ಕ್ರೀಡಾ ಕ್ಷೇತ್ರದಲ್ಲಿ Gender Test - Rashmi Rocket ಚಿತ್ರದ ಟ್ರೈಲರ್​ಗೆ ಉತ್ತಮ ಪ್ರತಿಕ್ರಿಯೆ..

Taapse Pannu: ಟ್ರೈಲರ್ ಯುವ ಗುಜರಾತಿ ಮಹಿಳೆ ರಶ್ಮಿಯನ್ನು  ಕಥೆಯ ಎಳೆಯನ್ನು ನೀಡಿದ್ದು, ಅವರು ಹೇಗೆ  ಯಶಸ್ವಿ ಕ್ರೀಡಾಪಟುವಾಗುತ್ತಾರೆ, ಅವರು ಅನುಭವಿಸುವ ಕಷ್ಟಗಳೆನು?  ಲಿಂಗ ಪರಿಶೀಲನೆ ಪರೀಕ್ಷೆಯ  ಕಾರಣ ಹೇಗೆ ಅವರ ಬದುಕು ಬದಲಾಗುತ್ತದೆ ಎಂಬುದರ ಕುರಿತಿದೆ.

ತಾಪ್ಸಿ ಪನ್ನು

ತಾಪ್ಸಿ ಪನ್ನು

  • Share this:
ತಾಪ್ಸಿ ಪನ್ನು(Taapse Pannu)  ಅಭಿನಯದ ಬಹು ನಿರೀಕ್ಷಿತ  ಕ್ರೀಡಾ ಕಥೆಯನ್ನು ಆಧರಿಸಿರುವ  ರಶ್ಮಿ ರಾಕೆಟ್(Rashmi Rocket)​ ಈ ದಸರಾದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ತಾಪ್ಸಿ ಜೊತೆ  ಪ್ರಿಯಾನ್ಶು ಪೈನ್ಯುಲಿ, ಅಭಿಷೇಕ್ ಬ್ಯಾನರ್ಜಿ ಮತ್ತು ಸುಪ್ರಿಯಾ ಪಾಠಕ್ ಕೂಡ ಅಭಿನಯಿಸಿದ್ದಾರೆ.  ಇನ್ನು ಈ ಚಿತ್ರ ಟ್ರೈಲರ್(Trailer) ಗುರುವಾರ ಸಂಜೆ  ಬಿಡುಗಡೆಯಾಗಿದ್ದು, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರದ ಕಥೆಯು  ಭಾರತೀಯ ಕ್ರೀಡೆಗಳಲ್ಲಿ ಲಿಂಗ ಪರೀಕ್ಷೆಯ ಕುರಿತಾಗಿದ್ದು, ಹೇಗೆ ಲಿಂಗ ತಾರತಮ್ಯ ಮಾಡಲಾಗುತ್ತದೆ ಎಂಬ ರೋಮಾಂಚಕ ಕಥಾವಸ್ತು ಹೊಂದಿದೆ ಎಂಬುದು ಟ್ರೈಲರ್ ಮೂಲಕ ತಿಳಿಯುತ್ತದೆ. ಕೇವಲ   ಮಹಿಳಾ ಕ್ರೀಡಾಪಟುಗಳು ಅನುಭವಿಸುವ ಲಿಂಗ ಪರೀಕ್ಷೆಯ ಕಥೆಯನ್ನು ಒಳಪಟ್ಟಿದೆ.

ಟ್ರೈಲರ್ ಯುವ ಗುಜರಾತಿ ಮಹಿಳೆ ರಶ್ಮಿಯನ್ನು  ಕಥೆಯ ಎಳೆಯನ್ನು ನೀಡಿದ್ದು, ಅವರು ಹೇಗೆ  ಯಶಸ್ವಿ ಕ್ರೀಡಾಪಟುವಾಗುತ್ತಾರೆ, ಅವರು ಅನುಭವಿಸುವ ಕಷ್ಟಗಳೆನು?  ಲಿಂಗ ಪರಿಶೀಲನೆ ಪರೀಕ್ಷೆಯ  ಕಾರಣ ಹೇಗೆ ಅವರ ಬದುಕು ಬದಲಾಗುತ್ತದೆ ಎಂಬುದರ ಕುರಿತಿದೆ.   ಆಕೆಯ ದೇಹದ ರಚನೆಯು ಮಹಿಳೆಯರ ದೇಹದ ರೀತಿ ಇರದ ಕಾರಣ ಆಕೆಯ ಮೇಲೆ ವಂಚನೆಯ ಆರೋಪವನ್ನು ಹೊರಿಸಲಾಗಿತ್ತು.  ಅಲ್ಲದೇ ಆಕೆಯನ್ನು ರಾಷ್ಟ್ರೀಯ  ತಂಡದಿಂದ ಸಹ ಆಕೆಯನ್ನು ಹೊರ ಹಾಕಲಾಗುತ್ತದೆ. ಇಷ್ಟೇ ಅಲ್ಲದೇ,  ಆಕೆಯನ್ನು ಮಹಿಳೆಯಲ್ಲ ಎಂದು ಘೋಷಿಸಲಾಗುತ್ತದೆ.


ಅಲ್ಲದೇ  ಮಾಧ್ಯಮಗಳಿಂದ ಕಿರುಕುಳಕ್ಕೊಳಗಾಗುತ್ತಾಳೆ ಹಾಗೂ ಪೋಲೀಸ್ ಅಧಿಕಾರಿಯೊಬ್ಬರಿಂದ ಸಹ ಹೊಡೆಸಿಕೊಂಡು ಹೆಚ್ಚು ಅವಮಾನ ಅನುಭವಿಸುತ್ತಾಳೆ.  ಅದರ ನಂತರ ಆಕೆ ತನ್ನ ವಕೀಲರ (ಅಭಿಷೇಕ್ ಬ್ಯಾನರ್ಜಿ ) ಮತ್ತು ಆಕೆಯ ತಾಯಿಯ (ಸುಪ್ರಿಯಾ ಪಾಠಕ್) ಸಹಾಯದಿಂದ ಕ್ರೀಡಾ ಪ್ರಾಧಿಕಾರದ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣವನ್ನು ದಾಖಲಿಸುತ್ತಾಳೆ.

ಇದನ್ನೂ ಓದಿ: ಕ್ಯೂಟ್​ ಫೋಟೋ ಶೇರ್​ ಮಾಡಿ Do not Disturb ಎನ್ನುತ್ತಿದ್ದಾರೆ ನಟಿ ರಾಗಿಣಿ ಪ್ರಜ್ವಲ್​..!

ತಾಪ್ಸಿ  ಈ ಚಲನಚಿತ್ರವು ಪುರುಷತ್ವ ಮತ್ತು ಹೆಣ್ಣಿನ ಬಗೆಗಿನ ಕೆಲ ನಿಯಮಗಳನ್ನು ಮುರಿಯುವ ಗುರಿಯನ್ನು ಹೊಂದಿದೆ, ಮಹಿಳಾ ಕ್ರೀಡಾಪಟುಗಳು ಎದುರಿಸುತ್ತಿರುವ  ಸಮಸ್ಯೆಗಳು ಹಾಗೂ ಮಹಿಳಾ ಕ್ರೀಡಾಪಟುಗಳು ಮಾತ್ರ ಒಳಗಾಗುವ ಲಿಂಗ ಪರೀಕ್ಷೆಯ ಹಳೆಯ ಅಭ್ಯಾಸವನ್ನು ಪ್ರಶ್ನಿಸುತ್ತದೆ ಎಂದು ಹೇಳಿದ್ದಾರೆ.

ಇವುಗಳು ನಿಖರವಾಗಿ ಮುರಿಯಲು ಬಯಸುವ ಪದ್ದತಿಗಳು. ನಿಮ್ಮನ್ನು ನಿರ್ಣಯಿಸುವುದು ಕೇವಲ ಸ್ನಾಯುವಿನ ರಚನೆಯ ಬಗ್ಗೆಯೇ? ಪೂರ್ವನಿಯೋಜಿತವಾಗಿ ಕೆಲವು ಸ್ತ್ರೀಯರಲ್ಲಿ ಕೆಲವು ಹಾರ್ಮೋನುಗಳ ಅಸಮತೋಲನ ಅಥವಾ ಅಸಹಜತೆಗಳಿವೆ ಎಂದು ನೀವು ಅರಿತುಕೊಂಡಿದ್ದೀರಾ ಮತ್ತು ಅದರ ಪರಿಣಾಮವಾಗಿ ಅವರು ತಮ್ಮ ರೀತಿಯ ಮೈಕಟ್ಟು ಹೊಂದಿರುತ್ತಾರೆ? ಎಂದು ಗುರುವಾರ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆದಾರರ ಕಾಮೆಂಟ್ ಅನ್ನು ನೋಡಿದ ತಾಪ್ಸಿ ತನ್ನ ದೇಹವನ್ನು ಹೆಚ್ಚು ಪುರುಷರ ತರ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದರು. ನಾವು ನಿಜವಾಗಿಯೂ ಈ ಮಹಿಳೆಯರನ್ನು ಬದಲಾಗಲು ಕೇಳುತ್ತಿದ್ದೇವೆಯೇ?  ಮಹಿಳೆಯರ ಬಗ್ಗೆ ಈ ರಿತಿ ಮಾತನಾಡಲು ನಿಮಗೆ ಹಕ್ಕನ್ನು ಕೊಟ್ಟವರು ಯಾರು ಎಂದು ತಾಪ್ಸಿ ಪ್ರಶ್ನಿಸಿದ್ದಾರೆ.

ತಾಪ್ಸಿಯ ಮಾತುಗಳಿಗೆ ಬೆಂಬಲ ನೀಡಿ ಮಾತನಾಡಿದ ಅಭಿಷೇಕ್, ಜನರು ತಾಪ್ಸಿಯ ಫೋಟೋಗಳಿಗೆ ಪುರುಷರ ದೇಹದಂತಿದೆ ಎಂದು ಕಾಮೆಂಟ್ ಮಾಡಿರುವುದನ್ನ ಓದಿದ್ದೇನೆ. ನಾನು ಈ ಚಿತ್ರದಲ್ಲಿ ವ್ಯವಸ್ಥೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಒಂದು ಪಾತ್ರವನ್ನು ಮಾಡಿದ್ದೇನೆ, ಆದರೆ ಎಲ್ಲೋ ಸಮಸ್ಯೆ ನಮ್ಮ ಆಲೋಚನೆಯಲ್ಲಿದೆ, ಮತ್ತು ನಾವು ಈ ಚಿಂತನೆಯನ್ನು ಮತ್ತು ನಾವು ಅನುಸರಿಸುವ ಇತರ ನಿಯಮಗಳನ್ನು  ಬದಲಾಯಿಸಲು ಪ್ರಯತ್ನಿಸಿದ್ದೇವೆ ಎಂದಿದ್ದಾರೆ.

ತಾಪ್ಸಿ ಅವರು ಮಾಡುವ ಈ  ರೀತಿಯ ಚಿತ್ರಗಳ ಮೂಲಕ ಭಾರತೀಯ ಯುವತಿಯರ ಆಕಾಂಕ್ಷೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಪ್ರತಿನಿಧಿಸುವ ಪ್ರಶ್ನೆಗೆ ಉತ್ತರಿಸಿದ್ದಾರೆ.

ನನ್ನ ವೈಯಕ್ತಿಕ ನಂಬಿಕೆಗಳನ್ನು ನನ್ನ ಕೆಲಸಕ್ಕೆ ವಿಸ್ತರಿಸುವ ಸೌಲಭ್ಯ  ನನಗೆ ಸಿಕ್ಕಿತು. ನಾನು ಯಾವಾಗಲೂ ಜನರಿಗೆ ಹೇಳಿದ್ದೇನೆ, ನಾನು ಸಾಮಾನ್ಯವಾಗಿ ಬಾಲಿವುಡ್‌ನಲ್ಲಿ ಕಾಣುವ ಸಾಮಾನ್ಯ ಹಿರೋಯಿನ್​ ಅಲ್ಲ.  ಅದು ನನ್ನಿಂದ ಸಾಧ್ಯವಿಲ್ಲ ಎಂದು ನನಗೆ ಯಾವಾಗಲೂ ತಿಳಿದಿತ್ತು. ನಾನು ಇಂದಿನ ಮಹಿಳೆಯರನ್ನು ಪ್ರತಿನಿಧಿಸುತ್ತೇನೆ. ಅವರು ಪರದೆಯ ಮೇಲೆ ನಾಯಕನಾಗಿ ಪ್ರಾತಿನಿಧ್ಯವನ್ನು ಪಡೆಯಬೇಕು. ನನ್ನಂತಹ ಜನರನ್ನು ಪ್ರತಿನಿಧಿಸಲು ನಾನು ಬಯಸುತ್ತೇನೆ ಎಂದು ತಾಪ್ಸಿ ಹೇಳಿದ್ದಾರೆ.

ಇದನ್ನೂ ಓದಿ: Manike Mage Hithe ಹಾಡಿಗೆ ಮನಸೋತ ಮಲೆಯಾಳಂ ನಟ Prithviraj Sukumaran

ಆಕರ್ಷ್ ಖುರಾನ ನಿರ್ದೇಶನದ ರಶ್ಮಿ ರಾಕೆಟ್ ಅಕ್ಟೋಬರ್ 15 ರಂದು ZEE5 ನಲ್ಲಿ ಬಿಡುಗಡೆಯಾಗಲಿದೆ.
Published by:Sandhya M
First published: