ಕೂಡು ಕುಟುಂಬದ ಹಾಗೂ ತಮ್ಮ ಕುಟುಂಬದ ಸದಸ್ಯರ ಮಧ್ಯದ ಅನ್ಯೋನ್ಯತೆಯನ್ನು ಕೇಂದ್ರವಾಗಿಸಿಕೊಂಡು ಹೊಸದಾಗಿ ಆರಂಭವಾದ ಧಾರವಾಹಿ 'ಜೇನುಗೂಡು' (Jenu Goodu). ದಿಯಾ ಎಂದರೆ ನಡುಕೋಟೆ ಮನೆಯವರಿಗೆ ಮುದ್ದು ಜಾಸ್ತಿ. ಆಕೆ ಮಾಡುವ ತುಂಟಾಟ, ಮಗುವಿನಂತ ಮನಸ್ಸಿಗೆ ಎಲ್ಲರೂ ಸೋತು ಹೋಗಿದ್ದಾರೆ. ಆಕೆಯ ಮುಗ್ಧತೆಗೆ ಮನೆ ಮಂದಿ ಆಗಾಗ ನಸು ನಗುತ್ತಾರೆ. ಆದರೆ ಈಗ ನಡುಕೋಟೆ ಮನೆಗೆ ದಿಯಾ (Diya) ಭಾಗ್ಯದ ಲಕ್ಷ್ಮೀ ಆಗಿದ್ದಾಳೆ. ಜೇನುಗೂಡು ಧಾರವಾಹಿಯಲ್ಲಿ ಇದೀಗ ಮದುವೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಕುಟುಂಬ (Family) ದ ಎಲ್ಲಾ ಸದಸ್ಯರು ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ. ದಿಯಾ ಹಾಗೂ ಶಶಾಂಕ್ (Shashank) ಪರಸ್ಪರ ಎಷ್ಟೇ ಜಗಳವಾಡಿದರೂ ಮನದ ಮೂಲೆಯಲ್ಲಿ ಇವರಿಬ್ಬರಿಗೂ ಪ್ರೀತಿಯ ಭಾವನೆ ಎನ್ನುವುದಂತು ಸತ್ಯ. ಜಗಳದ ಜೊತೆಜೊತೆಗೆ ಇವರಿಬ್ಬರ ಮಧ್ಯೆ ಪ್ರೀತಿ (Love) ಯ ಭಾವನೆ ಅಡಗಿದೆ, ಅದೇ ರೀತಿ ಒಬ್ಬರಿಗೊಬ್ಬರು ಕೇರ್ ಮಾಡಲು ಶುರು ಮಾಡಿದ್ದಾರೆ.
ದಿಯಾ ಬಾಯ್ ಫ್ರೆಂಡ್ ಬದಲಾಯಿದ ಡಾಕ್ಟರ್
ದಿಯಾಗೆ ಮನೆಯಲ್ಲಿ ಹೆಚ್ಚು ಕೂರುವುದು ಅಷ್ಟಾಗಿ ಅಭ್ಯಾಸವಿಲ್ಲ. ಹೀಗಾಗಿ ಆಗಾಗ ಊರು ಸುತ್ತುತ್ತಾ ಇರುತ್ತಾಳೆ. ಇದಕ್ಕೆ ಅವರ ತಂದೆಯ ಅಭ್ಯಂತರವೇನೂ ಇಲ್ಲ. ಆದರೆ ಈಗ ಖಂಡಿತ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕಾರಣ ದಿಯಾಳ ಮದುವೆ ಫಿಕ್ಸ್ ಆಗಿರುವುದು. ಹೀಗಾಗಿ ಮದುವೆಯಾಗುವ ಹುಡುಗ ಶಶಾಂಕ್, ದಿಯಾಳ ಬಾಯ್ಫ್ರೆಂಡ್ ಆಗಿ ಬದಲಾಗಿದ್ದಾನೆ. ಶಶಾಂಕ್ ಈ ವಿಚಾರಕ್ಕೆ ಒಳಗೊಳಗೆ ಖುಷಿ ಪಟ್ಟಿದ್ದಾನೆ. ದಿಯಾ ಎಷ್ಟೆ ಜಗಳವಾಡಿದರು ಮನಸ್ಸಲ್ಲಿ ಓಕೆ ಎನ್ನುತ್ತಿದ್ದಾಳೆ.
ದಿಯಾಳ ಖುಷಿಗೆ ನಡುಕೋಟೆ ಮನೆಯವರೆಲ್ಲಾ ಸಾಥ್ ನೀಡಿದ್ದಾರೆ. ದಿಯಾಳ ಖುಷಿಗಾಗಿ ಸಕಲೇಶಪುರದ ಜೇನುಗುಡ್ಡಕ್ಕೆ ಭೇಟಿ ನೀಡಿದ್ದಾರೆ. ಇಬ್ಬರ ನಡುವಲ್ಲಿ ಪ್ರೀತಿ ಮೂಡಿಸಲು ಕುಟುಂಬಸ್ಥರೇ ಸರ್ಕಸ್ ಮಾಡುತ್ತಿದ್ದಾರೆ. ಅದಕ್ಕೆಂದೇ ಎಲ್ಲರೂ ಜೋಡಿ ಮೇಲೆ ಹೊರಟಿದ್ದಾರೆ.
ಪ್ರಾಂಚಿ ಎಂದರೆ ದಿಯಾಗೆ ಅಚ್ಚುಮೆಚ್ಚಾದರೂ ಆಕೆಯನ್ನು ಮನೆಯಲ್ಲಿಯೇ ಬಿಟ್ಟು ಆರು ಜನ ಜೋಡಿ ಮೇಲೆ ಹೊರಟಿದ್ದಾರೆ. ಬರೀ ಕೋಳಿ ಜಗಳವಾಡುವ ಶಶಾಂಕ್ ದಿಯಾ ನಡುವೆ ಪ್ರೀತಿ ಹುಟ್ಟಿಸಲೇಬೇಕೆಂದು ಹಠ ತೊಟ್ಟವರಂತೆ ಕಾಣುತ್ತಿದ್ದಾರೆ. ಇದಕ್ಕೆ ಹಚ್ಚ ಹಸಿರಿನ ಸಿರಿಯನ್ನು ಹುಡುಕಿದ್ದಾರೆ.
ಮಾಯಾಳಿಗೆ ಶಶಾಂಕ್ ಮೇಲೆ ಪ್ರೀತಿ
ಮಾಯಾಳಿಗೆ ಶಶಾಂಕ್ ಮೇಲೆ ಪ್ರೀತಿ ಹುಟ್ಟಿದೆ. ಆದರೆ ಅದನ್ನು ಹೇಳಿಕೊಳ್ಳುವ ಮುನ್ನವೇ ದಿಯಾ ಜೊತೆ ಶಶಾಂಕ್ ಮದುವೆ ಫಿಕ್ಸ್ ಆಗಿದೆ. ದಿಯಾಳ ಜೊತೆಗೆ ಮದುವೆ ಫಿಕ್ಸ್ ಆಗಿದ್ದರೂ, ಹೇಗಾದರೂ ಮಾಡಿ ಶಶಾಂಕ್ನ ಇಂಪ್ರೆಸ್ ಮಾಡುವುದಕ್ಕೆ ಟ್ರೈ ಮಾಡ್ತಿದ್ದಾಳೆ. ಇದನ್ನು ಮಾಯಾಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ದಿಯಾ ತನ್ನ ಸ್ವಂತ ಮಾವನ ಮಗಳು. ಹೀಗಾಗಿ ಇನ್ನಷ್ಟು ಕೋಪಗೊಂಡಿದ್ದಾಳೆ. ದಿಯಾಳ ಅಪ್ಪನ ಶ್ರೀಮಂತಿಕೆಯಿಂದಲೇ ನನಗೆ ತಾಯಿಯ ಪ್ರೀತಿ ಕಡಿಮೆಯಾಗಿದ್ದು ಎಂದು ಆಗಾಗ ಉಚ್ಛರಿಸುತ್ತಿರುತ್ತಾಳೆ.
ಟ್ರಿಪ್ ಗೆ ಅಂತ ಹೊರಟಾಗ ಶಶಾಂಕ್ ಆಫೀಸ್ ಗೆ ಹೋಗಿದ್ದಾನೆ ಎಂದಾಗಲೆ ಆಕೆಯ ಮನಸ್ಸು ಬೇಸರ ಮಾಡಿಕೊಂಡಿತ್ತು. ಆತ ಜೊತೆಯಲ್ಲಿ ಬರಲೇಬೇಕೆಂದು ಮನಸ್ಸು ಹಾತೊರೆಯುತ್ತಿತ್ತು. ಪ್ರೀತಿಯನ್ನು ಯಾವತ್ತಿಗೂ ಮುಚ್ಚಿಡುವುದಕ್ಕೆ ಆಗುವುದಿಲ್ಲ.
ದಿಯಾ ಕೂಡ ಏನೇ ಸುಳ್ಳು ಹೇಳಿದರು ಆಕೆಗೆ ಪ್ರೀತಿ ಹುಟ್ಟಿರುವುದು ಆಗಾಗಾ ಗೊತ್ತಾಗುತ್ತಲೆ ಇರುತ್ತದೆ. ಶಶಾಂಕ್ಗೂ ಅಷ್ಟೆ ದಿಯಾ ಎಂದರೆ ಖುಷಿ. ಆಕೆಯ ಮುಗ್ಧತೆಗೆ ಮಾರು ಹೋಗಿದ್ದಾನೆ. ಆಕೆ ಮನಸ್ಸಲ್ಲೊಂದು, ಬಾಯಲ್ಲೊಂದು ಮಾತಾಡುವವಳಲ್ಲ ಎಂಬುದು ಅರಿವಾಗಿದೆ. ದಿಯಾಳ ಇನೋಸೆನ್ಸ್ ನೆನೆದು ನಗುತ್ತಿರುತ್ತಾನೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ