ಟ್ವಿಟ್ಟರ್ ಬಳಕೆದಾರ ಮತ್ತು ಯೂಟ್ಯೂಬ್ ಇನ್ಫ್ಲುಯೆನ್ಸರ್ ಒಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker) ಆರೋಪಿಸಿದ್ದಾರೆ. ಅಲ್ಲದೆ, ತನ್ನ ವಿರುದ್ಧ ಕೆಲವು ಸಂದೇಶಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಲವು ಚಲನಚಿತ್ರ ದೃಶ್ಯಗಳಿಗೆ ಸಂಬಂಧಿಸಿದಂತೆ ಕೆಲವು ಹ್ಯಾಶ್ ಟ್ಯಾಗ್‌ಗಳನ್ನು ಸಹ ಹಾಕಿ ಪ್ರಸಾರ ಮಾಡಲಾಗಿದೆ ಎಂದು ನಟಿ ದೂರಿದ್ದಾರೆ. ಈ ದೂರಿನ ಆಧಾರದ ಮೇಲೆ ದೆಹಲಿಯ ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ (Criminal Case) ದಾಖಲಿಸಲಾಗಿದೆ ಮತ್ತು ತನಿಖೆ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಸೆಕ್ಷನ್‌ಗಳಾದ 354 ಡಿ, 509 ಐಪಿಸಿ ಮತ್ತು 67 ಐಟಿ ಕಾಯ್ದೆಗಳನ್ನು ವಿಧಿಸಲಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
YouTube influencer ಹಾಗೂ ಟ್ವಿಟ್ಟರ್ ಬಳಕೆದಾರ ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ತನ್ನ ತಾಳ್ಮೆಯನ್ನು ಮೀರಿಸುವ ಉದ್ದೇಶದಿಂದ ಕೆಲವು ಸಂದೇಶಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಚಲನಚಿತ್ರದ ದೃಶ್ಯವೊಂದಕ್ಕೆ ಸಂಬಂಧಿಸಿದಂತೆ ಕೆಲವು ಹ್ಯಾಶ್ ಟ್ಯಾಗ್‌ಗಳನ್ನು ಕ್ರಿಯೇಟ್ ಮಾಡಿ ಟ್ರೆಂಡಿಂಗ್ ಮಾಡುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಈ ಕುರಿತಾಗಿ ನೈರುತ್ಯ ವಲಯದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಗೌರವ್ ಶರ್ಮಾ ಮಾಹಿತಿ ನೀಡಿದ್ದಾರೆ.
Love winning everywhere 💛✨ https://t.co/AZcfFgNhAb
— Swara Bhasker (@ReallySwara) October 5, 2021
ಇದನ್ನೂ ಓದಿ: Swara Bhasker: ವೆಕೆಷನ್ನಲ್ಲಿ ಸ್ವರಾ ಭಾಸ್ಕರ್: ಇಟಾಲಿಯನ್ ಅಡುಗೆ ಕಲಿಯುತ್ತಿದ್ದಾರೆ ಬಿ-ಟೌನ್ ಸುಂದರಿ..!
ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸೇರಿದಂತೆ ಬಾಲಿವುಡ್ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವಿಷಯಗಳ ಬಗೆಗಿನ ತಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಸ್ಟಾರ್ ಕಿಡ್ಸ್ ಮಾದಕ ವಸ್ತು ಪ್ರಕರಣದಲ್ಲಿ ಸಿಲುಕಿದಾಗ ಸ್ಟಾರ್ಗಳಿಗೆ ಬೆಂಬಲ ನೀಡಿದವರ ಈ ಪೈಕಿ ಸ್ವರಾ ಭಾಸ್ಕರ್ ಕೂಡ ಒಬ್ಬರು.
ಸುಶಾಂತ್ ಸಿಂಗ್ ಸಾವಿನ ನಂತರ ಬಾಯ್ಕಾಟ್ ಸ್ಟಾರ್ ಕಿಡ್ಸ್ ಅನ್ನೋ ಅಭಿಯಾನ ಸಹ ಆರಂಭವಾಗಿತ್ತು. ಆಗಲೇ, ನಟಿ ಅನನ್ಯಾ ಪಾಂಡೆ ಇತ್ತೀಚೆಗೆ ಸ್ಟಾರ್ ಮಕ್ಕಳ ಹೋರಾಟಗಳ ಬಗ್ಗೆ ಮಾತನಾಡಿದ್ದರು ಮತ್ತು ಅಂತಹ ಮಕ್ಕಳು ತಾವು ಗಮನ ಕೇಳದಿದ್ದರೂ ತಮ್ಮನ್ನು ಯಾವಾಗಲೂ ಹೇಗೆ ಪರಿಶೀಲಿಸಲಾಗುತ್ತದೆ ಎಂದು ನೋವು ತೋಡಿಕೊಂಡಿದ್ದರು.
ಇನ್ನು, ಮಾದಕ ವಸ್ತು ಪ್ರಕರಣದಲ್ಲಿ ಸ್ಟಾರ್ ಕಿಡ್ಸ್ಗಳ ಬಂಧನವನ್ನು ಪ್ರಶ್ನಿಸಿದ ಇತರ ಪೋಸ್ಟ್‌ಗಳ ಸ್ಕ್ರೀನ್ಶಾಟ್ಗಳನ್ನು ಸ್ವರಾ ಭಾಸ್ಕರ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.
I am not alone. Suffering casual and everyday cyber sexual harassment is the price many women have to pay to have a voice in our public spaces.. again it’s not okay! https://t.co/HpQqML5A2S
— Swara Bhasker (@ReallySwara) October 10, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ