ಆರ್​ಆರ್​​ಆರ್​ ತೆರೆಕಾಣುವ ಮೊದಲೇ ರಾಜಮೌಳಿಗೆ ಕಾಡುತ್ತಿದೆ ನಷ್ಟದ ಭಯ!; ಇದಕ್ಕೆ ಸೈರಾ ಕಾರಣವಂತೆ!

‘ಸೈರಾ’ ಸಂಪೂರ್ಣವಾಗಿ ದೇಶ ಪ್ರೇಮವನ್ನು ಬಿಂಬಿಸುವ ಸಿನಿಮಾ. ಇಲ್ಲಿ ಐಟಂ ಸಾಂಗ್​ ಆಗಲಿ, ಹೆಚ್ಚಿನ ಬಿಲ್ಡ್​ ಅಪ್​ ಆಗಲಿ ಇಲ್ಲ. ಈ ವಿಚಾರ ಸಿನಿಮಾಗೆ ಕೊಂಚ ಹಿನ್ನಡೆ ಉಂಟು ಮಾಡಿದೆ ಎಂಬುದು ಮೂಲಗಳ ಮಾಹಿತಿ.

news18-kannada
Updated:October 9, 2019, 1:01 PM IST
ಆರ್​ಆರ್​​ಆರ್​ ತೆರೆಕಾಣುವ ಮೊದಲೇ ರಾಜಮೌಳಿಗೆ ಕಾಡುತ್ತಿದೆ ನಷ್ಟದ ಭಯ!; ಇದಕ್ಕೆ ಸೈರಾ ಕಾರಣವಂತೆ!
ನಿರ್ದೇಶಕ ರಾಜಮೌಳಿ
  • Share this:
ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್'​ ಸಿನಿಮಾದ ಶೂಟಿಂಗ್​ ಸಾಗುತ್ತಿದೆ. ರಾಮ್​ ಚರಣ್​ ಹಾಗೂ ಜೂ.ಎನ್​ಟಿಆರ್​ ನಟನೆಯ ಈ ಮಲ್ಟಿ ಸ್ಟಾರರ್​ ಸಿನಿಮಾ, 350-400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಶೂಟಿಂಗ್​ ನಡೆಯುತ್ತಿರುವಾಗಲೇ ನಿರ್ದೇಶಕ ರಾಜಮೌಳಿಗೆ ಸಿನಿಮಾ ನಷ್ಟ ಅನುಭವಿಸಬಹುದು ಎನ್ನುವ ಭಯ ಕಾಡಿದೆ. ಇದಕ್ಕೆ ಕಾರಣ, ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ.

‘ಸೈರಾ’ ನರಸಿಂಹ ರೆಡ್ಡಿ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಮಾಲ್​ ಮಾಡುತ್ತಿದೆ. ಗಳಿಕೆ ಕೂಡ ಉತ್ತಮವಾಗುತ್ತಿದೆ. ಆದರೆ, ಸಿನಿಮಾ ಗಳಿಕೆಯಲ್ಲಿ ನಿರೀಕ್ಷೆ ಮಟ್ಟ ತಲುಪಿಲ್ಲ ಎನ್ನುವುದು ಸಿನಿಮಾ ತಂಡದ ಮಾಹಿತಿ. ಇದಕ್ಕೆ ಕಾರಣ ಸಾಕಷ್ಟಿದೆ.

‘ಸೈರಾ’ ಸಂಪೂರ್ಣವಾಗಿ ದೇಶ ಪ್ರೇಮವನ್ನು ಬಿಂಬಿಸುವ ಸಿನಿಮಾ. ಇಲ್ಲಿ ಐಟಂ ಸಾಂಗ್​ ಆಗಲಿ, ಹೆಚ್ಚಿನ ಬಿಲ್ಡ್​ ಅಪ್​ ಆಗಲಿ ಇಲ್ಲ. ಈ ವಿಚಾರ ಸಿನಿಮಾಗೆ ಕೊಂಚ ಹಿನ್ನಡೆ ಉಂಟು ಮಾಡಿದೆ ಎಂಬುದು ಮೂಲಗಳ ಮಾಹಿತಿ. ‘ಥಗ್ಸ್​ ಆಫ್​ ಹಿಂದುಸ್ತಾನ್​’, ‘ಲೆಜೆಂಡ್​ ಆಫ್​ ಭಗತ್​ ಸಿಂಗ್​’, ‘ಬೋಸ್​’, ‘ಮಂಗಳ್​ ಪಾಂಡೆ’ ಸೇರಿ ಸಾಕಷ್ಟು ಚಿತ್ರಗಳು ದೇಶಪ್ರೇಮದ ಕಥೆ ಇಟ್ಟುಕೊಂಡು ತೆರೆಕಂಡಿದ್ದವು. ಈ ಚಿತ್ರಗಳು ನಿರೀಕ್ಷೆಯ ಮಟ್ಟ ತಲುಪಿರಲಿಲ್ಲ.

ಇದನ್ನೂ ಓದಿ: ಸುದೀಪ್ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ; ವಿನಯ್ ಗುರೂಜಿಗೆ ಅರ್ಜುನ್ ಗುರೂಜಿ ಟಾಂಗ್

ಈಗ ಆರ್​ಆರ್​ಆರ್​  ಕೂಡ ಇದೇ ಮಾದರಿಯಲ್ಲಿ ಸಿದ್ಧಗೊಳ್ಳುತ್ತಿದೆ. ಒಂದೊಮ್ಮೆ ಈ ಸಿನಿಮಾದಲ್ಲಿ ಐಟಂ ಸಾಂಗ್​ ಇಲ್ಲದೆ ಹೋದರೆ ಸಿನಿಮಾ ಕಲೆಕ್ಷನ್​ಗೆ ಹೊಡೆತ ಕೊಡುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಸಿನಿಮಾ ತಜ್ಞರು. ಹೀಗಾಗಿ ಈ ಬಗ್ಗೆ ರಾಜಮೌಳಿ ಆತಂಕಕ್ಕೊಳಗಾಗಿದ್ದಾರಂತೆ.

First published: October 9, 2019, 12:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading