'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ನಿಲ್ಲದ ಕಂಟಕ: ಸಿನಿಮಾದಲ್ಲಿ ಅಭಿನಯಿಸಿದ ನಟ ಸಾವು!

ತಮಿಳು, ತೆಲುಗು ಮಲಯಾಳಂನಲ್ಲಿ ಮೂಡಿ ಬರಲಿರುವ ಈ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಜತೆ ಅಮಿತಾಬ್ ಬಚ್ಚನ್, ಜಗಪತಿ ಬಾಬು, ವಿಜಯ್ ಸೇತುಪತಿ, ನಯನತಾರಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

zahir | news18
Updated:May 17, 2019, 9:41 PM IST
'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ನಿಲ್ಲದ ಕಂಟಕ: ಸಿನಿಮಾದಲ್ಲಿ ಅಭಿನಯಿಸಿದ ನಟ ಸಾವು!
@Sudeep
zahir | news18
Updated: May 17, 2019, 9:41 PM IST
ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹು ಬಜೆಟ್ ಚಿತ್ರ 'ಸೈರಾ ನರಸಿಂಹ ರೆಡ್ಡಿ' ಮತ್ತೊಂದು ಸಂಕಷ್ಟ ಎದುರಾಗಿದೆ. ಒಂದಷ್ಟು ಸನ್ನಿವೇಶಗಳಲ್ಲಿ ಅಭಿನಯಿಸಿದ್ದ ನಟನೊಬ್ಬರು ಬಿಸಿಲಿನ ತಾಪದಿಂದ ಮೃತಪಟ್ಟಿದ್ದಾರೆ. ಹೀಗಾಗಿ ಚಿತ್ರವನ್ನು ಮತ್ತೊಮ್ಮೆ ಚಿತ್ರೀಕರಿಸುವ ಇಕ್ಕಟ್ಟಿಗೆ ಚಿತ್ರತಂಡ ಸಿಲುಕಿದೆ.

ರಷ್ಯಾ ಮೂಲದ ಅಲೆಕ್ಸಾಂಡರ್ ಎಂಬ ಕಲಾವಿದ ತೀವ್ರ ಬಿಸಿಲಿನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಇವರ ಮೃತ ದೇಹವು ಹೈದರಾಬಾದ್​​ನ ಗಚ್ಚಿ ಬೌಲಿಯ ಕಟ್ಟಡವೊಂದರ ಬಳಿ 2 ದಿನಗಳ ಹಿಂದೆ ಪತ್ತೆಯಾಗಿತ್ತು.

ಈ ಬಗ್ಗೆ ಪೊಲೀಸರು ಪರಿಶೀಲಿಸಿದಾಗ ಅಲೆಕ್ಸಾಂಡರ್ ಬಳಿ 'ಸೈರಾ ನರಸಿಂಹ ರೆಡ್ಡಿ ' ಚಿತ್ರದ ಫೋಟೋಗಳು ಕಂಡು ಬಂದಿವೆ. ಈ ಕುರಿತು ಚಿತ್ರತಂಡವನ್ನು ವಿಚಾರಿಸಿದಾಗ,  ಅಲೆಕ್ಸಾಂಡರ್ ಬಿಟ್ರಿಷ್ ವ್ಯಕ್ತಿಯ ಪಾತ್ರದಲ್ಲಿ ಅಭಿನಯಿಸಲು ಆಗಮಿಸಿರುವುದಾಗಿ ತಿಳಿಸಿದ್ದಾರೆ.

ಪ್ರವಾಸಿ ವೀಸಾದಲ್ಲಿ ಬಂದಿದ್ದ ಅಲೆಕ್ಸಾಂಡರ್ ಗೋವಾದಲ್ಲಿ ಗೆಳೆಯನೊಂದಿಗೆ ತಂಗಿದ್ದರು. ಅಲ್ಲದೆ ಚಿತ್ರೀಕರಣದ ಸಂದರ್ಭದಲ್ಲಿ ಹೈದರಾಬಾದ್​ಗೆ ಬರುತ್ತಿದ್ದರು ಎಂದು ಹೇಳಲಾಗಿದೆ. ಇದೀಗ ನಟನ ಸಂಶಯಾಸ್ಪದ ಸಾವಿನಿಂದ ಚಿತ್ರತಂಡಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಅಲೆಕ್ಸಾಂಡರ್​ ರೀತಿಯನ್ನು ಹೋಲುವ ಮತ್ತೊಬ್ಬ ಕಲಾವಿದನನ್ನು ಕಂಡು ಹಿಡಿದು ಉಳಿದ ಭಾಗವನ್ನು ಚಿತ್ರೀಕರಿಸುವ ಜವಾಬ್ದಾರಿ ಇದೀಗ ನಿರ್ದೇಶಕರ ಹೆಗಲೇರಿದೆ. ಇಲ್ಲವಾದರೆ, ಅಲೆಕ್ಸಾಂಡರ್ ಕಾಣಿಸಿಕೊಂಡ ಸನ್ನಿವೇಶಗಳನ್ನು ಮರು ಚಿತ್ರೀಕರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಕೆಲ ತಿಂಗಳ ಹಿಂದೆಯಷ್ಟೇ ಚಿತ್ರೀಕರಣ ಸ್ಥಳದಲ್ಲಿ ಅಗ್ನಿ ಅವಘಡ ಸಂಭವಿಸಿ 2 ಕೋಟಿ ವೆಚ್ಚದ ವಸ್ತುಗಳು ಅಗ್ನಿಗೆ ಆಹುತಿಯಾಗಿತ್ತು. ಮಧ್ಯರಾತ್ರಿ ಸಂಭವಿಸಿದ ಅಗ್ನಿ ಅನಾಹುತದಿಂದ ಕೆಲ ದಿನಗಳ ಕಾಲ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಹಾಗೆಯೇ ಬೀದರ್ ಕೋಟೆಯಲ್ಲಿ 'ಸೈರಾ ನರಸಿಂಹ ರೆಡ್ಡಿ' ಚಿತ್ರೀಕರಣಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಶೂಟಿಂಗ್​ ಅನ್ನು ಅರ್ಧಕ್ಕೆ  ನಿಲ್ಲಿಸಲಾಗಿತ್ತು. ಅಲ್ಲದೆ ರಾತ್ರೋ ರಾತ್ರಿ ಶೂಟಿಂಗ್ ಸೆಟ್ ತೆರವುಗೊಳಿಸಿ ವಾಪಸ್ ಹೈದ್ರಾಬಾದ್​​ಗೆ ಚಿತ್ರತಂಡ ತೆರಳಿದ್ದರು. ಇದೀಗ ನಟನ ಅನಿರೀಕ್ಷಿತ ಸಾವಿನ ಮೂಲಕ ಮತ್ತೊಂದು ಕಂಟಕ ಎದುರಾಗಿರುವುದು ಚಿತ್ರತಂಡವನ್ನು ಚಿಂತೆಗೀಡು ಮಾಡಿದೆ.

ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆಯನ್ನು ತಿಳಿಸಲಿರುವ 'ಸೈರಾ ನರಸಿಂಹ ರೆಡ್ಡಿ' ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿದ್ದು, ಈ ಸಿನಿಮಾಗೆ ಚಿರಂಜೀವಿ ಪುತ್ರ ನಟ ರಾಮ್ ಚರಣ್ ತೇಜ ಬಂಡವಾಳ ಹೂಡಿದ್ದಾರೆ. ತಮಿಳು, ತೆಲುಗು ಮಲಯಾಳಂನಲ್ಲಿ ಮೂಡಿ ಬರಲಿರುವ ಈ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಜತೆ ಅಮಿತಾಬ್ ಬಚ್ಚನ್, ಜಗಪತಿ ಬಾಬು, ವಿಜಯ್ ಸೇತುಪತಿ, ನಯನತಾರಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಅಲ್ಲದೆ ಬಹು ಮುಖ್ಯ ಪಾತ್ರವೊಂದರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.ಇದನ್ನೂ ಓದಿ: ಈ ಬಾರಿ ವಿಶ್ವಕಪ್​ನಲ್ಲಿ ಸಿಡಿಯಲಿದೆ 500 ರನ್?

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ