HOME » NEWS » Entertainment » T SERIES HANUMAN CHALISA VIDEO CROSSES 1 BILLION VIEWS ON YOU TUBE AE

Gulshan Kumar: ಯೂಟ್ಯೂಬ್​ನಲ್ಲಿ ನೂರು ಕೋಟಿ ವೀಕ್ಷಣೆ ಪಡೆದ ಟಿ-ಸಿರೀಸ್​ನ ಹನುಮಾನ್​ ಚಾಲೀಸಾ ವಿಡಿಯೋ..!

T-series Hanuman Chalisa Video: ಟಿ-ಸಿರೀಸ್​ನ ಸಂಸ್ಥಾಪಕ ಗುಲ್ಶನ್​ ಕುಮಾರ್​ ಅಭಿನಯದ ಹನುಮಾನ್​ ಚಾಲೀಸಾದ ವಿಡಿಯೋಗೆ ಯೂಟ್ಯೂಬ್​ನಲ್ಲಿ 100 ಕೋಟಿಗೂ ಅಧಿಕ ವೀಕ್ಷಣೆ ಸಿಕ್ಕಿದೆ. ಹಿರಿಯ ಗಾಯಕ ಹರಿಹರನ್​ ಹಾಡಿರುವ ಹನುಮಾನ್​ ಚಾಲೀಸ ವಿಡಿಯೋವನ್ನು ಟಿ-ಸಿರೀಸ್​ ಭಕ್ತಿ ಸಾಗರ್ ಯೂಟ್ಯೂಬ್​ ಚಾನಲ್​ನಲ್ಲಿ ಬಹಳ ವರ್ಷಗಳ ಹಿಂದೆ ಅಪ್​ಲೋಡ್​ ಮಾಡಲಾಗಿದೆ.

Anitha E | news18-kannada
Updated:May 28, 2020, 9:22 PM IST
Gulshan Kumar: ಯೂಟ್ಯೂಬ್​ನಲ್ಲಿ ನೂರು ಕೋಟಿ ವೀಕ್ಷಣೆ ಪಡೆದ ಟಿ-ಸಿರೀಸ್​ನ ಹನುಮಾನ್​ ಚಾಲೀಸಾ ವಿಡಿಯೋ..!
ನೂರು ಕೋಟಿ ವೀಕ್ಷಣೆ ಪಡೆದ ಟಿ-ಸಿರೀನ್​ನ ಹನುಮಾನ್​ ಚಾಲೀಸ
  • Share this:
ಯೂಟ್ಯೂಬ್​ನಲ್ಲಿ ಯಾವುದೇ ಸಿನಿಮಾ ಹಾಡು ಅಥವಾ ಆಲ್ಬಂಗಳ ಗೀತೆಗಳು ಕೋಟಿ ಕೋಟಿ ವೀಕ್ಷಣೆ ಪಡೆಯುವುದನ್ನು ನೋಡುತ್ತಿರುತ್ತೇವೆ. ಆದರೆ ಈಗಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೂರು ಕೋಟಿ (ಒಂದು ಬಿಲಿಯನ್​) ವೀಕ್ಷಣೆ ಪಡೆಯುವುದು ಸುಲಭದ ಮಾತಲ್ಲ. ಆದರೆ ಭಕ್ತಿ ಗೀತೆಯೊಂದು ಈ ಸಾಧನೆ ಮಾಡಿದೆ.

ಟಿ-ಸಿರೀಸ್​ನ ಸಂಸ್ಥಾಪಕ ಗುಲ್ಶನ್​ ಕುಮಾರ್​ ಅಭಿನಯದ ಹನುಮಾನ್​ ಚಾಲೀಸಾದ ವಿಡಿಯೋಗೆ ಯೂಟ್ಯೂಬ್​ನಲ್ಲಿ 100 ಕೋಟಿಗೂ ಅಧಿಕ ವೀಕ್ಷಣೆ ಸಿಕ್ಕಿದೆ. ಹಿರಿಯ ಗಾಯಕ ಹರಿಹರನ್​ ಹಾಡಿರುವ ಹನುಮಾನ್​ ಚಾಲೀಸಾ ವಿಡಿಯೋವನ್ನು ಟಿ-ಸಿರೀಸ್​ ಭಕ್ತಿ ಸಾಗರ್ ಯೂಟ್ಯೂಬ್​ ಚಾನಲ್​ನಲ್ಲಿ ಬಹಳ ವರ್ಷಗಳ ಹಿಂದೆ ಅಪ್​ಲೋಡ್​ ಮಾಡಲಾಗಿದೆ.

Youtube Video


ಈ ವಿಷಯವನ್ನು ಟಿ-ಸಿರೀಸ್​ನ​ ಮುಖ್ಯಸ್ಥ ಹಾಗೂ ಗುಲ್ಶನ್​ ಕುಮಾರ್ ಅವರ ಮಗ ಭೂಷನ್​ ಕುಮಾರ್ ಅವರು ಟ್ವಿಟರ್​ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಟಿ-ಸಿರೀಸ್​ನ ಹನುಮಾನ್​ ಚಾಲೀಸಾ ವಿಡಿಯೋ ಯೂಟ್ಯೂಬ್​ನಲ್ಲಿ ನೂರು ಕೋಟಿ ವೀಕ್ಷಣೆ ಪಡೆದ ಮೊದಲ ಭಕ್ತಿ ಗೀತೆಯಾಗಿಗೆ ಎಂದು ಖುಷಿ ಹಂಚಿಕೊಂಡಿದ್ದಾರೆ. ಈ ವಿಷಯ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿತ್ತು. ಈ ಹಾಡಿಗೆ ಲಲಿತ್​ ಸೇನ್​ ಹಾಗೂ ಚಾಂದೇರ್​ ಅವರು ಸಂಯೋಜನೆ ಮಾಡಿದ್ದಾರೆ.

It's a moment of joy for our @TSeries family today as our Hanuman Chalisa video becomes the 1st devotional video to cross 1 Billion+ views on YouTube. Dad, may your blessings always be with us & help us in achieving many more such milestones#ShriGulshanKumarJi @SingerHariharan pic.twitter.com/iMMGUjlbG6



ಟಿ-ಸಿರೀಸ್​ 80ರ ದಶಕದಲ್ಲಿ ಭಕ್ತಿ ಗೀತೆಗಳಿಗೆ ಹೆಸರುವಾಸಿಯಾಗಿದ್ದ ಆಡಿಯೋ ಕಂಪೆನಿ. ಗುಲ್ಶನ್​ ಕುಮಾರ್ ಅವರು ಈ ಸಂಸ್ಥೆಗೆ ಅಡಿಪಾಯ ಹಾಕಿದವರು. ಗುಲ್ಶನ್ ಕುಮಾರ್ ಭಕ್ತಿಗೀತೆಗಳ ರಾಜ ಎಂದೇ ಖ್ಯಾತರಾಗಿದ್ದರು. ಸಂಗೀತೋದ್ಯಮದಲ್ಲಿ ಆಗಲೇ ಹಲವಾರು ದಾಖಲೆಗಳನ್ನು ಮಾಡಿತ್ತು ಟಿ-ಸಿರೀಸ್​.Nikhil-Revathi: ಬಿಡದಿಯ ತೋಟದಲ್ಲಿ ನಿಖಿಲ್​-ರೇವತಿ: ಮತ್ತೆ ಕವಿಯಾದ ಯುವರಾಜ..!

First published: May 28, 2020, 9:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories