ಸೈರಾ ನರಸಿಂಹ ರೆಡ್ಡಿ ಮೇಕಿಂಗ್ ವಿಡಿಯೋ ಔಟ್: ಕಿಚ್ಚನ ಅವುಕು ರಾಜನ ಲುಕ್​ಗೆ ಅಭಿಮಾನಿಗಳು ಫಿದಾ

Sye Raa Narasimha Reddy : ಕರ್ನಾಟಕದಲ್ಲಿ ಇಂತಹದೊಂದು ಕಮಾಲ್ ಮಾಡಲು ಮುಖ್ಯ ಕಾರಣ ಕರುನಾಡ ಮಾಣಿಕ್ಯ ಕಿಚ್ಚ ಸುದೀಪ್. ಹೌದು, ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಅಭಿನಯಿಸಿದ್ದಾರೆ. ಹೀಗಾಗಿ ಟಾಲಿವುಡ್​ನಲ್ಲಿ ಇರುವಂತೆ, ಸ್ಯಾಂಡಲ್​ವುಡ್​ನಲ್ಲೂ ಚಿತ್ರದ ಮೇಲೆ ಅಪಾರ ನಿರೀಕ್ಷೆಯಿದೆ.

zahir | news18-kannada
Updated:August 14, 2019, 9:45 PM IST
ಸೈರಾ ನರಸಿಂಹ ರೆಡ್ಡಿ ಮೇಕಿಂಗ್ ವಿಡಿಯೋ ಔಟ್: ಕಿಚ್ಚನ ಅವುಕು ರಾಜನ ಲುಕ್​ಗೆ ಅಭಿಮಾನಿಗಳು ಫಿದಾ
Sye Raa Narasimha Reddy
  • Share this:
ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಚಿತ್ರ 'ಸೈರಾ ನರಸಿಂಹ ರೆಡ್ಡಿ' ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆಯನ್ನು ತಿಳಿಸಲಿರುವ ಈ ಚಿತ್ರದ ವಿಡಿಯೋ ತುಣುಕನ್ನು 73ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಿಲೀಸ್ ಮಾಡಲಾಗಿದ್ದು, ಚಿತ್ರದಲ್ಲಿನ ಪ್ರಮುಖ ಪಾತ್ರಗಳ ಝಲಕನ್ನು ಈ ಮೂಲಕ ಅನಾವರಣಗೊಳಿಸಲಾಗಿದೆ.

ಸೈರಾ ನರಸಿಂಹ ರೆಡ್ಡಿ ಪಾತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಕಾಣಿಸಿಕೊಂಡರೆ, ಅವುಕು ಪ್ರಾಂತ್ಯದ ರಾಜನ ರೋಲ್​ನಲ್ಲಿ ಕಿಚ್ಚ ಸುದೀಪ್ ನಟಿಸಿದ್ದಾರೆ. ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಹೇಗೆ ಕಾಣಿಸಲಿದ್ದಾರೆಂಬ ಸಣ್ಣ ಸುಳಿವು ಚಿತ್ರತಂಡ ನೀಡಿದ್ದು, ರಾಜನ ಅವತಾರದಲ್ಲಿ ಸ್ಯಾಂಡಲ್​ವುಡ್ ಬಾದ್​ಷಾ ಮೋಡಿ ಮಾಡಿದ್ದಾರೆ.

ಅವುಕು ರಾಜನ ಅವತಾರದಲ್ಲಿ ಸುದೀಪ್


ಇನ್ನು ವಿಶೇಷ ಎನಿಸುವ ಮುಖ್ಯ ಪಾತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಈ ಚಿತ್ರದ ಮೂಲಕ ಟಾಲಿವುಡ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನುಳಿದಂತೆ ಲೇಡಿ ಸೂಪರ್​ಸ್ಟಾರ್ ನಯನತಾರಾ ಚಿತ್ರದ ನಾಯಕಿಯಾಗಿದ್ದು, ಮತ್ತೊಂದು ಹಿರೋಯಿನ್ ಆಗಿ ಮಿಲ್ಕ್​ ಬ್ಯೂಟಿ ತಮನ್ನಾ ಕಾಣಿಸಲಿದ್ದಾರೆ.

ಇನ್ನು ಬ್ರಿಟಿಷದ ಜತೆ ಕೈ ಜೋಡಿಸುವ ದೇಶದ್ರೋಹಿ ಪಾತ್ರವನ್ನು ಜಗಪತಿ ಬಾಬು ನಿರ್ವಹಿಸಿದ್ದಾರೆ ಎನ್ನಲಾಗಿದೆ. ಅದೇ ರೀತಿ ನಿಹಾರಿಕಾ ಹಾಗೂ ವಿಜಯ್ ಸೇತುಪತಿ ಸ್ವಾತಂತ್ರ ಹೋರಾಟಕ್ಕೆ ಕೈ ಜೋಡಿಸಿದ ಆದಿವಾಸಿ ನಾಯಕ-ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. 19 ನೇ ಶತಮಾನದ ಪಾಳೇಗಾರ ನರಸಿಂಹರೆಡ್ಡಿಯ ಇತಿಹಾಸ ತಿಳಿಸಲಿರುವ ಈ ಐತಿಹಾಸಿಕ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಸುರೇಂದರ್ ರೆಡ್ಡಿ.

ಪಂಚಭಾಷೆಯಲ್ಲಿ ತೆರೆ ಕಾಣಲಿದೆ ಎನ್ನಲಾಗಿರುವ ಈ ಬಿಗ್ ಬಜೆಟ್ ಚಿತ್ರಕ್ಕೆ ಬಂಡವಾಳು ಹೂಡುತ್ತಿರುವುದು ನಟ ರಾಮ್ ಚರಣ್ ತೇಜ. ಈಗಾಗಲೇ ಚಿತ್ರೀಕರಣ ಶೇ.90 ರಷ್ಟು ಭಾಗಗಳು ಪೂರ್ತಿಯಾಗಿದ್ದು, 'ಸೈರಾ ನರಸಿಂಹ ರೆಡ್ಡಿ' ಅವರ ಜೀವನಚರಿತ್ರೆಯ ದೃಶ್ಯರೂಪವನ್ನು ಅಕ್ಟೋಬರ್ ಮೊದಲ ವಾರದಲ್ಲಿ ಜನರ ಮುಂದಿಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.


Loading...

ಬಿಡುಗಡೆಗೂ ಮುನ್ನವೇ ಕೋಟಿಗಳ ಲೆಕ್ಕ:

ಟಾಲಿವುಡ್​ ಮೆಗಾಸ್ಟಾರ್ ಚಿರಂಜೀವಿ ಅಭಿನಯದ  'ಸೈರಾ ನರಸಿಂಹ ರೆಡ್ಡಿ' ಬಿಡುಗಡೆಗೆ ಮುನ್ನವೇ ಅಬ್ಬರಿಸಿದೆ. ಬಹುತಾರಾಗಣದ ಈ ಐತಿಹಾಸಿಕ ಚಿತ್ರದ ಕರ್ನಾಟಕ ವಿತರಣಾ ಹಕ್ಕು ಕೋಟಿ ಲೆಕ್ಕದಲ್ಲಿ ಬಿಕರಿಯಾಗಿ ಸ್ಯಾಂಡಲ್​ವುಡ್​ ಮಂದಿಯ ಹುಬ್ಬೇರುವಂತೆ ಮಾಡಿದೆ.

ಈ ಹಿಂದೆ ಚಿರಂಜೀವಿ ಅಭಿನಯದ 'ಖೈದಿ ನಂ.150' ಸಿನಿಮಾ ರೈಟ್ಸ್​ 7.5 ಕೋಟಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಮೆಗಾಸ್ಟಾರ್ 150ನೇ ಚಿತ್ರವನ್ನು ವಿತರಣೆ ಮಾಡಿದ ಧೀರಜ್ ಎಂಟರ್​ಪ್ರೈಸಸ್ ಸಂಸ್ಥೆಯೇ ಇದೀಗ 'ಸೈರಾ ನರಸಿಂಹ ರೆಡ್ಡಿ'ಗೂ ಹೆಗಲು ಕೊಟ್ಟಿದೆ. ಅದರಂತೆ ಸೈರಾದ ಕರ್ನಾಟಕದ ವಿತರಣಾ ಹಕ್ಕನ್ನು ಬರೋಬ್ಬರಿ 32 ಕೋಟಿಗೆ ಧೀರಜ್ ಸಂಸ್ಥೆ ಖರೀದಿ ಮಾಡಿದೆ.

ಕರ್ನಾಟಕದಲ್ಲಿ ಇಂತಹದೊಂದು ಕಮಾಲ್ ಮಾಡಲು ಮುಖ್ಯ ಕಾರಣ ಕರುನಾಡ ಮಾಣಿಕ್ಯ ಕಿಚ್ಚ ಸುದೀಪ್. ಹೌದು, ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಅಭಿನಯಿಸಿದ್ದಾರೆ. ಹೀಗಾಗಿ ಟಾಲಿವುಡ್​ನಲ್ಲಿ ಇರುವಂತೆ, ಸ್ಯಾಂಡಲ್​ವುಡ್​ನಲ್ಲೂ ಚಿತ್ರದ ಮೇಲೆ ಅಪಾರ ನಿರೀಕ್ಷೆಯಿದೆ. ಇದರಿಂದ ಭರ್ಜರಿ ಮಾರ್ಕೆಟ್ ಸೃಷ್ಟಿಸಿಕೊಂಡಿರುವ ಸೈರಾ ತಂಡ ಇದೀಗ ಕೋಟಿ ಲೆಕ್ಕದಲ್ಲಿ ಚಿತ್ರದ ಹಕ್ಕನ್ನು ಮಾರಾಟ ಮಾಡಿದೆ.

ಅಂದಹಾಗೆ ಅನ್ಯಭಾಷಾ ಸಿನಿಮಾವೊಂದು ಕರ್ನಾಟಕದಲ್ಲಿ 30 ಕೋಟಿಗಿಂತ ಅಧಿಕ ಮೊತ್ತಕ್ಕೆ ಮಾರಾಟವಾಗುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ 36 ಕೋಟಿಗೆ ಮಾರಾಟವಾದರೆ, ಸೂಪರ್​ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರದ ವಿತರಣಾ ಹಕ್ಕು 30 ಕೋಟಿಗೆ ಬಿಕರಿಯಾಗಿತ್ತು.

First published:August 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...