Taapsee Pannu: ನಟಿ ತಾಪ್ಸಿ ತಮ್ಮ ಪ್ರಿಯಕರನನ್ನು ಹೊಗಳಿದ ರೀತಿಗೆ ಫಿದಾ ಆದ ಫ್ಯಾನ್ಸ್!

ಇತ್ತೀಚೆಗೆ ಮೊದಲ ಬಾರಿ ಥಾಮಸ್ ಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಭಾರತ ಬ್ಯಾಡ್ಮಿಂಟನ್ ತಂಡವು ಇತಿಹಾಸ ಸೃಷ್ಟಿಸಿತು. ಬ್ಯಾಡ್ಮಿಂಟನ್ ತಂಡದ ತರಬೇತುದಾರ ಮಥಿಯಾಸ್ ಬೋ ಅವರ ಈ ವಿಶಿಷ್ಟವಾದ ಸಾಧನೆಗೆ ಅವರ ಗೆಳತಿ ತಾಪ್ಸಿ ಪನ್ನು ಅವರು ಹೇಗೆಲ್ಲಾ ಹೊಗಳಿದ್ದಾರೆ ನೋಡಿ.

ತಾಪ್ಸಿ ಪನ್ನು ಮತ್ತು ಮಥಿಯಾಸ್ ಬೋ

ತಾಪ್ಸಿ ಪನ್ನು ಮತ್ತು ಮಥಿಯಾಸ್ ಬೋ

  • Share this:
ಅನೇಕ ಬಾಲಿವುಡ್ ಹಾಗು ದಕ್ಷಿಣ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿಯರಲ್ಲಿ ತಾಪ್ಸಿ ಪನ್ನು (Taapsee Pannu) ಸಹ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಈ ನಟಿ ಒಂದಲ್ಲ ಒಂದು ಕಾರಣಕ್ಕೆ ಸದಾ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರುತ್ತಾರೆ. ‘ಪಿಂಕ್’ (Pink) ಚಿತ್ರದ ನಟಿ ಈಗ ಮತ್ತೆ ಸುದ್ದಿಯಲ್ಲಿರುವುದು ತಮ್ಮ ಪ್ರಿಯಕರ ಮಾಡಿದ ವಿಶೇಷವಾದ ಸಾಧನೆಯಿಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏನಪ್ಪಾ.. ಈ ನಟಿಯ ಪ್ರಿಯಕರ ಯಾರು ಎಂದು ಕೆಲವು ಅಭಿಮಾನಿಗಳು ತಮ್ಮ ಕಣ್ಣುಗಳ ಹುಬ್ಬುಗಳನ್ನು ಏರಿಸಿ ಆಶ್ಚರ್ಯ ಪಡಬಹುದು. ಹೌದು.. ಭಾರತೀಯ ಬ್ಯಾಡ್ಮಿಂಟನ್ (Indian Badminton) ತಂಡದ ತರಬೇತುದಾರ ಮಥಿಯಾಸ್ ಬೋ (Mathias Boe) ಅವರು ನಟಿ ತಾಪ್ಸಿ ಪನ್ನು ಅವರ ಪ್ರಿಯಕರ.

ಮೊದಲ ಬಾರಿ ಥಾಮಸ್ ಕಪ್ ಟ್ರೋಫಿ ಗೆದ್ದ ಭಾರತ ಬ್ಯಾಡ್ಮಿಂಟನ್ ತಂಡ
ಇತ್ತೀಚೆಗೆ ಮೊದಲ ಬಾರಿ ಥಾಮಸ್ ಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಭಾರತ ಬ್ಯಾಡ್ಮಿಂಟನ್ ತಂಡವು ಇತಿಹಾಸ ಸೃಷ್ಟಿಸಿತು. ಬ್ಯಾಡ್ಮಿಂಟನ್ ತಂಡದ ತರಬೇತುದಾರರಾದ ಮಥಿಯಾಸ್ ಬೋ ಅವರ ಈ ವಿಶಿಷ್ಟವಾದ ಸಾಧನೆಗೆ ಅವರ ಗೆಳತಿ ತಾಪ್ಸಿ ಪನ್ನು ಅವರು ಹೇಗೆಲ್ಲಾ ಹೊಗಳಿದ್ದಾರೆ ನೋಡಿ.

ನಿರಂತರವಾಗಿ ಆಟದ ಸ್ಕೋರ್ ಗಳು ಮತ್ತು ಅಪ್‌ಡೇಟ್ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ಕೊಳ್ಳುತ್ತಿದ್ದ ಥಪ್ಪಡ್ ಚಿತ್ರದ ನಟಿ ಭಾರತೀಯ ಬ್ಯಾಡ್ಮಿಂಟನ್ ತಂಡದ ಹುಡುಗರನ್ನು ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಶ್ಲಾಘಿಸಿದ್ದಾರೆ. ಅವರು ತನ್ನ ಗೆಳೆಯನಿಗಾಗಿ ಒಂದು ಸಿಹಿ ಟಿಪ್ಪಣಿಯನ್ನು ಸಹ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.

ಬ್ಯಾಡ್ಮಿಂಟನ್ ಅಭಿಮಾನಿಗಳನ್ನು ಹುರಿದುಂಬಿಸಿದ ತಾಪ್ಸಿ ಪನ್ನು
ನಟಿ ತಾಪ್ಸಿ ಪನ್ನು ತನ್ನ ಪ್ರಿಯಕರ ಮಥಿಯಾಸ್ ಗಾಗಿ ಒಳ್ಳೆ ಚಿಯರ್ ಲೀಡರ್ ತರಹ ಬ್ಯಾಡ್ಮಿಂಟನ್ ಅಭಿಮಾನಿಗಳನ್ನು ಹುರಿದುಂಬಿಸಿದ್ದಾರೆ. ಇತ್ತೀಚೆಗೆ, ಭಾರತೀಯ ಪುರುಷರ ತಂಡವು ಥಾಮಸ್ ಕಪ್ ನ ತಮ್ಮ ಮೊದಲ ಫೈನಲ್ ತಲುಪುವ ಮೂಲಕ ಇತಿಹಾಸವನ್ನು ಬರೆದ ನಂತರ ಅವರು ಡ್ಯಾನಿಶ್ ಬ್ಯಾಡ್ಮಿಂಟನ್ ದಂತಕಥೆಗೆ ಸಿಹಿ ಟಿಪ್ಪಣಿಯನ್ನು ಬರೆದಿದ್ದರು. ಈಗ ತಂಡವು ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದಾಗ, ತಾಪ್ಸಿ ಮತ್ತೊಮ್ಮೆ ಮಥಿಯಾಸ್ ಅವರ ಹೆಮ್ಮೆಯ ಗೆಳತಿಯಾಗಿದ್ದಾರೆ.

ಇದನ್ನೂ ಓದಿ: Puneeth Rajkumar: 4 ವರ್ಷದ ಹಿಂದಿನ ಪುನೀತ್ ಟ್ವೀಟ್​ ವೈರಲ್, ಇದು ನಿಜವಾಗಬಾರದಿತ್ತೇ ಎಂದು ಅಭಿಮಾನಿಗಳ ಕಣ್ಣೀರು

ಈ ಥಾಮಸ್ ಕಪ್ ಗೆಲುವಿನ ವೀಡಿಯೋವನ್ನು ಹಂಚಿಕೊಂಡ ತಾಪ್ಸಿ, ತಂಡದ ಸಹ ಆಟಗಾರರನ್ನು ಟ್ಯಾಗ್ ಮಾಡಿ, "ಹುಡುಗರು ಅದನ್ನು ಮಾಡಿ ತೋರಿಸಿದ್ದಾರೆ, ಭಾರತಕ್ಕೆ ಮೊಟ್ಟ ಮೊದಲ ಥಾಮಸ್ ಕಪ್" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಮಿಸ್ಟರ್ ಕೋಚ್ ನೀವು ನಮಗೆ ಹೆಮ್ಮೆ ತಂದಿದ್ದೀರಿ
ಇಷ್ಟೇ ಅಲ್ಲದೆ ನಟಿ ಒಂದು ಭಾವನಾತ್ಮಕ ಕ್ಷಣವನ್ನು ಸಹ ಹಂಚಿ ಕೊಂಡರು, ಅದು ಮಥಿಯಾಸ್ ಗೆಲುವಿನ ನಂತರ ಸಹ ಆಟಗಾರನನ್ನು ತಬ್ಬಿಕೊಳ್ಳುವುದನ್ನು ತೋರಿಸುತ್ತದೆ. ಫೋಟೋವನ್ನು ಹಂಚಿ ಕೊಂಡಿರುವ ಅವರು, "ಮಿಸ್ಟರ್ ಕೋಚ್ ನೀವು ನಮಗೆ ಹೆಮ್ಮೆ ತಂದಿದ್ದೀರಿ" ಎಂದು ಬರೆದಿದ್ದಾರೆ. ನಟಿ ಕೆಂಪು ಹೃದಯದ ಎಮೋಜಿ ಮತ್ತು ಭಾರತೀಯ ಧ್ವಜವನ್ನು ಪೋಸ್ಟ್ ನೊಂದಿಗೆ ಸೇರಿಸಿದ್ದಾರೆ.



ಮಥಿಯಾಸ್ ಅವರು ಭಾರತದ ಬ್ಯಾಡ್ಮಿಂಟನ್ ತರಬೇತುದಾರನಾಗಿದ್ದಕ್ಕೆ ತನ್ನ ಡ್ಯಾನಿಶ್ ಮಾಜಿ ಸಹ ಆಟಗಾರರು ಮತ್ತು ತರಬೇತುದಾರರು ತಮ್ಮನ್ನು ಜುದಾಸ್ (ದೇಶದ್ರೋಹಿ) ಎಂದು ಕರೆದ ಬಗ್ಗೆ ಹೇಳಿ ಕೊಂಡಿದ್ದರು. ಅದಕ್ಕೆ ತಾಪ್ಸಿ ಅವರು ತುಂಬಾನೇ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ ನೋಡಿ. ನಟಿ ತಾಪ್ಸಿ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, "ಜುದಾಸ್ ನಿನ್ನೆ ನಾವು ಅವರ ಮೇಲೆ ಹೊಂದಿದ್ದ ಆಪಾದನೆ, ನನ್ನಿಂದ ಟ್ರೋಲ್ ಆಗುವುದರಿಂದ ನೀವು ನಿಮ್ಮನ್ನು ರಕ್ಷಿಸಿಕೊಂಡಿದ್ದೀರಿ."

ಇದನ್ನೂ ಓದಿ:  Nayanthara Marriage: ಮದುವೆಗೆ ಮಾಜಿ ಪ್ರೇಮಿಗಳನ್ನೆಲ್ಲಾ ಖಂಡಿತಾ ಕರಿತಾರಂತೆ ನಯನತಾರಾ, ಯಾರ್ಯಾರು ಹೋಗ್ತಾರೆ ಅನ್ನೋದೇ ಮುಖ್ಯ!

ಏತನ್ಮಧ್ಯೆ, ಕೆಲಸದ ವಿಷಯಕ್ಕೆ ಬಂದಾಗ ನಟಿ ತಾಪ್ಸಿ ಅನುರಾಗ್ ಕಶ್ಯಪ್ ಅವರ ‘ದೋಬಾರಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಆಗಸ್ಟ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅವರು ‘ಶಬಾಶ್ ಮಿಥು’ ಮತ್ತು ನಟ ಶಾರುಖ್ ಖಾನ್ ಅವರ ‘ಡಂಕಿ’ ಚಿತ್ರಗಳಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.
Published by:Ashwini Prabhu
First published: