• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Swara Bhasker: ರಾಜಕಾರಣಿ ಫಹದ್ ಅಹ್ಮದ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್

Swara Bhasker: ರಾಜಕಾರಣಿ ಫಹದ್ ಅಹ್ಮದ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್

ಸ್ವರಾ ಭಾಸ್ಕರ್ - ಫಹದ್ ಅಹ್ಮದ್

ಸ್ವರಾ ಭಾಸ್ಕರ್ - ಫಹದ್ ಅಹ್ಮದ್

ನಟಿ ಸ್ವರಾ ಭಾಸ್ಕರ್ ಅವರು ಮದುವೆಯಾಗಿದ್ದಾರೆ. ಡಿಢೀರ್ ಮದುವೆ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

  • Share this:

ಸ್ವರಾ ಭಾಸ್ಕರ್ (Swara Bhasker) ಅವರು ಲೇಟೆಸ್ಟ್ ಪೋಸ್ಟ್ ಮೂಲಕ ಮದುವೆ ಸುದ್ದಿಯನ್ನು ಕೊಟ್ಟಿದ್ದಾರೆ. ಟ್ವಿಟರ್‌ (Tweet) ಹಾಗೂ ಇನ್​ಸ್ಟಾಗ್ರಾಮ್​ನಲ್ಲಿ ಅವರು ತಮ್ಮ ಮದುವೆ ವಿಚಾರವನ್ನು ಶೇರ್ ಮಾಡಿದ್ದಾರೆ. ರಾಜಕಾರಣಿ ಹಾಗೂ ಕಾರ್ಯಕರ್ತ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿದ್ದಾರೆ ಸ್ವರಾ ಭಾಸ್ಕರ್. ಈ ಮೂಲಕ ತಮ್ಮ ವಿವಾಹವನ್ನು ಅನೌನ್ಸ್ ಮಾಡಿದ್ದಾರೆ. ತಮ್ಮ ಪ್ರೀತಿಯ ಕಥೆಯನ್ನು  (Love Story) ವಿವರಿಸುವಾಗ ನಟಿ ತಮ್ಮ ಎಲ್ಲಾ ಸುಂದರ ಕ್ಷಣಗಳನ್ನು  ಸೇರಿಸಿರುವಂತಹ ವೀಡಿಯೊವನ್ನು (Video) ಹಂಚಿಕೊಂಡಿದ್ದಾರೆ. ವೀರೆ ದಿ ವೆಡ್ಡಿಂಗ್ ನಟಿ, ಜನವರಿ 6, 2023 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು (Special Marriage Act) ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿದ್ದಾರೆ (Registered) ಎಂದು ತಿಳಿಸಿದ್ದಾರೆ.


ತಮ್ಮ ಮನಸಿನಲ್ಲಿರುವುದನ್ನು ಮುಕ್ತವಾಗಿ ಮಾತನಾಡುವುದಕ್ಕೆ ಹಾಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ವಿಚಾರದಿಂದ ಹೆಸರುವಾಸಿಯಾದ ಸ್ವರಾ ಭಾಸ್ಕರ್, ಫಹದ್ ಅಹ್ಮದ್ ಅವರೊಂದಿಗಿನ ವಿವಾಹವನ್ನು ಅನೌನ್ಸ್ ಮಾಡಿದ್ದಾರೆ.


ಫಹಾದ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಬಯೋ ಪ್ರಕಾರ ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದಾರೆ. ನಟಿ ಟ್ವಿಟರ್‌ನಲ್ಲಿ ತಮ್ಮ ಸುಂದರವಾದ ಪ್ರೇಮಕಥೆಯನ್ನು ವಿವರಿಸುವಾಗ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಕೊನೆಯಲ್ಲಿ, ಸ್ವರಾ ತನ್ನ ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ ತನ್ನ ಕೋರ್ಟ್​ ಮ್ಯಾರೇಜ್​ನ ಲುಕ್ ನೀಡಿದರು.
ಕೆಲವೊಮ್ಮೆ ನಿಮ್ಮ ಪಕ್ಕದಲ್ಲಿರುವ ಯಾವುದೋ ಒಂದನ್ನು ನೀವು ದೂರದಲ್ಲಿ ಎಲ್ಲಿಯೂ ವ್ಯಾಪಕವಾಗಿ ಹುಡುಕುತ್ತೀರಿ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು, ಆದರೆ ನಾವು ಮೊದಲು ಸ್ನೇಹವನ್ನು ಕಂಡುಕೊಂಡಿದ್ದೇವೆ. ನಂತರ ನಾವು ಒಬ್ಬರನ್ನೊಬ್ಬರು ಕಂಡುಕೊಂಡಿದ್ದೇವೆ! ನನ್ನ ಹೃದಯಕ್ಕೆ ಸ್ವಾಗತ. ನನ್ನ ಮನಸು ತುಂಬಾ ಅಸ್ತವ್ಯಸ್ತವಾಗಿದೆ, ಆದರೆ ಅದು ಸಂಪೂರ್ಣವಾಗಿ ನಿಮ್ಮದು ಎಂದಿದ್ದಾರೆ.


ಇದನ್ನೂ ಓದಿ: Actress Sonam: 14 ವರ್ಷದಲ್ಲೇ ನಟನೆ, 19 ವರ್ಷಕ್ಕೆ ಗರ್ಭಿಣಿಯಾದ ಸೋನಂ


ಸ್ವರಾ ಭಾಸ್ಕರ್ ಈ ಹಿಂದೆ ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು. ನಟಿ ತನ್ನ ತಲೆಯನ್ನು ಯಾರದೋ ತೋಳುಗಳಲ್ಲಿ ಆರಾಮವಾಗಿಟ್ಟುಕೊಂಡು ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರು ಹಾಸಿಗೆಯ ಮೇಲೆ ಮಲಗಿರುವಾಗ ಒಬ್ಬ ವ್ಯಕ್ತಿಯ ತೋಳು ಅವರನ್ನು ಬಳಸಿ ಹಿಡಿದಿತ್ತು. ಇದು ಅವರ ಲವರ್ ಆಗಿರಬಹುದು ಎಂದು ಈಗ ಜನ ಗೆಸ್ ಮಾಡಿದ್ದಾರೆ.


ಈ ಹಿಂದೆ, ಸ್ವರಾ ಭಾಸ್ಕರ್ ಅವರು ಬರಹಗಾರ ಹಿಮಾಂಶು ಶರ್ಮಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವದಂತಿಗಳಿವೆ. ವರದಿಯ ಪ್ರಕಾರ, ಅವರು ಅದನ್ನು 2019 ರಲ್ಲಿ ತ್ಯಜಿಸಿದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು