Sye Raa Narasimha Reddy Teaser: ಧೂಳೆಬ್ಬಿಸುತ್ತಿದ್ದಾನೆ ಸೈರಾ ನರಸಿಂಹ ರೆಡ್ಡಿ: ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಟೀಸರ್​ ಔಟ್​..!

Sye Raa Narasimha Reddy Teaser: ಎರಡೂವರೆ ವರ್ಷದ ನಂತರ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಬೆಳ್ಳಿ ತೆರೆ ಮೇಲೆ ನೋಡಲು ಕ್ಷಣ ಕ್ಷಣವೂ ಯುಗದಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ರಸದೌತಣ ಸಿಕ್ಕಂತಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಸೈರಾ ನರಸಿಂಹ ರೆಡ್ಡಿ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. 

Anitha E | news18
Updated:August 20, 2019, 3:34 PM IST
Sye Raa Narasimha Reddy Teaser: ಧೂಳೆಬ್ಬಿಸುತ್ತಿದ್ದಾನೆ ಸೈರಾ ನರಸಿಂಹ ರೆಡ್ಡಿ: ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಟೀಸರ್​ ಔಟ್​..!
ಸೈರಾ ನರಸಿಂಹ ರಡ್ಡಿ ಟೀಸರ್​ನಲ್ಲಿ ಚಿರಂಜೀವಿ
  • News18
  • Last Updated: August 20, 2019, 3:34 PM IST
  • Share this:
ಟಾಲಿವುಡ್​ನ ಬಹು ನಿರೀಕ್ಷಿತ ಹಾಗೂ ದೊಡ್ಡ ತಾರಾ ಬಳಗವಿರುವ ಸಿನಿಮಾ 'ಸೈರಾ ನರಸಿಂಹ ರೆಡ್ಡಿ'. ರಾಮ್​ ಚರಣ್​ ತೇಜ ನಿರ್ಮಿಸಿರುವ ಈ ಸಿನಿಮಾದ ಹೆಸರು ಪ್ರಕಟವಾದಾಗಿನಿಂದಲೂ ಪ್ರೇಕ್ಷಕರಲ್ಲಿ ಒಂದು ರೀತಿಯ ಕುತೂಹಲವಿತ್ತು. ಈ ಚಿತ್ರದ ಪೋಸ್ಟರ್​ಗಳು ಹಾಗೂ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಅದು ಮತ್ತಷ್ಟು ಹೆಚ್ಚಾಗಿತ್ತು.

ಇಂತಹ ಕ್ರೇಜ್​ ಹುಟ್ಟುಹಾಕಿದ ಸಿನಿಮಾದ ಟೀಸರ್​ ಈಗಷ್ಟೆ ಬಿಡುಗಡೆಯಾಗಿದೆ. ಇದಕ್ಕಾಗಿ ಕ್ಷಣ ಕ್ಷಣವೂ ಯುಗದಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ರಸದೌತಣ ಸಿಕ್ಕಂತಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಟೀಸರ್​ ಬಿಡುಗಡೆಯಾಗಿದೆ.







ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿರುವ ಟ್ರೈಲರ್​ಗೆ ಪವನ್​ ಕಲ್ಯಾಣ್​ ಹಿನ್ನೆಲೆ ಧ್ವನಿ ನೀಡಿದ್ದರೆ, ಕನ್ನಡಕ್ಕೆ ಯಶ್​ ಬದಲಾಗಿ ಬೇರೆಯವರು ದನಿಯಾಗಿದ್ದಾರೆ. ಇನ್ನೂ 'ಖೈದಿ ನಂ 150' ಸಿನಿಮಾದ ನಂತರ ಎರಡೂವರೆ ವರ್ಷ ಚಿರಂಜೀವಿ ಸೈರಾ ನರಸಿಂಹ ರೆಡ್ಡಿ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಅವರ ಪರಿಶ್ರಮ ಈ ಚಿತ್ರದ ಟೀಸರ್​ನಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: ಕಾಲಿವುಡ್​ನಲ್ಲಿ ಕಿರಿಕ್​ ಮಾಡಿಕೊಂಡ ರಶ್ಮಿಕಾ ಮಂದಣ್ಣ..!ಇಂದು ಮಧ್ಯಾಹ್ನ ಸರಿಯಾಗಿ 2.40ಕ್ಕೆ ಟೀಸರ್​ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಪ್ರಕಟಿಸಿತ್ತು. ಅದರಂತೆ ಟೀಸರ್​ ರಿಲೀಸ್​ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದು ರಿಲೀಸ್​ ಆಗಿ ಕೆಲವೇ ನಿಮಿಷಗಳಲ್ಲಿ 25 ಸಾವಿರ ವೀಕ್ಷಣೆ ಪಡೆದುಕೊಂಡಿದೆ.

ಐದು ಭಾಷೆಗಳಲ್ಲಿ ಅಂದರೆ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ತೆರೆಕಾಣಲಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಸುದೀಪ್ ಪಾತ್ರಕ್ಕೆ ಅವರೇ ಡಬ್​ ಸಹ ಮಾಡಲಿದ್ದಾರೆ. ಈ ಚಿತ್ರದ ತಮಿಳು ಹಾಗೂ ಮಲಯಾಳಂನ ಟೀಸರ್​ ಇಲ್ಲಿದೆ.





ರಾಷ್ಟ್ರ ಪ್ರಶಸಸ್ತಿ ವಿಜೇತ ಸಂಗೀತ ನಿರ್ದೇಶಕ ಅಮಿತ್​ ತ್ರಿವೇದಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ತೆಲುಗು ಭಾಷೆಯಲ್ಲಿ ಅಮಿತ್​ ಅವರ ಮೊದಲ ಸಿನಿಮಾ ಆಗಿದೆ. ಸುರೇಂದರ್​ ರೆಡ್ಡಿ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ಚಿರಂಜೀವಿ, ಅಮಿತಾಭ್​ ಬಚ್ಚನ್​, ಕಿಚ್ಚ ಸುದೀಪ್​, ಜಗಪತಿ ಬಾಬು, ವಿಜಯ್​ ಸೇತುಪತಿ, ನಯನ ತಾರಾ, ತಮನ್ನಾ ಸೇರಿದಂತೆ ಸಾಕಷ್ಟು ದೊಡ್ಡ ತಾರಾ ಬಳಗವೇ ಇದೆ.

ಇದನ್ನೂ ಓದಿ: Huchcha Venkat: ಚೆನ್ನೈನ ರಸ್ತೆಗಳಲ್ಲಿ ಹುಚ್ಚ ವೆಂಕಟ್​ ಅಲೆದಾಟ: ಆಗಿದ್ದಾದರೂ ಏನು..?

ಬ್ರಿಟಿಷರ ವಿರುದ್ಧ ಹೋರಾಡಿದ ದೇಶಭಕ್ತನ ಕತೆಯಾಗಿದ್ದು, ನೈಜ ಘಟನೆ ಆಧಾರಿತವಾಗಿದೆ. 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಇದೇ ಅಕ್ಟೋಬರ್​ 2ಕ್ಕೆ ತೆರೆಕಾಣಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

 

Rakul Preet Singh: ಬಿಸಿಲ ಬೇಗೆಗೆ ಬಿಕಿನಿ ಮೊರೆ ಹೋದ ರಾಕುಲ್​ ಪ್ರೀತ್​ ಸಿಂಗ್​



 

 
First published: August 20, 2019, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading