• Home
  • »
  • News
  • »
  • entertainment
  • »
  • Raj B Shetty: ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ ಕಂಪ್ಲೀಟ್, ಸಿನಿಮಾ ರಿಲೀಸ್ ಯಾವಾಗ?

Raj B Shetty: ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ ಕಂಪ್ಲೀಟ್, ಸಿನಿಮಾ ರಿಲೀಸ್ ಯಾವಾಗ?

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ

ರಾಜ್ ಬಿ. ಶೆಟ್ಟಿ ಅವರನ್ನು ತೆರೆ ಮೇಲೆ ನೋಡಲು ಕಾಯುತ್ತಿರುವ ಕನ್ನಡ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ ಮುಕ್ತಾಯವಾಗಿದೆ.

  • News18 Kannada
  • Last Updated :
  • Bangalore, India
  • Share this:

ರಾಜ್ ಬಿ ಶೆಟ್ಟಿ (Raj B Shetty) ಅವರು ಗರುಡ ಗಮನ ವೃಷಭ ವಾಹನ ಸಿನಿಮಾ ಮಾಡಿದ ನಂತರ ಈಗ ಸ್ವಾತಿ ಮುತ್ತಿನ ಮಳೆ ಹನಿಯೇ (Swathi Mutthina Male haniye) ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಈ ಸಿನಿಮಾದ ಶೂಟಿಂಗ್ (Shooting) ಸಿಂಗಲ್ ಶೆಡ್ಯೂಲ್​​ನಲ್ಲಿ ಮುಗಿಯಲಿದೆ ಎಂದು ಈ ಹಿಂದೆಯೇ ಚಿತ್ರತಂಡ ಹೇಳಿತ್ತು. ಅದರಂತೆಯೇ ಈಗ ಶೂಟಿಂಗ್ ಕೂಡಾ ಕಂಪ್ಲೀಟ್ ಆಗಿದೆ. ಸಿರಿ ರವಿಕುಮಾರ್ (Siri Ravikumar) ಹೀರೋಯಿನ್ (Heroine) ಆಗಿ ರಾಜ್ ಬಿ. ಶೆಟ್ಟಿ ಅವರಿಗೆ ಜೋಡಿಯಾಗಿದ್ದಾರೆ. ಇನ್ನು ಮೋಹಕತಾರೆ ರಮ್ಯಾ (Ramya) ಇದೇ ಮೊದಲ ಬಾರಿ ಪ್ರೊಡ್ಯೂಸರ್ ಆಗಿ ಮೊದಲ ಸಿನಿಮಾ ಮಾಡಿದ್ದು ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.


ರಮ್ಯಾ ನಿರ್ಮಾಣದ ಮೊದಲ ಸಿನಿಮಾ ಶೂಟಿಂಗ್ ಕಂಪ್ಲೀಟ್


ಸ್ಯಾಂಡಲ್​ವುಡ್ ಕ್ವೀನ್ ನಟಿ ರಮ್ಯಾ ಅವರು ಒಂದು ಮೊಟ್ಟೆಯ ಕಥೆ ಸಿನಿಮಾ ಖ್ಯಾತಿಯ ರಾಜ್ ಬಿ. ಶೆಟ್ಟಿ ಜೊತೆ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಕೆಲವು ತಿಂಗಳ ಹಿಂದೆ ಜೋರಾಗಿ ಚರ್ಚೆಯಾಗುತ್ತಿತ್ತು. ಆದರೆ ಇದು ಅಧಿಕೃತವಾಗಿ ದೃಢೀಕರಿಸಲ್ಪಟ್ಟಿರಲಿಲ್ಲ. ಆದರೆ ನಂತರದಲ್ಲಿ ಈ ಸುದ್ದಿ ನಿಜವಾಗಿತ್ತು.




ಮೋಹಕ ತಾರೆ ರಮ್ಯಾ ಅವರು ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ಎಂದು ಗಾಂಧಿನಗರದ ಸಿನಿ ಪ್ರೇಮಿಗಳು ಸಂಭ್ರಮಿಸಿದ್ರು .ರಮ್ಯಾ ಅವರ ಮೊದಲ ಪ್ರೊಡಕ್ಷನ್ ಸಿನಿಮಾ ಸಿದ್ಧವಾಗುತ್ತಿದ್ದು ಇದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವುದು ಡಬಲ್ ಖುಷಿಯಾಗಿತ್ತು.


ನಿರ್ಮಾಪಕಿಯಾಗಿ ರಮ್ಯಾ ಮೊದಲ ಸಿನಿಮಾ


ಇದೇ ಮೊದಲ ಬಾರಿ ನಟಿ ನಿರ್ಮಾಪಕಿ ಮತ್ತು ನಟಿಯಾಗಿ ಕಾಣಿಸುತ್ತಿದ್ದಾರೆ ಎಂದು ಎಲ್ಲರೂ ಕುತೂಹಲದಲ್ಲಿದ್ದರು. ರಮ್ಯಾ ಅವರ ಮುಂದಿನ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಅನೌನ್ಸ್ ಆದರೂ ನಂತರ ನಟಿ ಇದರಿಂದ ಹೊರಬಂದರು.




ಇದನ್ನೂ ಓದಿ: Actress Ramya Movie: ಸ್ಯಾಂಡಲ್​​ವುಡ್​ ಕ್ವೀನ್​ ಜೊತೆ ರಾಜ್! ರಮ್ಯಾ ಸಿನಿಮಾ ಅನೌನ್ಸ್


ಈ ಸಿನಿಮಾವನ್ನು ರಾಜ್​ ಶೆಟ್ಟಿ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜಯದಶಮಿ ದಿನವೇ ಸಿನಿಮಾ ಅನೌನ್ಸ್ ಮಾಡಲಾಗಿತ್ತು. ನಟಿ ಇತ್ತೀಚೆಗಷ್ಟೇ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಅನೌನ್ಸ್ ಮಾಡಿದ್ದರು. ಈಗ ಅದರಲ್ಲಿಯೇ ಮೊದಲ ಸಿನಿಮಾ ಸೆಟ್ಟೇರಿದೆ. ಆದರೆ ನಂತರದ ದಿನಗಳಲ್ಲಿ ನಟಿ ರಮ್ಯಾ ಸಿನಿಮಾದಿಂದ ಹೊರ ಬರುತ್ತಿರುವುದಾಗಿ ಹೇಳಿ ತಂಡಕ್ಕೆ ಹೊಸ ನಟಿ ಸಿರಿ ರವಿಕುಮಾರ್ ಅವರನ್ನು ವೆಲ್​ಕಂ ಮಾಡಿದ್ದರು.


ಯಾರು ಸಿರಿ ರವಿಕುಮಾರ್?


ನಟಿ ಸಿರಿ ರವಿಕುಮಾರ್ ಅವರು ಈ ಹಿಂದೆ ಸಕುಟುಂಬ ಸಮೇತ ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಅವರು ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ಕೋಗಿಲೆ ಸೀಸನ್ 2 ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದ ಸಿರಿ ಅವರು ನಟಿ ಮಾತ್ರವಲ್ಲದೆ ಖ್ಯಾತ ಮಾಡೆಲ್ ಕೂಡಾ ಹೌದು. ನಟಿ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ನಟಿ 41 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿರಿ ಅವರು ಫೋಟೋಸ್ ಹಾಗೂ ವಿಡಿಯೋ ಪೋಸ್ಟ್ ಮಾಡುತ್ತಲೇ ಇರುತ್ತಾರೆ.


ಸಿನಿಮಾ ಶೂಟಿಂಗ್ ಸದ್ಯ ಮುಕ್ತಾಯವಾಗಿದ್ದು ಈಗ ಸಿನಿಮಾ ರಿಲೀಸ್ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಆದರೆ ಸಿನಿಮಾ ಯಾವಾಗ ರಿಲೀಸ್ ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Published by:Divya D
First published: