• Home
  • »
  • News
  • »
  • entertainment
  • »
  • Ramya - Raj B Shetty: ರಾಜ್​ಗೆ ಕೈಕೊಟ್ರಾ ರಮ್ಯಾ? ಸ್ವಾತಿ ಮುತ್ತಿನಿಂದ ಪದ್ಮಾವತಿ ಔಟ್!

Ramya - Raj B Shetty: ರಾಜ್​ಗೆ ಕೈಕೊಟ್ರಾ ರಮ್ಯಾ? ಸ್ವಾತಿ ಮುತ್ತಿನಿಂದ ಪದ್ಮಾವತಿ ಔಟ್!

ರಮ್ಯಾ-ರಾಜ್ ಬಿ. ಶೆಟ್ಟಿ

ರಮ್ಯಾ-ರಾಜ್ ಬಿ. ಶೆಟ್ಟಿ

Raj B Shetty-Ramya: ನಟಿ ರಮ್ಯಾ ಅವರು ಅವರ ಕಮ್ ಬ್ಯಾಕ್​​ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಇದು ರಾಜ್ ಬಿ. ಶೆಟ್ಟಿಗೂ ದೊಡ್ಡ ಶಾಕ್.

  • News18 Kannada
  • Last Updated :
  • Bangalore, India
  • Share this:

ಸ್ಯಾಂಡಲ್​ವುಡ್​ನ ಮೋಹಕ ತಾರೆ ನಟಿ ರಮ್ಯಾ (Ramya) ಅವರು ಸ್ವಾತಿ ಮುತ್ತಿನ ಮಳೆ (Swathi Muthina Malehaniye) ಹನಿ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ (Raj B Shetty) ಜೊತೆ ಕಮ್ ಬ್ಯಾಕ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗಷ್ಟೇ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವನ್ನು (Cinema) ಎನೌನ್ಸ್ ಮಾಡಲಾಗಿತ್ತು. ರಮ್ಯಾ ಕಮ್ ಬ್ಯಾಕ್​ಗಾಗಿ ಅಭಿಮಾನಿಗಳು (Fans) ಕಾತರದಿಂದ ಕಾಯುತ್ತಿದ್ದರು. ಆದರೆ ಈಗ ಈ ಸಿನಿಮಾ (Cinema) ಬಗ್ಗೆ ಬಿಗ್ ಅಪ್ಡೇಟ್ ಬಂದಿದ್ದು, ರಮ್ಯಾ ಈ ಸಿನಿಮಾದಲ್ಲಿ ನಾಯಕಿಯಾಗಿ (Heroine) ನಟಿಸುತ್ತಿಲ್ಲ. ಹೌದು. ನಟಿ ರಮ್ಯಾ ಸಿನಿಮಾದಿಂದ ಔಟ್ ಆಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗುವುದಿತ್ತು. ಸಿಂಗಲ್ ಶೆಡ್ಯೂಲ್​​ ನಲ್ಲಿ ಸಿನಿಮಾ ಶೂಟಿಂಗ್  (Shooting) ನಡೆಯಲಿತ್ತು. ಮಧ್ಯೆ ಎರಡೇ ದಿನ ಮಾತ್ರ ಗ್ಯಾಪ್ ಕೊಡಲಾಗಿತ್ತು. ಊಟಿ ಹಾಗೂ ಮೈಸೂರಿನಲ್ಲಿ (Mysuru) ಶೂಟಿಂಗ್ ಲೊಕೇಷನ್ ಕೂಡಾ ನಿಗದಿಯಾಗಿತ್ತು. ಆದರೆ ಇನ್ನೇನು ಶೂಟಿಂಗ್ ಆರಂಭವಾಗಲು ಕೆಲವೇ ದಿನ ಇದ್ದಾಗ ನಟಿ ರಮ್ಯಾ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ.


ಶೂಟಿಂಗ್​ಗೆ ದಿನಗಣನೆ


ಸಿನಿ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಆರಂಭಿಸುವುದರಲ್ಲಿತ್ತು. ದೀಪಾವಳಿ ಹಬ್ಬದ ನಂತರ ಒಂದೇ ಶೆಡ್ಯೂಲ್​ನಲ್ಲಿ ಸಿನಿಮಾ ಶೂಟ್ ಮಾಡಿ ಮುಗಿಸಲು ನಿರ್ಧಾರ ಮಾಡಲಾಗಿತ್ತು. ಆದರೆ ಈ ದಿಢೀರ್ ಬೆಳವಣಿಗೆ ನಿರ್ದೇಶಕ ಹಾಗೂ ನಟ ರಾಜ್ ಬಿ. ಶೆಟ್ಟಿ ಅವರಿಗೂ ದೊಡ್ಡ ಶಾಕ್ ಆಗಿದೆ.


ರಮ್ಯಾ ರಿಪ್ಲೇಸ್ ಯಾರು?


ರಮ್ಯಾ ಸಿನಿಮಾದಿಂದ ಹೊರಬಂದ ಹಿನ್ನೆಲೆ ನಟಿಯಾಗಿ ಬೇರೆ ಯಾರು ತಂಡ ಸೇರಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ರಾಜ್ ಬಿ. ಶೆಟ್ಟಿಗೆ ಇದು ದೊಡ್ಡ ಶಾಕ್ ಆಗಿದ್ದರೂ ಸಿನಿಮಾ ಮಾತ್ರ  ಈಗಾಗಲೇ ನಿಗದಿಪಡಿಸಿದಂತೆ ಶೂಟಿಂಗ್ ಆರಂಭಿಸಲಿದೆ.


ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದ ಸಿನಿಮಾ 'ಸಕುಟುಂಬ ಸಮೇತ'ದಲ್ಲಿ ಹೀರೋಯಿನ್ ಆಗಿದ್ದ ನಟಿ ಈ ಸಿನಿಮಾದಲ್ಲಿ ರಮ್ಯಾ ಪ್ಲೇಸ್​​ಗೆ ಬರಲಿದ್ದಾರೆ ಎನ್ನಲಾಗಿದೆ. ನಟಿ ಸಿರಿ ರವಿಕುಮಾರ್ ಅವರು ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಅವರಿಗೆ ಜೋಡಿಯಾಗಲಿದ್ದಾರೆ.


ಇದನ್ನೂ ಓದಿ: Raj B Shetty - Ramya: ದೀಪಾವಳಿ ಮುಗಿದ ಕೂಡಲೇ ಊಟಿಯಲ್ಲಿ ರಮ್ಯಾ - ರಾಜ್ ಲವ್ವಿ ಡವ್ವಿ, ಎರಡೇ ದಿನ ರಜೆಯಂತೆ!


ಯಾರೀಕೆ ಸಿರಿ ರವಿಕುಮಾರ್?


ಸಿರಿ ರವಿಕುಮಾರ್ ಕನ್ನಡ ಚಿತ್ರರಂಗದಲ್ಲಿ ಬೆಳೆಯುತ್ತಿರುವ ನಟಿ. ಇವರು ನಟಿ ಹಾಗೂ ಮಾಡೆಲ್ ಕೂಡಾ ಹೌದು. ಅವರು ರೇಡಿಯೋ-ಜಾಕಿ ಆಗಿ ಕೂಡ ಕೆಲಸ ಮಾಡಿದ್ದಾರೆ. 2010 ರಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದ ಸಿರಿ ಮೂಲತಃ ಬೆಂಗಳೂರಿನವರು. ಇಂಡಸ್ಟ್ರಿಗೆ ಪ್ರವೇಶಿಸುವ ಮೊದಲು, ಅವರು ಕನ್ನಡ ರಿಯಾಲಿಟಿ ಶೋ  ಕನ್ನಡ ಕೋಗಿಲೆ ಸೀಸನ್ 2 ಗೆ ಆ್ಯಂಕರ್ ಆಗಿದ್ದರು.


ನಿರ್ಮಾಪಕಿಯಾಗಿ ಮುಂದುವರಿಯಲಿದ್ದಾರೆ ರಮ್ಯಾ


ನಟಿ ರಮ್ಯಾ ಹೀರೋಯಿನ್ ಆಗಿ ಸಿನಿಮಾದಿಂದ ಹೊರಗೆ ಬಂದಿದ್ದರೂ ರಮ್ಯಾ ಈ ಸಿನಿಮಾದ ನಿರ್ಮಾಪಕಿಯಾಗಿ ಮುಂದುವರಿಯಲಿದ್ದಾರೆ. ನಟಿ ಇತ್ತೀಚೆಗಷ್ಟೇ ತಮ್ಮ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಅನ್ನು ಎನೌನ್ಸ್ ಮಾಡಿದ್ದರು. ಇದು ರಮ್ಯಾ ಅವರ ಮೊದಲ ಪ್ರೊಡಕ್ಷನ್ ಸಿನಿಮಾ.
ಮೈಸೂರು-ಊಟಿಯಲ್ಲಿ ಶೂಟಿಂಗ್


ಮೈಸೂರು ಹಾಗೂ ಊಟಿಯಲ್ಲಿ ಶೂಟಿಂಗ್ ನಡೆಯಲಿದ್ದು ದೀಪಾವಳಿ ನಂತರ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಈ ಹೊಸ ಬೆಳವಣಿಗೆಯಿಂದ ಚಿತ್ರೀಕರಣ ಶೆಡ್ಯೂಲ್ ಹೇಗೆ ನಡೆಯಲಿದೆ ಎನ್ನುವ ಕುತೂಹಲ ಸಿನಿಪ್ರೇಕ್ಷಕರಲ್ಲಿದೆ.

Published by:Divya D
First published: