• Home
  • »
  • News
  • »
  • entertainment
  • »
  • Actress Ramya: ಪ್ರೇರಣಾ, ಅನಿಕೇತ್ ಪ್ರೇಮಕಥೆ ನೋಡಿ ಮತ್ತೆ ಪ್ರೀತಿಯಲ್ಲಿ ಬೀಳೋದು ಗ್ಯಾರೆಂಟಿ- ನಟಿ, ನಿರ್ಮಾಪಕಿ ರಮ್ಯಾ ಮಾತು

Actress Ramya: ಪ್ರೇರಣಾ, ಅನಿಕೇತ್ ಪ್ರೇಮಕಥೆ ನೋಡಿ ಮತ್ತೆ ಪ್ರೀತಿಯಲ್ಲಿ ಬೀಳೋದು ಗ್ಯಾರೆಂಟಿ- ನಟಿ, ನಿರ್ಮಾಪಕಿ ರಮ್ಯಾ ಮಾತು

ರಮ್ಯಾ-ಸ್ವಾತಿ ಮುತ್ತಿನ ಮಳೆ ಹನಿಯೇ

ರಮ್ಯಾ-ಸ್ವಾತಿ ಮುತ್ತಿನ ಮಳೆ ಹನಿಯೇ

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನೋಡುಗರಿಗೆ ಒಂದು ಸುಂದರ, ಕಾವ್ಯಾತ್ಮಕ ಹಾಗೂ ಸೌಮ್ಯ ಅನುಭವ ನೀಡಲಿದೆ. ಈ ಚಿತ್ರ ನಿಮ್ಮನ್ನು ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಿಸುತ್ತದೆ ಎಂದು ರಮ್ಯಾ ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ (Sandalwood Queen Ramya) ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಜತೆಗೆ 'ಆಪಲ್ ಬಾಕ್ಸ್ ಸ್ಟುಡಿಯೋಸ್' ನಿರ್ಮಾಣ ಸಂಸ್ಥೆ ಮೂಲಕ ಹೊಸ ಸಿನಿಮಾಗಳ (New Movie) ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮೋಹಕ ತಾರೆ ರಮ್ಯಾ, ನಿರ್ದೇಶಕ ರಾಜ್ ಬಿ ಶೆಟ್ಟಿ ಜೊತೆ ಸೇರಿ ಮೊದಲ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.  ಸ್ವಾತಿ ಮುತ್ತಿನ ಮಳೆ ಹನಿಯೇ (Ramya on Swati Muttina Male Haniye) ಈಗಾಗಲೇ ಹಲವು ವಿಚಾರಗಳಲ್ಲಿ ಸುದ್ದಿಯಾಗಿದೆ. ರಾಜ್‌ ಬಿ ಶೆಟ್ಟಿ  ಅವರೇ ಈ ಸಿನಿಮಾದ ನಾಯಕರಾಗಿದ್ದು, ನಾಯಕಿಯಾಗಿ ಸಿರಿ ಕಾಣಿಸಿಕೊಳ್ತಿದ್ದಾರೆ. 


ರಿಲೀಸ್​ಗೆ ರೆಡಿಯಾಗ್ತಿದೆ ಸ್ವಾತಿ ಮುತ್ತಿನ ಮಳೆ ಹನಿಯೇ


ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಈ ವರ್ಷ ತೆರೆಗೆ ಬರಲು ರೆಡಿಯಾಗಿದೆ. ಆರಂಭದಲ್ಲಿ ರಾಜ್‌ ಬಿ ಶೆಟ್ಟಿಗೆ ನಾಯಕಿಯಾಗಿ ರಮ್ಯಾ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಕೊನೆಗೆ ರಮ್ಯಾ ಬದಲಿಗೆ ಸಿರಿ ರವಿಕುಮಾರ್‌ ಆಯ್ಕೆಯಾಗಿದ್ದಾರೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸದಲ್ಲಿ ಚಿತ್ರತಂಡ ಬಿಜಿಯಾಗಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಲವ್​ ಸ್ಟೋರಿ ಕಥೆಯನ್ನು ಒಳಗೊಂಡಿದೆ. ಸಂಕ್ರಾಂತಿ ಹಬ್ಬದ ನಿಮಿತ್ತ ನಟಿ ರಮ್ಯಾ, ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಿಸಲಿದೆ


ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಒಂದು ಪ್ರೇಮಕಾವ್ಯವಾಗಿದ್ದು, ಈ ಸಿನಿಮಾ ನೋಡಿದವರಿಗೆ  ಪ್ರೀತಿ-ಪ್ರೇಮ ಮಧುರ ಎನಿಸುತ್ತದೆ. ತಿ ಹಾಗೂ ಆತ್ಮಶೋಧನೆಯ ಕುರಿತ ಸಿನಿಮಾ ಇದು. ನೋಡುಗರಿಗೆ ಒಂದು ಸುಂದರ, ಕಾವ್ಯಾತ್ಮಕ ಹಾಗೂ ಸೌಮ್ಯ ಅನುಭವ ನೀಡಲಿದೆ. ಈ ಚಿತ್ರ ನಿಮ್ಮನ್ನು ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಿಸುತ್ತದೆ ಎಂದು ರಮ್ಯಾ ಹೇಳಿದ್ದಾರೆ.


ನಿರ್ಮಾಪಕಿಯಾಗಿ ಅನೇಕ ವಿಚಾರ ಕಲಿತೆ


ಮೊದಲ ಬಾರಿ ನಾನು ನಿರ್ಮಾಪಕಿ ಜವಾಬ್ದಾರಿ ನಿರ್ವಹಿಸುತ್ತಾ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣ ಮಾಡುತ್ತಾ ಅನೇಕ ವಿಚಾರ ತಿಳಿದಿದ್ದೇನೆ. ನನಗೆ ಇದು ಅದ್ಭುತವಾದ ಅನುಭವ ಎಂದು ನಟಿ ರಮ್ಯಾ ಹೇಳಿದ್ದಾರೆ.


ಕಳೆದ ವರ್ಷದ ವಿಜಯದಶಮಿ ವೇಳೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಘೋಷಣೆ ಮಾಡಿದ್ರು. ಈ ಸಿನಿಮಾ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಕೇವಲ 18 ದಿನಗಳಲ್ಲಿ ಶೂಟಿಂಗ್‌ ಮುಗಿಸಿಕೊಂಡಿತ್ತು. ಸ್ವಾತಿ ಮುತ್ತಿನ ಮಳೆ ಹನಿಯೇ’ ಇದೊಂದು ಪ್ರಬುದ್ಧ ಲವ್‌ಸ್ಟೋರಿ.


ಪ್ರೇರಣಾ ಮತ್ತು ಅನಿಕೇತ್ ಪ್ರೇಮಕಥೆ


ರಾಜ್​ ಬಿ ಶೆಟ್ಟಿ, ಸಿರಿ ಪ್ರೇಮಕಥೆಯಲ್ಲಿ ಒಂದು ಭಾವುಕ ಪ್ರಯಾಣ ಇರಲಿದೆ. ಈ ಭಾವುಕ ಜರ್ನಿ ಹೇಗಿರಲಿದೆ ಎಂಬುದನ್ನು ಹೇಳಲೆಂದೇ ಇತ್ತೀಚೆಗೆ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿತ್ತು. ಪ್ರೇರಣಾ ಮತ್ತು ಅನಿಕೇತ್ ಎಂಬ ಎರಡು ಪಾತ್ರಗಳ ನಡುವಿನ ಕಥೆಯೇ ಈ ಸಿನಿಮಾ ಮುಖ್ಯ ಅಂಶವಾಗಿದೆ.


ಇದನ್ನೂ ಓದಿ: Actress Ramya: 'ನಾವು ಭಾರತೀಯರು ಹಾಗೇ ಕನ್ನಡಿಗರು ಕೂಡ', ಗಾಯಕ ಅದ್ನಾನ್ ಸಮಿಗೆ ರಮ್ಯಾ ಟಾಂಗ್​!


ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ನಟರ ದಂಡೇ ಇದೆ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮ, ಜೆಪಿ ತುಮ್ಮಿನಾಡ್, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಇನ್ನಿತರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಲಿದ್ದು, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಸಿನಿಮಾ ಶೂಟಿಂಗ್ ಕಂಪ್ಲೀಟ್​ ಆಗಿದ್ದು,  ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಶೀಘ್ರವೇ ತೆರೆ ಮೇಲೆ ಬರಲಿದೆ.

Published by:ಪಾವನ ಎಚ್ ಎಸ್
First published: