Anchor Shalini: ಶಾಲಿನಿ ಬ್ಲೌಸ್ ಮೇಲೆ 3ಡಿ ನವಿಲು, ಕಿವಿಯಲ್ಲೂ ಪಿಕಾಕ್ ಓಲೆ!

ಶಾಲಿನಿ ಅವರ ಬ್ಲೌಸ್ ಮೇಲೆ 3ಡಿ ನವಿಲು

ಶಾಲಿನಿ ಅವರ ಬ್ಲೌಸ್ ಮೇಲೆ 3ಡಿ ನವಿಲು

ಶಾಲಿನಿ ಅವರು ಈ ಬಾರಿ 3ಡಿ ನವಿಲಿನ ಬ್ಲೌಸ್ ಹಾಕಿಕೊಂಡಿದ್ದಾರೆ. ಜೊತೆಗೆ ನವಿಲಿನ ಆಕಾರದ ಕಿವಿಯೋಲೆ ಹಾಕಿಕೊಂಡಿದ್ದಾರೆ.

  • News18 Kannada
  • 4-MIN READ
  • Last Updated :
  • Karnataka, India
  • Share this:

    ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗೋ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ (Reality Show) ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮನೆಯಲ್ಲಿರೋ ಮಹಿಳೆಯರಿಗೆ ಸಮಯ ಕಳೆಯಲು ಇದು ಒಳ್ಳೆ ಮನರಂಜನಾ ಕಾರ್ಯಕ್ರಮವಾಗಿದೆ. ಈ ಶೋನಲ್ಲಿ ಒಂದಷ್ಟು ಗೇಮ್, ಮತ್ತಷ್ಟೋ ತಮಾಷೆ ಇರುತ್ತೆ. ಸ್ಪರ್ಧಿಗಳಿಗೂ ಸಖತ್ ಟಾಸ್ಕ್ (Task) ನೀಡಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸೋ ಕೆಲಸ ಮಾಡ್ತಾರೆ ನಿರೂಪಕಿ ಶಾಲಿನಿ (Shalini). ಸೂಪರ್ ಸ್ಟಾರ್ ರಿಯಾಲಿಟಿ ಶೋ ಜನಪ್ರಿಯವಾಗಲು ಶಾಲಿನಿ ಅವರು ಕೂಡ ಕಾರಣ ಎಂದೇ ಹೇಳಬಹುದು. ಇವ್ರ ನಿರೂಪಣೆ ಶೈಲಿಯೇ ಕಾರ್ಯಕ್ರಮ ಯಶಸ್ವಿಗೆ ಕಾರಣವಾಗಿದೆ. ಆದ್ರೆ ಅವ್ರು ಕಾರ್ಯಕ್ರಮದಲ್ಲಿ ಹಾಕೋ ಬ್ಲೌಸ್ ಡಿಸೈನ್ ಎಲ್ಲರ ಗಮನ ಸೆಳೆಯುತ್ತಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಬ್ಲೌಸ್ ಮೇಲೆ 3ಡಿ ನವಿಲು ಡಿಸೈನ್ ಮಾಡಲಾಗಿದೆ. ಅಲ್ಲದೇ ಕಿವಿಯೋಲೆ ಸಹ ನವಿಲಿನ ಆಕಾರದ್ದು.


    3ಡಿ ನವಿಲು, ಕಿವಿಯೋಲೆ
    ಶಾಲಿನಿ ಅವರು ಈ ಬಾರಿ 3ಡಿ ನವಿಲಿನ ಬ್ಲೌಸ್ ಹಾಕಿಕೊಂಡಿದ್ದಾರೆ. ಜೊತೆಗೆ ನವಿಲಿನ ಆಕಾರದ ಕಿವಿಯೋಲೆ ಹಾಕಿಕೊಂಡಿದ್ದಾರೆ. ರಂಗಸ್ತ್ರೀ ಎನ್ನುವ ಇನ್ ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಹಾಕಿಕೊಂಡಿದ್ದಾರೆ. ಇದು ಶಾಲಿನಿ ಅವರಿಗಾಗಿ ಮಾಡಿದ್ದು ಎಂದು ಹಾಕಿಕೊಂಡಿದ್ದಾರೆ. ನವಿಲೇ ಅನ್ನುವ ಹಾಡಿಗೆ ರೀಲ್ಸ್ ಮಾಡಿದ್ದಾರೆ.


    ಎಲ್ಲಾ ಬ್ಲೌಸ್‍ಗೂ ರೀಲ್ಸ್
    ಶಾಲಿನಿ ಅವರು ವಿಭಿನ್ನ ಬ್ಲೌಸ್ ಗಳನ್ನು ಹಾಕಿಕೊಂಡಾಗ ರೀಲ್ಸ್ ಮಾಡ್ತಾರೆ. ಮೋನಿಶ್ ಮತ್ತು ಅವರ ಹುಡುಗರ ಜೊತೆ ಕಾಮಿಡಿಯಾಗಿ ರೀಲ್ಸ್ ಮಾಡ್ತಾರೆ. ಅದು ಶಾಲಿನಿ ಅವರಿಗೆ ರೇಗಿಸುವ ರೀತಿ ಇರುತ್ತೆ. ಆದರೂ ಅವರು ಬೇಸರ ಮಾಡಿಕೊಳ್ಳಲ್ಲ. ಕೊನೆಯಲ್ಲಿ ಮೋನಿಶಾ ಎಂದು ಕೂಗುವ ಮೂಲಕ ರೀಲ್ಸ್ ಎಂಡ್ ಮಾಡ್ತಾರೆ.


    star suvarna channel, anchor shalini, shalini blouse design, shalini blouse design 3d peacock themed, ಸ್ಟಾರ್ ಸುವರ್ಣ ಚಾನೆಲ್, ಶಾಲಿನಿ ಅವರ ಬ್ಲೌಸ್ ಮೇಲೆ 3ಡಿ ನವಿಲು, ಕಿವಿಯಲ್ಲೂ ಪಿಕಾಕ್ ಓಲೆ!, kannada news, karnataka news,
    ಶಾಲಿನಿ ಅವರ ಬ್ಲೌಸ್ ಮೇಲೆ 3ಡಿ ನವಿಲು


    ಬ್ಲೌಸ್ ಡಿಸೈನರ್ ಮೋನಿಶ್
    ಶಾಲಿನಿ ಅವರ ಬ್ಲೌಸ್ ಗಳನ್ನು ಮೋನಿಶ್ ಎನ್ನುವವರು ಡಿಸೈನ್ ಮಾಡುತ್ತಾರೆ. ವಿಭಿನ್ನ ವಿಭಿನ್ನ ಡಿಸೈನ್ ಮಾಡುತ್ತಾರೆ. ಇದುವರೆಗೂ ನವಿಲು, ಬಾಳೆಹಣ್ಣು, ಬಾಳೆ ಎಲೆ, ದೇವಿ ಡಿಸೈನ್. ಹೀಗೆ ಹಲವು ಡಿಸೈನ್ ಗಳನ್ನು ಮಾಡಿ ಶಾಲಿನಿ ಅವರಿಗೆ ಡಿಫೆರೆಂಟ್ ಲುಕ್ ನೀಡಿದ್ದಾರೆ. ಇವನ್ನು ನೋಡಿ ಹಲವು ಮಹಿಳೆಯರು ಮೆಚ್ಚಿದ್ದಾರೆ.




    ಸೂಪರ್ ಎಂದ್ರು ಅಭಿಮಾನಿಗಳು
    ಶಾಲಿನಿ ಅವರ ಈ ರೀಲ್ಸ್ ನನ್ನು ಜನ ಮೆಚ್ಚಿಕೊಳ್ತಾರೆ. ಸೂಪರ್ ಎಂದಿದ್ದಾರೆ. ಹಲವರು ತುಂಬಾ ನಕ್ಕಿದ್ದಾರೆ. ಎಂಜಾಯ್ ಮಾಡಿದ್ದಾರೆ. ನಿಮ್ಮ ರೀಲ್ಸ್ ಇಷ್ಟ ಆಯ್ತು ಎಂದು ಹೇಳಿದ್ದಾರೆ. ಶಾಲಿನಿ ಅವರು ಪ್ರತಿ ಬಾರಿ ವಿಭಿನ್ನವಾದ ಬ್ಲೌಸ್ ಹಾಕಿದಾಗಲೂ ರೀಲ್ಸ್ ಮಾಡ್ತಾರೆ.









    View this post on Instagram






    A post shared by Nandini Gupta (@rangastree)





    ಕಳೆದ ಬಾರಿ 5 ರೀಲ್ಸ್
    ಕಳೆದ ಬಾರಿ ಶಾಲಿನಿ ಅವರು ಬ್ಲ್ಯಾಕ್ ಅಂಡ್ ರೆಡ್ ಕಾಂಬಿನೇಷನ್ ಸೀರೆ ಹುಟ್ಟಿದ್ದಾರೆ. ಅದರ ಬ್ಲೌಸ್ ರೆಕ್ಕೆ ರೀತಿ ಇದೆ. ಅದಕ್ಕೆ ಮೋನಿಶ್ ಅವರೇ ನಾಲ್ಕು ಹಾಡುಗಳನ್ನು ಹೇಳಿದ್ದರು.
    ಹಾರುತ್ತಿವೆ ಲವ್ ಬಡ್ರ್ಸ್ ಗಳು, ಓಡುತಿವೆ ಕನಸುಗಳು.
    ಟುವ್ವಿ ಟುವ್ವಿ ಎಂದು ಹಾರುವ ಹೊಸ ಹಕ್ಕಿಯ ನೋಡಿದೆ.
    ಇದು ಹಕ್ಕಿ ಅಲ್ಲ, ಆದ್ರೂ ಹಾರ್ತೈತಲ್ಲ, ಇದು ಗೂಳಿ ಅಲ್ಲ, ಆದ್ರೂ ಕೊಂಬು ಐತೆಲ್ಲಾ.
    ರೆಕ್ಕೆ ಇದ್ದರೆ ಸಾಕೇ, ಹಕ್ಕಿಗೆ ಬೇಕು ಭಾನು


    star suvarna channel, anchor shalini, shalini blouse design, shalini blouse design 3d peacock themed, ಸ್ಟಾರ್ ಸುವರ್ಣ ಚಾನೆಲ್, ಶಾಲಿನಿ ಅವರ ಬ್ಲೌಸ್ ಮೇಲೆ 3ಡಿ ನವಿಲು, ಕಿವಿಯಲ್ಲೂ ಪಿಕಾಕ್ ಓಲೆ!, kannada news, karnataka news,
    ಕಿವಿಯೋಲೆ


    ಇದನ್ನೂ ಓದಿ: Olavina Nildana: ಪಾಲಾಕ್ಷನ ಕುತಂತ್ರದ ಮುಂದೆ ಸಿದ್ಧಾಂತ್ ಸವಾಲ್ ನಡೆಯಲ್ವಾ? 


    ಈ ನಾಲ್ಕು ಹಾಡುಗಳನ್ನು ಮೋನಿಶ್ ಅವರು ಹಾಡಿದ್ದರು. ಇದಕ್ಕೆ ಟಾಂಗ್ ಕೊಡಲು ಶಾಲಿನಿ ಅವರು ನೀನೇ ಸಾಕಿದ ಗಿಣಿ. ನಿನ್ನ ಮುದ್ದಿನ ಗಿಣಿ. ಹದ್ದಾಗಿ ಕುಕ್ಕಿತಲ್ಲಾ ಎಂದು ಹಾಡು ಹೇಳಿದ್ದರು.

    Published by:Savitha Savitha
    First published: