ಸಾಮಾನ್ಯವಾಗಿ ಈ ಸಿನೆಮಾ (Cinema) ನಟ-ನಟಿಯರು (Actor-Actress) ತಮ್ಮ ಚಿತ್ರೋದ್ಯಮದಲ್ಲಿ ಭಾರಿ ಡಿಮ್ಯಾಂಡ್ ನಲ್ಲಿ ಇರಬೇಕು ಎಂದರೆ ಒಳ್ಳೆಯ ಫಿಟ್ನೆಸ್ ಅನ್ನು ಮತ್ತು ಸೌಂದರ್ಯವನ್ನು (Beauty) ಹಾಗೆಯೇ ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಇದಕ್ಕಾಗಿ ನಟ (Actor) ಮತ್ತು ನಟಿಯರು ಅನೇಕ ಲಕ್ಷಗಳನ್ನು ಖರ್ಚು ಮಾಡುತ್ತಿರುತ್ತಾರೆ. ನೋಡುವವರಿಗೆ ಅದು ‘ಅಬ್ಬಾ.. ಇದಕ್ಕೆಲ್ಲಾ ಎಷ್ಟೊಂದು ಖರ್ಚು ಮಾಡ್ತಾರೆ ಇವರು’ ಅಂತ ಅನ್ನಿಸುವುದು ಸಹಜ. ಆದರೆ ಅವರ ಕ್ಷೇತ್ರದಲ್ಲಿ ಅವರಿಗೆ ಫಿಟ್ನೆಸ್ (Fitness) ಕಾಪಾಡಿಕೊಳ್ಳಲು ಡಯಟಿಷಿಯನ್ ಮತ್ತು ಜಿಮ್ ತರಬೇತುದಾರರು (Gym Trainer) ಬೇಕೇಬೇಕು.
ನಟಿ ತಾಪ್ಸಿ ತಮ್ಮ ಡಯಟಿಷಿಯನ್ ಗೆ ಅಂತಾನೆ ಲಕ್ಷ ಖರ್ಚು ಮಾಡ್ತಾರಂತೆ
ಇಲ್ಲೊಬ್ಬ ನಟಿ ತಿಂಗಳಿಗೆ 1 ಲಕ್ಷ ರೂಪಾಯಿ ಬರೀ ಡಯಟಿಷಿಯನ್ ಗೆ ಅಂತಾನೆ ಖರ್ಚು ಮಾಡ್ತಾರಂತೆ ನೋಡಿ. ಹೌದು.. ಬಾಲಿವುಡ್ ನಟಿ ತಾಪ್ಸಿ ಪನ್ನು ಅವರು ಪ್ರತಿ ತಿಂಗಳು ತಮ್ಮ ಡಯಟಿಷಿಯನ್ ಗೆ ಅಂತಾನೆ ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ. ಅವರ ಈ ಖರ್ಚುಗಳ ಬಗ್ಗೆ ತನ್ನ ಹೆತ್ತವರೊಂದಿಗೆ ವಾದಿಸುವುದಾಗಿ ಸಹ ಒಪ್ಪಿಕೊಂಡರು. ತನ್ನ ವೃತ್ತಿಯಲ್ಲಿರುವವರಿಗೆ ಇದೊಂದು ತುಂಬಾನೇ ಅವಶ್ಯಕವಾದ ವೆಚ್ಚವಾಗಿದೆ ಎಂದು ತಾಪ್ಸಿ ಹೇಳಿದರು.
ಇತ್ತೀಚಿನ ಒಂದು ಸಂದರ್ಶನದಲ್ಲಿ, ತಾಪ್ಸಿ ತನ್ನ ತಂದೆ ಎಷ್ಟು ಜಿಪುಣರಾಗಿದ್ದಾರೆ ಎಂಬುದರ ಬಗ್ಗೆ ಮಾತನಾಡಿದರು ಮತ್ತು ತನ್ನ ಇಡೀ ಜೀವನವನ್ನು ಹಣವನ್ನು ಉಳಿಸಿದ ನಂತರವೂ ಅವರು ತನಗಾಗಿ ಖರ್ಚು ಮಾಡುವುದಿಲ್ಲ ಎಂದು ಹೇಳಿದರು.
ಅವರು ಮತ್ತು ಅವರ ಸಹೋದರಿ ಶಗುನ್ ಗೆ ಅದ್ದೂರಿಯಾದ ಮದುವೆಯನ್ನು ಯೋಜಿಸುವ ಬಗ್ಗೆ ಅವರು ಚಿಂತಿಸಬೇಕಾಗಿಲ್ಲ, ಏಕೆಂದರೆ ಅವರು ಅದನ್ನು ಸ್ವತಃ ಭರಿಸಬಲ್ಲರು ಎಂದು ತಾಪ್ಸಿ ಹೇಳಿದರು.
ಆದರೆ, ತಾಪ್ಸಿ ತನ್ನ ತಂದೆಯ ಮೇಲೆ ಹಣ ಖರ್ಚು ಮಾಡಿದಾಗ ಸಹ ಅವರು ತಾಪ್ಸಿಯ ಮೇಲೆ ಕೋಪಗೊಳ್ಳುತ್ತಾರಂತೆ ಎಂದು ತಾಪ್ಸಿ ಹೇಳಿದರು.
ಇದಕ್ಕೆಲ್ಲಾ ಹಣ ಖರ್ಚು ಮಾಡಿದರೆ ತಾಪ್ಸಿಗೆ ಅಪ್ಪ ಬೈಯ್ತಾರಂತೆ..
"ನಾನು ಮನೆಗೆ ಹೋದಾಗ ಡಯಟಿಷಿಯನ್ ಗೆ ಅಂತ ಇಷ್ಟು ಹಣವನ್ನು ಖರ್ಚು ಮಾಡಿದ್ದಕ್ಕಾಗಿ ನನ್ನ ತಂದೆ ನನ್ನನ್ನು ಬೈಯುತ್ತಾರೆ ಎಂದು ನನಗೆ ತಿಳಿದಿದೆ" ಎಂದು ಅವರು ಹೇಳಿದರು. ಏಕೆಂದರೆ ತಾಪ್ಸಿ ಬರೋಬ್ಬರಿ ಒಂದು ತಿಂಗಳಿಗೆ ಸರಿಸುಮಾರು 1 ಲಕ್ಷ ರೂಪಾಯಿ ಡಯಟಿಷಿಯನ್ ಗೆ ಅಂತಾನೆ ಖರ್ಚು ಮಾಡ್ತಾರಂತೆ.
ಇದನ್ನೂ ಓದಿ: Bipasha Basu: 6 ಸ್ಟಾರ್ ನಟರ ಜೊತೆ ಲವ್! ನಂತರ 3 ವರ್ಷ ಕಿರಿಯ ಯುವಕನ ಮದುವೆಯಾದ ಬಾಲಿವುಡ್ ನಟಿ
"ನಾನು ಯಾವ ಚಿತ್ರದಲ್ಲಿ ನಟಿಸುತ್ತಿದ್ದೇನೆ ಮತ್ತು ನನ್ನ ಜೀವನದಲ್ಲಿ ನಾನು ಎಲ್ಲಿದ್ದೇನೆ ಎಂಬುದರ ಆಧಾರದ ಮೇಲೆ ನನ್ನ ಆಹಾರವು ನಿರಂತರವಾಗಿ ಬದಲಾಗುತ್ತಿರುತ್ತದೆ. ಪ್ರತಿ ನಾಲ್ಕು ಅಥವಾ ಐದು ವರ್ಷಗಳಿಗೊಮ್ಮೆ ನಿಮ್ಮ ದೇಹವೂ ಸಹ ಬದಲಾಗುತ್ತಿರುತ್ತದೆ.
ಈ ವೃತ್ತಿಯಲ್ಲಿ, ನಮ್ಮಲ್ಲಿ ಹೆಚ್ಚಿನವರಿಗೆ ವೃತ್ತಿಪರರ ಸಲಹೆ ಬೇಕು, ನಾವು ಯಾವ ನಗರದಲ್ಲಿರುತ್ತೇವೆ ಅಥವಾ ನಾವು ಯಾವ ದೇಶದಲ್ಲಿರುತ್ತೇವೆ ಎಂಬುದರ ಆಧಾರದ ಮೇಲೆ ನಮಗೆ ಯಾವ ಆಹಾರವು ಉತ್ತಮವಾಗಿದೆ ಎಂದು ನಮಗೆ ತಿಳಿದುಕೊಳ್ಳಲು ಅವರು ಸಹಾಯ ಮಾಡುತ್ತಾರೆ” ಎಂದು ನಟಿ ಹೇಳಿದರು.
ಡಯಟಿಷಿಯನ್ ಗೆ ಖರ್ಚು ಮಾಡುವುದು ಅವಶ್ಯಕತೆ ಎಂದ ತಾಪ್ಸಿ..
“ನೀವು ಅದರ ಬಗ್ಗೆ ಯೋಚಿಸಿದರೆ ಒಬ್ಬ ನಟ ಅಥವಾ ನಟಿಗೆ ಬೇರೆ ಯಾವ ರೀತಿಯ ಹಣ ಹೂಡಿಕೆ ಇರಲು ಸಾಧ್ಯ ಹೇಳಿ? ಅವಳು ತನ್ನ ತಾಯಿಗೂ ಸಹ ಈ ರೀತಿಯ ಡಯಟಿಷಿಯನ್ ಸೇವೆ ಇದೆ ಎಂದು ಹೇಳಿದರು. ಏಕೆಂದರೆ ನನ್ನ ತಾಯಿಗೆ ಜೀರ್ಣ ಕ್ರಿಯೆಯಲ್ಲಿ ಸಮಸ್ಯೆ ಇದೆ ಎಂದು ತಾಪ್ಸಿ ಹೇಳಿದರು.
ಆದರೆ ತಾಪ್ಸಿ ತಂದೆ ತಾಯಿಗಾಗಿ ಖರ್ಚು ಮಾಡಬೇಡಿ ಎಂದು ಹೇಳುತ್ತಾರಂತೆ, ಏಕೆಂದರೆ ಡಯಟಿಷಿಯನ್ ಅನ್ನು ಹೊಂದುವುದು ಫ್ಯಾನ್ಸಿ ವಿಷಯ ಎಂದು ಅವರು ಭಾವಿಸುತ್ತಾರೆ ಎಂದು ತಾಪ್ಸಿ ಹೇಳಿದರು. ಆದರೆ "ಇದು ಫ್ಯಾನ್ಸಿ ವೆಚ್ಚವಲ್ಲ, ಇದು ಅವಶ್ಯಕತೆಯಾಗಿದೆ" ಎಂದು ತಾಪ್ಸಿ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ