ಬೆಂಗಳೂರು: ಗರುಡ ಗಮನ ವೃಷಭ ವಾಹನ ಸಿನಿಮಾ ಬಳಿಕ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty)ಸ್ವಾತಿ ಮುತ್ತಿನ ಮಳೆ ಹನಿಯೇ (Swathi Mutthina Male haniye) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಸ್ಯಾಂಡಲ್ವುಡ್ ಕ್ವೀನ್, ನಟಿ ರಮ್ಯಾ (Ramya) ಅವರ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ (AppleBox Studios) ಅಡಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಚಿತ್ರತಂಡ ಸಿನಿಮಾ ಶೂಟಿಂಗ್ಅನ್ನು ಒಂದೇ ಶೆಡ್ಯೂಲ್ನಲ್ಲಿ ಪೂರ್ಣಗೊಳಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ನಲ್ಲಿ ಬ್ಯುಸಿಯಾಗಿದೆ ಎಂಬ ಮಾಹಿತಿ ಇತ್ತು. ಈ ನಡುವೆಯೇ ಸಿನಿಮಾ ಟೈಟಲ್ ಕುರಿತಂತೆ ವಿವಾದವೊಂದು ಸಖತ್ ಸದ್ದು ಮಾಡುತ್ತಿದ್ದು, ಟೈಟಲ್ ವಿರುದ್ಧ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ಅವರು ಫಿಲಂ ಚೇಂಜರ್ ಮೆಟ್ಟಿಲೇರಿದ್ದರು. ಆದರೆ ಸದ್ಯ ವಿವಾದಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ನಟಿ ರಮ್ಯಾ ಅವರು ಟೈಟಲ್ಅನ್ನು ಕಾನೂನಾತ್ಮಕವಾಗಿಯೇ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾನೂನಾತ್ಮಕವಾಗಿಯೇ ಟೈಟಲ್ ಪಡೆದುಕೊಂಡಿದ್ದರಂತೆ ನಟಿ ರಮ್ಯಾ
ವಿವಾದ ಕುರಿತಂತೆ ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿರೋ ಪೊಗರು ಚಿತ್ರದ ನಿರ್ಮಾಪಕ ಗಂಗಾಧರ್ ಅವರು, ನನ್ನ ಬಳಿ ಇದ್ದ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಅನ್ನು ನಾನು ಕಾನೂನಾತ್ಮಕ ವಾಗಿಯೇ ರಮ್ಯಾ ಅವರಿಗೆ ಕೊಟ್ಟಿದ್ದೀನಿ. ಸಿನಿಮಾ ಶೂಟಿಂಗ್ ಆರಂಭ ಮುನ್ನವೇ ಅವರು ನನ್ನ ಬಳಿಯಿಂದ ಟೈಟಲ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ದೂರು
ಇನ್ನು, ರಾಜ್. ಬಿ. ಶೆಟ್ಟಿ ನಿರ್ದೇಶನ, ರಮ್ಯಾ ನಿರ್ಮಾಣ ಮಾಡುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಶೀರ್ಷಿಕೆ ವಿರುದ್ಧ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ದೂರು ಸಲ್ಲಿಸಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಯಾರಿಗೂ ಸಹ ನೀಡಬಾರದು ಎಂದು ತಮ್ಮ ವಕೀಲರ ವಕೀಲರ ಮೂಲಕ ಫಿಲಂ ಚೇಂಬರ್ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದಾರೆ. ಈ ಶೀರ್ಷಿಕೆ ನೀಡಿದ್ರೆ ಕೃತಿಚೌರ್ಯವಾಗುತ್ತೆ. ಈ ಕಾರಣಕ್ಕೆ ಯಾರಿಗೂ ಸ್ವಾತಿ ಮುತ್ತಿನ ಮಳೆಹನಿಯೇ ಶೀರ್ಷಿಕೆ ನೀಡಬಾರದು ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: RRR vs Rajinikanth: ರಜನಿಕಾಂತ್ ಎರಡು ದಶಕದ ದಾಖಲೆ ಉಡೀಸ್! ಏನಿದು ಆರ್ಆರ್ಆರ್ ಚಮತ್ಕಾರ?
ಅಲ್ಲದೇ, ರಾಜೇಂದ್ರ ಸಿಂಗ್ ಬಾಬು ಅವರು ನಿರ್ಮಿಸಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಶೂಟಿಂಗ್ ಶೇಕಡಾ 80ರಷ್ಟು ಮುಗಿದಿತ್ತು. ಹಿರಿಯ ನಟ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದರು ಎಂದು ನೊಟೀಸ್ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ರೆಬೆಲ್ ಸ್ಟಾರ್ ಅಂಬರೀಶ್ ನಿಧನ ಹೊಂದಿದ ಕಾರಣ ಚಿತ್ರದ ಚಿತ್ರೀಕರಣವು ನಿಂತಿತ್ತು ಎಂದು ನೊಟೀಸ್ನಲ್ಲಿ ತಿಳಿಸಲಾಗಿದೆ.
ಗೆಜ್ಜೆ ಸಿನಿಮಾ ಹಾಡಿನ ಶೀರ್ಷಿಕೆ 'ಸ್ವಾತಿ ಮುತ್ತಿನ ಮಳೆ ಹನಿಯೇ'
ಸ್ವಾತಿ ಮುತ್ತಿನ ಮಳೆಹನಿಯೇ ರಾಜೇಂದ್ರ ಸಿಂಗ್ ಬಾಬು ಅವರೇ ನಿರ್ದೇಶಿಸಿದ ಬಣ್ಣದ ಗೆಜ್ಜೆ ಸಿನಿಮಾ ಹಾಡಿನ ಶೀರ್ಷಿಕೆಯಾಗಿದೆ. ಇದನ್ನು ಬೇರೆ ಯಾರಿಗೇ ಉಪಯೋಗಿಸಲು ಹಕ್ಕು ಇರುವುದಿಲ್ಲ. ಬೇರೆ ನಿರ್ಮಾಪಕರಿಗೆ ಈ ಶೀರ್ಷಿಕೆಯನ್ನು ಬಳಸಲು ನೀಡಿದರೆ ಅದು ಕೃತಿಚೌರ್ಯವಾಗುತ್ತದೆ ಎಂದು ಎಂದು ದೂರಿದ್ದಾರೆ.
ಇದನ್ನೂ ಓದಿ: Kichcha Sudeepa: ಕಿಚ್ಚನ ಮಾತಿಗೆ ಸೆಲ್ಯೂಟ್ ಹೊಡೆದ ಭಟ್ರು - ಯಾಕ್ ಗೊತ್ತೇ?
ಉಳಿದಂತೆ, ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ಸಿರಿ ರವಿಕುಮಾರ್ ಹೀರೋಯಿನ್ ಆಗಿ ರಾಜ್ ಬಿ. ಶೆಟ್ಟಿ ಅವರಿಗೆ ಜೋಡಿಯಾಗಿದ್ದಾರೆ. ಇನ್ನು ಮೋಹಕತಾರೆ ರಮ್ಯಾ ಇದೇ ಮೊದಲ ಬಾರಿ ಪ್ರೊಡ್ಯೂಸರ್ ಆಗಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇದಕ್ಕೂ ಮುನ್ನ ಮೊದಲ ಬಾರಿ ನಟಿ ನಿರ್ಮಾಪಕಿ ಮಾತ್ರವಲ್ಲದೇ, ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಸಿನಿಮಾ ಅನೌನ್ಸ್ ಆದ ಕೆಲ ಸಮಯದ ಬಳಿಕ ಸಿನಿಮಾದಿಂದ ಹೊರಬಂದಿದ್ದರು. ಅಲ್ಲದೇ ಈ ಬಗ್ಗೆ ಸ್ಪಷ್ಟನೆ ನೀಡಿ ಶೀಘ್ರ ಮತ್ತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತೇನೆ ಎಂದು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ