್ನು ಅಭಿನಯದ ರಶ್ಮಿ ರಾಕೆಟ್ ಅಕ್ಟೋಬರ್ 15ರಂದು ಬಿಡುಗಡೆ ಸಿದ್ಧ..

ತನ್ನ ಅದ್ಭುತ ಪ್ರತಿಭೆ ಮತ್ತು ವಿವಿಧ ಪಾತ್ರಗಳಿಗೆ ಒಗ್ಗಿಕೊಳ್ಳುವ ಸಾಮರ್ಥ್ಯದ ಮೂಲಕ ತಾಪ್ಸಿ ಪನ್ನು ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪಾತ್ರಗಳಿಗಾಗಿ ಆಕೆ ಪಡೆದಿರುವ ಕಠಿಣ ತರಬೇತಿಗಳು ಅಚ್ಚರಿ ಉಂಟು ಮಾಡುವಂತಹ ದೈಹಿಕ ಪರಿವರ್ತನೆಗೆ ಕಾರಣವಾಗಿವೆ ಎಂದರೆ ತಪ್ಪಾಗದು.


View this post on Instagram


A post shared by Taapsee Pannu (@taapsee)


ತಾಪ್ಸಿ ಪನ್ನು ಅಭಿಮಾನಿಗಳಿಗೆ ಇತ್ತೀಚೆಗೆ , ರಶ್ಮಿ ರಾಕೆಟ್ ಸಿನಿಮಾದ ಪಾತ್ರಕ್ಕಾಗಿ ತಾವು ಪಟ್ಟ ಪರಿಶ್ರಮದ ಇಣುಕು ನೋಟವನ್ನು ತೋರಿಸಿದರು. ಅಂದರೆ ಅವರು, ಸ್ಟೇಡಿಯಂನಲ್ಲಿ ಕ್ಯಾಮರಾಗೆ ಬೆನ್ನು ಹಾಕಿ ನಿಂತು ತೆಗೆಸಿದ್ದ ಫೋಟೋ ಒಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅದೊಂದು ಪೋಟೋ ಮಾತ್ರವಲ್ಲ, ತಾಪ್ಸಿಯ ಇನ್‍ಸ್ಟಾ ಖಾತೆಯಲ್ಲಿ, ಕ್ರೀಡಾಂಗಣದಲ್ಲಿ ವಿಭಿನ್ನ ವ್ಯಾಯಾಮಗಳನ್ನು ಮಾಡುತ್ತಿರುವ ಹಲವಾರು ಫೋಟೋಗಳನ್ನು ಕಾಣಬಹುದು.

ಇದನ್ನೂ ಓದಿ: Taapsee Pannu: ಸೀರೆಯುಟ್ಟು ಶೂ ತೊಟ್ಟು ವಿದೇಶದಲ್ಲಿ ಸುತ್ತಾಡಿದ ನಟಿ ತಾಪ್ಸಿ ಪನ್ನು..!

ತಾಪ್ಸಿ ಪನ್ನು ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಜೊತೆ ನಟಿಸಿರುವ ಫ್ಯಾಂಟಸಿ –ಕಾಮಿಡಿ ಸಿನಿಮಾ ಅನ್ನಬೆಲೆ ಕಳೆದ ವಾರ ಬಿಡುಗಡೆ ಆಗಿದೆ. ವಿಕ್ರಾಂತ್ ಮಸ್ಸಿ ಜೊತೆ ನಟಿಸಿರುವ ಹಸೀನ್ ದಿಲ್‍ರುಬಾ ಕೂಡ ಪ್ರಸ್ತುತ ನೆಟ್‍ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ. ತಾಪ್ಸಿ ತಮ್ಮ ಬ್ಲರ್ ಸಿನಿಮಾದ ಚಿತ್ರೀಕರಣವನ್ನು ಈಗಾಗಲೇ ಮುಗಿಸಿದ್ದಾರೆ. ತಾಪ್ಸಿ ಬಾಲಿವುಡ್‍ನ ಸ್ಟಾರ್ ನಟಿ ಅಥವಾ ಅತ್ಯಂತ ಗ್ಲಾಮರಸ್ ನಟಿ ಅಲ್ಲದಿದ್ದರೂ, ಆಕೆಗೆ ಅವಕಾಶಗಳ ಕೊರತೆ ಇಲ್ಲ. ಆಕೆಯ ಕೈಯಲ್ಲಿ ಸದ್ಯಕ್ಕೆ ಲೂಪ್ ಲಪೇಟಾ, ದೊಬಾರಾ ಮತ್ತು ಶಬ್ಭಾಸ್ ಮೀತು ಚಿತ್ರಗಳಿವೆ.
Published by:Anitha E
First published: