ತಾಪ್ಸಿ ಪನ್ನುಗೆ ಶಾಕ್ ಕೊಟ್ಟ ವಿದ್ಯುತ್ ಮಂಡಳಿ; ಎಲೆಕ್ಟ್ರಿಸಿಟಿ ಬಿಲ್ ನೋಡಿ ಕಂಗಾಲಾದ ನಟಿ!

ಲಾಕ್​ಡೌನ್​ ಘೋಷಣೆ ಆಗಿ 3 ತಿಂಗಳು ಕಳೆದಿದೆ. ಜೂನ್​ ತಿಂಗಳ ಕರೆಂಟ್​ ಬಿಲ್​ ನೋಡಿ ನನಗೆ ನಿಜಕ್ಕೂ ಅಚ್ಚರಿ ಆಗಿದೆ. ಇದನ್ನು ನೋಡಿದ ನಂತರ ಯಾವ ಹೊಸ ಎಲೆಕ್ಟ್ರಿಕ್​ ವಸ್ತುಗಳನ್ನು ಹೊಸದಾಗಿ ಖರೀದಿಸಿದ್ದೇನೆ ಎನ್ನುವ ಆಲೋಚನೆ ಪ್ರಾರಂಭವಾಗಿದೆ, ಎಂದಿದ್ದಾರೆ ಅವರು

news18-kannada
Updated:June 29, 2020, 3:11 PM IST
ತಾಪ್ಸಿ ಪನ್ನುಗೆ ಶಾಕ್ ಕೊಟ್ಟ ವಿದ್ಯುತ್ ಮಂಡಳಿ; ಎಲೆಕ್ಟ್ರಿಸಿಟಿ ಬಿಲ್ ನೋಡಿ ಕಂಗಾಲಾದ ನಟಿ!
ತಾಪ್ಸಿ ಪನ್ನು
  • Share this:
ನಟಿ ತಾಪ್ಸಿ ಪನ್ನು ವಿದ್ಯುತ್​ ಪೂರೈಕೆದಾರರ ವಿರುದ್ಧ ಅಕ್ಷರಶಃ ಸಿಟ್ಟಾಗಿದ್ದರು. ಅಷ್ಟೇ ಅಲ್ಲ ಈ ಬಗ್ಗೆ ಟ್ವಿಟ್ಟರ್​ನಲ್ಲೂ ಸಿಟ್ಟು ಹೊರ ಹಾಕಿದ್ದರು! ಇದಕ್ಕೆ ಕಾರಣ ತಾಪ್ಸಿ ಮನೆಗೆ ಬಂದ ಕರೆಂಟ್​ ಬಿಲ್​. ಏನನ್ನೂ ಬಳಕೆ ಮಾಡದೇ ಇದ್ದರೂ ಸಾವಿರಾರು ರೂಪಾಯಿ ವಿದ್ಯುತ್​ ಬಿಲ್​ ಬಂದಿರುವುದನ್ನು ನೋಡಿ ನಟಿ ಕಂಗಾಲಾಗಿದ್ದಾರೆ!

ಹೌದು, ತಾಪ್ಸಿ ಪನ್ನು ಮನೆಗೆ ಬರೋಬ್ಬರಿ 36 ಸಾವಿರ ರೂಪಾಯಿ ವಿದ್ಯುತ್​​ ಬಿಲ್​ ಬಂದಿದೆಯಂತೆ! ಇದನ್ನು ನೋಡಿ ಅವರು ಶಾಕ್​ಗೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ ಕೂಡ.

ಲಾಕ್​ಡೌನ್​ ಘೋಷಣೆ ಆಗಿ 3 ತಿಂಗಳು ಕಳೆದಿದೆ. ಜೂನ್​ ತಿಂಗಳ ಕರೆಂಟ್​ ಬಿಲ್​ ನೋಡಿ ನನಗೆ ನಿಜಕ್ಕೂ ಅಚ್ಚರಿ ಆಗಿದೆ. ಇದನ್ನು ನೋಡಿದ ನಂತರ ಯಾವ ಹೊಸ ಎಲೆಕ್ಟ್ರಿಕ್​ ವಸ್ತುಗಳನ್ನು ಹೊಸದಾಗಿ ಖರೀದಿಸಿದ್ದೇನೆ ಎನ್ನುವ ಆಲೋಚನೆ ಪ್ರಾರಂಭವಾಗಿದೆ, ಎಂದಿದ್ದಾರೆ ಅವರು.


ವಿದ್ಯುತ್​ ಬಿಲ್​ಗಳನ್ನು ಕೂಡ ಅವರು ಅಟ್ಯಾಚ್​ ಮಾಡಿದ್ದು, ಮೇ ತಿಂಗಳಲ್ಲಿ 3,850 ಹಾಗೂ ಏಪ್ರಿಲ್​ ತಿಂಗಳಲ್ಲಿ 4,390 ರೂಪಾಯಿ ಕರೆಂಟ್​ ಬಿಲ್​ ಬಂದಿತ್ತಂತೆ. ಆದರೆ, ಜೂನ್​ ತಿಂಗಳಲ್ಲಿ 36 ಸಾವಿರ ರೂಪಾಯಿ ಬಿಲ್ ಬಂದಿರುವುದನ್ನು ನೋಡಿ ಅವರು ನಿಜಕ್ಕೂ ಅಚ್ಚರಿಗೊಂಡಿದ್ದಾರೆ! ಅಲ್ಲದೆ ಯಾವ ಆಧಾರದ ಮೇಲೆ ಬಿಲ್​ ಹಾಕುತ್ತೀರಿ ಎಂದು ಪ್ರಶ್ನಿಸಿದ್ದಾರೆ.

First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading