ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗೋ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ (Reality Show) ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮನೆಯಲ್ಲಿರೋ ಮಹಿಳೆಯರಿಗೆ ಸಮಯ ಕಳೆಯಲು ಇದು ಒಳ್ಳೆ ಮನರಂಜನಾ (Entertainment) ಕಾರ್ಯಕ್ರಮವಾಗಿದೆ. ಈ ಶೋನಲ್ಲಿ ಒಂದಷ್ಟು ಗೇಮ್, ಮತ್ತಷ್ಟೋ ತಮಾಷೆ ಇರುತ್ತೆ. ಸ್ಪರ್ಧಿಗಳಿಗೂ ಸಖತ್ ಟಾಸ್ಕ್ ನೀಡಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸೋ ಕೆಲಸ ಮಾಡ್ತಾರೆ ನಿರೂಪಕಿ ಶಾಲಿನಿ (Shalini), ಸೂಪರ್ ಸ್ಟಾರ್ ರಿಯಾಲಿಟಿ ಶೋ ಜನಪ್ರಿಯವಾಗಲು ಶಾಲಿನಿ ಅವರು ಕೂಡ ಕಾರಣ ಎಂದೇ ಹೇಳಬಹುದು. ಇವ್ರ ನಿರೂಪಣೆ ಶೈಲಿಯೇ ಕಾರ್ಯಕ್ರಮ ಯಶಸ್ವಿಗೆ ಕಾರಣವಾಗಿದೆ. ಆದ್ರೆ ಅವ್ರು ಕಾರ್ಯಕ್ರಮದಲ್ಲಿ ಹಾಕೋ ಬ್ಲೌಸ್ ಡಿಸೈನ್ (Blouse Design) ಎಲ್ಲರ ಗಮನ ಸೆಳೆಯುತ್ತಿದೆ. ಒಂದು ಬ್ಲೌಸ್ ಮೇಲೆ 5 ಹಾಡುಗಳನ್ನು (Songs) ಮಾಡಿದ್ದಾರೆ.
ಬ್ಲೌಸ್ ಡಿಸೈನರ್ ಮೋನಿಶ್
ಶಾಲಿನ ಅವರ ಬ್ಲೌಸ್ ಗಳನ್ನು ಮೋನಿಶ್ ಎನ್ನುವವರು ಡಿಸೈನ್ ಮಾಡುತ್ತಾರೆ. ವಿಭಿನ್ನ ವಿಭಿನ್ನ ಡಿಸೈನ್ ಮಾಡುತ್ತಾರೆ. ಇದುವರೆಗೂ ನವಿಲು, ಬಾಳೆಹಣ್ಣು, ಬಾಳೆ ಎಲೆ, ದೇವಿ ಡಿಸೈನ್. ಹೀಗೆ ಹಲವು ಡಿಸೈನ್ ಗಳನ್ನು ಮಾಡಿ ಶಾಲಿನಿ ಅವರಿಗೆ ಡಿಪರೆಂಟ್ ಲುಕ್ ನೀಡಿದ್ದಾರೆ. ಇವನ್ನು ನೋಡಿ ಹಲವು ಮಹಿಳೆಯರು ಮೆಚ್ಚಿದ್ದಾರೆ.
ಎಲ್ಲಾ ಬ್ಲೌಸ್ಗೂ ರೀಲ್ಸ್
ಶಾಲಿನಿ ಅವರು ವಿಭಿನ್ನ ಬ್ಲೌಸ್ ಗಳನ್ನು ಹಾಕಿಕೊಂಡಾಗ ರೀಲ್ಸ್ ಮಾಡ್ತಾರೆ. ಮೋನಿಶ್ ಮತ್ತು ಅವರ ಹುಡುಗರ ಜೊತೆ ಕಾಮಿಡಿಯಾಗಿ ರೀಲ್ಸ್ ಮಾಡ್ತಾರೆ. ಅದು ಶಾಲಿನಿ ಅವರಿಗೆ ರೇಗಿಸುವ ರೀತಿ ಇರುತ್ತೆ. ಆದರೂ ಅವರು ಬೇಸರ ಮಾಡಿಕೊಳ್ಳಲ್ಲ. ಕೊನಯಲ್ಲಿ ಮೋನಿಶಾ ಎಂದು ಕೂಗುವ ಮೂಲಕ ರೀಲ್ಸ್ ಎಂಡ್ ಮಾಡ್ತಾರೆ.
ಇದನ್ನೂ ಓದಿ: Shrirasthu Shubhamasthu: ಸೊಸೆ ಪ್ರಾಣ ಉಳಿಸುವ ಜವಾಬ್ದಾರಿ ಮಾಧವನ ಮೇಲೆ, ಅವಿನಾಶ್ ಕೆಂಡಾಮಂಡಲ!
ಒಂದು ಬ್ಲೌಸ್ ಮೇಲೆ 5 ಹಾಡು
ಶಾಲಿನಿ ಅವರು ಬ್ಲ್ಯಾಕ್ ಅಂಡ್ ರೆಡ್ ಕಾಂಬಿನೇಷನ್ ಸೀರೆ ಹುಟ್ಟಿದ್ದಾರೆ. ಅದರ ಬ್ಲೌಸ್ ರೆಕ್ಕೆ ರೀತಿ ಇದೆ . ಅದಕ್ಕೆ ಮೋನಿಶ್ ಅವರೇ ನಾಲ್ಕು ಹಾಡುಗಳನ್ನು ಹೇಳಿದ್ದಾರೆ.
ಹಾರುತ್ತಿವೆ ಲವ್ ಬರ್ಡ್ಸ್ ಗಳು, ಓಡುತಿವೆ ಕನಸುಗಳು.
ಟುವ್ವಿ ಟುವ್ವಿ ಎಂದು ಹಾರುವ ಹೊಸ ಹಕ್ಕಿಯ ನೋಡಿದೆ.
ಇದು ಹಕ್ಕಿ ಅಲ್ಲ, ಆದ್ರೂ ಹಾರ್ತೈತಲ್ಲ, ಇದು ಗೂಳಿ ಅಲ್ಲ, ಆದ್ರೂ ಕೊಂಬು ಐತೆಲ್ಲಾ.
ರೆಕ್ಕೆ ಇದ್ದರೆ ಸಾಕೇ, ಹಕ್ಕಿಗೆ ಬೇಕು ಭಾನು
ಈ ನಾಲ್ಕು ಹಾಡುಗಳನ್ನು ಮೋನಿಶ್ ಅವರು ಹಾಡಿದ್ದಾರೆ. ಇದಕ್ಕೆ ಟಾಂಗ್ ಕೊಡಲು ಶಾಲಿನಿ ಅವರು ನೀನೇ ಸಾಕಿದ ಗಿಣಿ. ನಿನ್ನ ಮುದ್ದಿನ ಗಿಣಿ. ಹದ್ದಾಗಿ ಕುಕ್ಕಿತಲ್ಲಾ ಎಂದು ಹಾಡು ಹೇಳಿದ್ದಾರೆ.
View this post on Instagram
ಸೂಪರ್ ಎಂದ್ರು ಅಭಿಮಾನಿಗಳು
ಶಾಲಿನಿ ಅವರ ಈ ರೀಲ್ಸ್ ನನ್ನು ಜನ ಮೆಚ್ಚಿಕೊಂಡಿದ್ದಾರೆ. ಸೂಪರ್ ಎಂದಿದ್ದಾರೆ. ಹಲವರು ತುಂಬಾ ನಕ್ಕಿದ್ದಾರೆ. ಎಂಜಾಯ್ ಮಾಡಿದ್ದಾರೆ. ನಿಮ್ಮ ರೀಲ್ಸ್ ಇಷ್ಟ ಆಯ್ತು ಎಂದು ಹೇಳಿದ್ದಾರೆ. ಶಾಲಿನಿ ಅವರನ್ನು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: APPU ಅಂದ್ರೆ ಏನು? ಸರಿಗಮಪ ವೇದಿಕೆಯಲ್ಲಿ ಪವರ್ ಸ್ಟಾರ್ ಬಗ್ಗೆ ದಿಯಾ ಹೇಳಿದ್ದು ಹೀಗೆ!
ಸದ್ಯ, ವಾರಕ್ಕೆ ಎರಡು ಎಪಿಸೋಡ್ಗಳು ಪ್ರಸಾರವಾಗುತ್ತವೆ. ಹಾಗೆಲ್ಲಾ ಹೆಚ್ಚು ಗಮನ ಸೆಳೆಯುವುದು ಇದೆ ಶಾಲಿನಿ ಹಾಗೂ ಅವರ ಬ್ಲೌಸ್ ಡಿಸೈನ್ಗಳು. ಜನ ಕೂಡ ಶಾಲಿನಿ ಈ ಬಾರಿ ಯಾವ ಡಿಸೈನ್ ಬ್ಲೌಸ್ ಹಾಕಿಕೊಂಡು ಬರ್ತಾರೆ ಎಂದು ಕಾಯುತ್ತಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ