Rashmi Rocket: ಬಿಕಿನಿ-ಅಥ್ಲೆಟಿಕ್ ದೇಹದ ನಡುವಿನ ವ್ಯತ್ಯಾಸ ತಿಳಿಸಿದ ತಾಪ್ಸಿ ಪನ್ನು 

ರಶ್ಮಿ ರಾಕೆಟ್ ಸಿನಿಮಾದ ಪಾತ್ರಕ್ಕಾಗಿ, ಟ್ರ್ಯಾಕ್ ಮತ್ತು ಫೀಲ್ಡ್​ನಲ್ಲಿರುವ ಕ್ರೀಡಾಪಟುವಿನ ಮೈಕಟನ್ನು ಪಡೆಯಲು ತಾನು ಯಾವುದೇ ರೀತಿಯ ಸ್ಟಿರಾಯ್ಡ್‌ಗಳನ್ನು ಪಡೆಯುವುದಿಲ್ಲ ಎಂದು ತಾಪ್ಸಿ ಪನ್ನು ತನ್ನ ತಂಡಕ್ಕೆ ಮೊದಲೇ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾಗಿ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.

ರಶ್ಮಿ ರಾಕೆಟ್​ ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು

ರಶ್ಮಿ ರಾಕೆಟ್​ ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು

  • Share this:
ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ಸದಾ ವಿಭಿನ್ನ ಪಾತ್ರಗಳನ್ನು ನಿರ್ವಹಿಸಲು ಬಯಸುವ ಬಾಲಿವುಡ್‍ನ ಕೆಲವೇ ಕೆಲವು ನಟಿಯರಲ್ಲಿ ತಾಪ್ಸಿ ಪನ್ನು (Taapsee Pannu) ಕೂಡ ಒಬ್ಬರು. ಅವರು ತಮ್ಮ ಮುಂದಿನ ಚಿತ್ರ ರಶ್ಮಿ ರಾಕೆಟ್‌ನಲ್ಲಿ (Rashmi Rocket) ಒಬ್ಬ ಕ್ರೀಡಾಪಟುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಪಾತ್ರಕ್ಕಾಗಿ ತಾಪ್ಸಿ ಪನ್ನು, ಕ್ರೀಡಾಪಟುವಿಗೆ ತಕ್ಕ ಮೈಕಟ್ಟು ರೂಪಿಸಿಕೊಳ್ಳಲು ಕಠಿಣ ಶ್ರಮ ಪಟ್ಟಿದ್ದು, ಚಿತ್ರದ ಟ್ರೇಲರನ್ನು ನೋಡಿದ ಹಲವಾರು ಅಭಿಮಾನಿಗಳು ತಾಪ್ಸಿಯ ಬದ್ಧತೆಗೆ ಮೆಚ್ಚುಗೆ ಸೂಚಿಸಿದ್ದರು. ಕ್ರೀಡಾಪಟುವಿನ ತಕ್ಕ ದೇಹ ಮತ್ತು ಬಿಕಿನಿಗೆ ತಕ್ಕ ದೇಹ ಎರಡನ್ನೂ ಬೆಳೆಸಿಕೊಂಡ ಅನುಭವ ಇರುವ ತಾಪ್ಸಿ, ಅವೆರಡರ ನಡುವಿನ ವ್ಯತ್ಯಾಸದ ಕುರಿತು ಮಾತನಾಡಿದ್ದಾರೆ.

ರಶ್ಮಿ ರಾಕೆಟ್ ಸಿನಿಮಾದ ಪಾತ್ರಕ್ಕಾಗಿ, ಟ್ರ್ಯಾಕ್ ಮತ್ತು ಫೀಲ್ಡ್​ನಲ್ಲಿರುವ ಕ್ರೀಡಾಪಟುವಿನ ಮೈಕಟನ್ನು ಪಡೆಯಲು ತಾನು ಯಾವುದೇ ರೀತಿಯ ಸ್ಟಿರಾಯ್ಡ್‌ಗಳನ್ನು ಪಡೆಯುವುದಿಲ್ಲ ಎಂದು ತಾಪ್ಸಿ ಪನ್ನು ತನ್ನ ತಂಡಕ್ಕೆ ಮೊದಲೇ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾಗಿ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.

taapsee pannu,taapsee pannu boyfriend,taapsee pannu interview,taapsee pannu songs,taapsee pannu family,taapsee pannu lifestyle,taapsee pannu boyfriend mathias boe,taapsee pannu marriage,taapsee pannu biography,taapsee pannu and mathias boe,taapsee pannu maldives,taapsee pannu boyfriend list,taapsee pannu boyfriend badminton player,taapsee pannu husband,taapsee pannu facts, ತಾಪ್ಸಿ ಪನ್ನು, ತಾಪ್ಸಿ ಪನ್ನು ಮದುವೆ, ತಾಪ್ಸಿ ಪನ್ನು ಬಾಯ್​ ಫ್ರೆಂಡ್​, ಬಾಲಿವುಡ್​ ನಟಿ ತಾಪಸಿ ಪನ್ನು, I will marry when wants to have children says actress Taapsee Pannu ae
ಬಿಕಿನಿಯಲ್ಲಿ ತಾಪ್ಸಿ ಪನ್ನು


ಕ್ರೀಡಾಪಟುವಿನ ದೇಹ ಮತ್ತು ಬಿಕಿನಿ ದೇಹದ ನಡುವಿನ ವ್ಯತ್ಯಾಸದ ಬಗ್ಗೆ ಕೇಳಿದಾಗ, “ಬಹಳ ದೊಡ್ಡ ವ್ಯತ್ಯಾಸ ಇದೆ. ಬಿಕಿನಿ ದೇಹ ಪಡೆಯಲು ನೀವು ಒಂದು ಸುವ್ಯವಸ್ಥಿತ ವಿಧಾನ ಅನುಸರಿಸಬೇಕು ಮತ್ತು ಅದು ಸರಳವಾಗಿ ತೂಕ ಇಳಿಸಿಕೊಳ್ಳುವುದು. ನಿಮ್ಮ ಚರ್ಮ ಮತ್ತು ಮೂಳೆಗಳ ನಡುವಿನದ್ದೇನೂ ಇಲ್ಲ. ಜನರು ನೋಡಲು ಬಯಸುವ ಬಿಕಿನಿ ದೇಹವನ್ನು ಪಡೆಯಲು ನೀವು ಮಾಡಬೇಕಾದದ್ದು ಇಷ್ಟೆ, ತೆಳು ಮತ್ತು ಸಪೂರ. ಈಗ, ನಾನು ಆ ರೀತಿಯ ನೋಟಕ್ಕೆ ಪೂರಕವಾದ ದೇಹ ಪ್ರಕಾರ ಹೊಂದಿಲ್ಲ. ನನ್ನದು ಕ್ರೀಡಾಪಟುವಿಗೆ ತಕ್ಕಂತೆ ರೂಪುಗೊಂಡಿರುವ ದೇಹ. ಹಾಗಾಗಿ ನಾನು ತೂಕ ಇಳಿಸಿಕೊಂಡರೂ, ನೀವು ಇತರ ಹಲವು ನಟಿಯರನ್ನು ನೋಡುವ ಸಪೂರ ಮೈಕಟ್ಟಿನಲ್ಲಿ ನನ್ನನ್ನು ನೋಡಲು ಸಾಧ್ಯವಾಗುವುದಿಲ್ಲ” ಎಂದು ತಾಪ್ಸಿ ಪನ್ನು ಉತ್ತರಿಸಿದ್ದಾರೆ.

ಇದನ್ನೂ ಓದಿ: Taapsee Pannu: ಮಕ್ಕಳು ಬೇಕೆನಿಸಿದಾಗ ಮದುವೆಯಾಗ್ತಾರಂತೆ ನಟಿ ತಾಪ್ಸಿ ಪನ್ನು..!

“ನಾನು ಯಾವಾಗಲೂ ಕೊಂಚ ದೇಹದಾರ್ಢ್ಯವುಳ್ಳ ಶರೀರವನ್ನು ಹೊಂದಲು ಬಯಸಿದ್ದೆ, ಕಠಿಣ ಪರಿಶ್ರಮದಿಂದ ಅದು ಸಾಧ್ಯವಾದಂತಿದೆ” ಎಂದು ಅವರು ಹೇಳಿದ್ದಾರೆ.

ಕ್ರೀಡಾಪಟುವಿನ ದೇಹ ಹೊಂದಲು, ‘ಅತ್ಯಂತ ವೈಜ್ಞಾನಿಕ ವಿಧಾನ’ದ ಅಗತ್ಯ ಇರುತ್ತದೆ, ಪ್ರತೀ ಸ್ನಾಯುವಿಗೂ ಪ್ರತ್ಯೇಕ ವ್ಯಾಯಾಮ ಮಾಡಲಿಕ್ಕಿರುತ್ತದೆ. ನೀವು ಯಾವ ರೀತಿಯ ಆಹಾರ ಸೇವಿಸುತ್ತೀರಿ, ಯಾವ ರೀತಿಯ ವ್ಯಾಯಾಮಗಳನ್ನು ಮಾಡುತ್ತೀರಿ ಮತ್ತು ಯಾವ ರೀತಿಯ ಯಂತ್ರಗಳನ್ನು ಬಳಸುತ್ತೀರಿ ಎಂಬುದರ ಕಡೆಗೆ ಕೂಡ ಗಮನ ನೀಡಬೇಕಿರುತ್ತದೆ ಎಂದು ತಾಪ್ಸಿ ಹೇಳಿದ್ದಾರೆ. “ಇದು ಸಂಪೂರ್ಣವಾಗಿ ವಿಭಿನ್ನ ರೀತಿಯ ಕಾರ್ಯ ವಿಧಾನವಾಗಿದೆ” ಎಂದಿದ್ದಾರೆ ಅವರು.

ಕೆಲ ಸಮಯ ಹಿಂದೆ ತಾಪ್ಸಿ ಪನ್ನು ಅವರ ಸಿನಿಮಾದ ಪೋಸ್ಟರ್​ ನೋಡಿದ ನೆಟ್ಟಿಗರೊಬ್ಬರು ಕಟುವಾಗಿ ಟೀಕಿಸಿದ್ದರು. ನೀನು ಮಾತ್ರ ಗಂಡಸಿನ ದೇಹವನ್ನು ಹೊಂದಲು ಸಾಧ್ಯ ಎಂದಿದ್ದರು. ಅದಕ್ಕೆ ತಾಪ್ಸಿ ಸಹ ಸರಿಯಾಗಿಯೇ ಪ್ರತಿಕ್ರಿಯೆ ನೀಡುವ ಮೂಲಕ ಸುದ್ದಿಯಾಗಿದ್ದರು.

ಇದನ್ನೂ ಓದಿ: Taapsee Pannu: ಓಡುವುದನ್ನು ನಿಲ್ಲಿಸಿ ಕ್ರಿಕೆಟ್ ಬ್ಯಾಟ್​ ಹಿಡಿದ ತಾಪ್ಸಿ ಪನ್ನು..!

ರಶ್ಮಿ ರಾಕೆಟ್ ಸಿನಿಮಾ, ಜೀ5ನಲ್ಲಿ ಶುಕ್ರವಾರ ಬಿಡುಗಡೆ ಆಗಲಿದೆ. ಈಗಾಗಲೇ ಒಟಿಟಿಯಲ್ಲಿ ತಾಪ್ಸಿಯ ಎರಡು ಹೊಸ ಚಿತ್ರಗಳು ಬಿಡುಗಡೆ ಆಗಿದ್ದು, ಇದು ಅದೇ ಸಾಲಿನಲ್ಲಿ ಮೂರನೇ ಸಿನಿಮಾ. ನೆಟ್‍ಫ್ಲಿಕ್ಸ್‌ನಲ್ಲಿ ಹಸೀನಾ ದಿಲ್‍ರುಬಾ ಮತ್ತು ಡಿಸ್ನಿ ಹಾಟ್‍ಸ್ಟಾರ್‌ನಲ್ಲಿ ಅನ್ನಬೆಲೆ ಸೇತುಪತಿ ಸಿನಿಮಾಗಳು ಬಿಡುಗಡೆ ಆಗಿವೆ. ರಶ್ಮಿ ರಾಕೆಟ್ ಚಿತ್ರವನ್ನು ಆಕರ್ಷ್ ಖುರಾನಾ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತವಿದೆ,
Published by:Anitha E
First published: