ಹೃತಿಕ್ ರೋಷನ್ ಹಾಗೂ ಸುಸೈನ್ ಖಾನ್ ಪ್ರೀತಿ ವಿವಾಹವಾಗಿ, ಎರಡು ಮಕ್ಕಳಾದ ನಂತರ ವಿಚ್ಛೇದನ ಪಡೆದರು. ಇದು ಆಗ ದೊಡ್ಡ ಸುದ್ದಿಯಾಗಿತ್ತು. ಎರಡೂ ಕುಟುಂಬಗಳ ನಡುವೆ ಬಹಳ ವರ್ಷಳಿಂದ ಇದ್ದ ಸ್ನೇಹವನ್ನು ಸಂಬಂಧವನ್ನಾಗಿ ಈ ಜೋಡಿಯ ಮದುವೆಯ ಮೂಲಕ ಬದಲಾಯಿಸಲಾಗಿತ್ತು.
ಹೃತಿಕ್-ಸುಸೈನ್ ವಿವಾಹ ಮುರಿದುಬಿದ್ದ ನಂತರ ಎರಡೂ ಕುಟುಂಬಗಳಿಗೆ ಆಗಿದ್ದ ಆಘಾತ ವಿವರಿಸಲು ಸಾಧ್ಯವಿಲ್ಲ. ಆದರೆ ಇಂತಹ ಜೋಡಿ ಈಗ ಮತ್ತೆ ಒಂದಾಗಿದೆ. ಅದರಲ್ಲೂ ಇತ್ತೀಚೆಗೆ ಹೃತಿಕ್-ಸುಸೈನ್ ಸಾಕಷ್ಟು ಸಲ ಒಟ್ಟಿಗೆ ಓಡಾಡಿದ್ದು ಸುದ್ದಿಯಾಗಿತ್ತು. ಮಕ್ಕಳನ್ನು ಒಟ್ಟಿಗೆ ಡಿನ್ನರ್-ಶಾಪಿಂಗ್ ಅಂತ ಕರೆದುಕೊಂಡು ಹೋಗುತ್ತಿದ್ದರು.
![]()
ಹೃತಿಕ್ ರೋಷನ್ ಹಾಗೂ ಸುಸೈನ್ ಖಾನ್
ಈಗ ಹೃತಿಕ್ ರೋಷನ್ ಕೆಲ ಗಂಟೆಗಳ ಹಿಂದೆಯಷ್ಟೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಸುಸೈನ್ ಖಾನ್ ಹೃತಿಕ್ ಮನೆಗೆ ವಾಪಸ್ಸಾಗಿದ್ದಾರೆ. ಅದೂ ತಮ್ಮ ಮಕ್ಕಳೊಂದಿಗೆ.
ಕೊರೋನಾ ಭೀತಿಯಿಂದಾಗಿ ಎಲ್ಲರೂ ಸೆಲ್ಫ್ ಐಸೊಲೇಷನ್ಗೆ ಒಳಗಾಗುತ್ತಿದ್ದರೆ, ಸುಸೈನ್ ತಮ್ಮ ಮಕ್ಕಳನ್ನು ಕರೆದುಕೊಂಡು ತಂದೆ ಹೃತಿಕ್ ಬಳಿ ಬಂದಿದ್ದಾರೆ. ಈ ವಿಷಯವನ್ನು ಹೃತಿಕ್ ತುಂಬಾ ಭಾವುಕವಾಗಿ ಬರದುಕೊಂಡಿದ್ದಾರೆ.
ಇದನ್ನೂ ಓದಿ: RRR Motion Poster: ಯುಗಾದಿ ಉಡುಗೊರೆಯಾಗಿ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಯ್ತು ಮೋಷನ್ ಪೋಸ್ಟರ್..!
'ನನ್ನ ಎಕ್ಸ್ ವೈಫ್ ಸುಸೈನ್ ಇಂತಹ ಸಮಯದಲ್ಲಿ ಮಕ್ಕಳನ್ನು ನನ್ನ ಬಳಿ ಕರೆದುಕೊಂಡು ಬಂದಿದ್ದಾರೆ. ತಂದೆಯಾಗಿ ಇಂತಹ ಸಮಯದಲ್ಲಿ ದೂರ ಇರುವ ಮಕ್ಕಳ ಬಗ್ಗೆ ಎಷ್ಟು ಚಿಂತೆ ಮಾಡಬಹುದು ಅನ್ನೋದನ್ನು ಸುಸೈನ್ ಅರ್ಥ ಮಾಡಿಕೊಂಡಿದ್ದಾರೆ. ಅಲ್ಲದೆ ಮಕ್ಕಳಿಗೂ ಇಂತಹ ಸಮಯದಲ್ಲಿ ತಂದೆ-ತಾಯಿಯ ಕೊರತೆಯಾಗಬಾರದು ಎಂದು ಸುಸೈನ್ ಅರ್ಥ ಮಾಡಿಕೊಂಡು ತಾತ್ಕಾಲಿಕವಾಗಿ ನನ್ನ ಮನೆಗೆ ಶಿಫ್ಟ್ ಆಗಿದ್ದಾರೆ' ಎಂದು ಹೃತಿಕ್ ಪೋಸ್ಟ್ ಮಾಡಿದ್ದಾರೆ.
Pranitha Subash: ಸೋಶಿಯಲ್ ಡಿಸ್ಟೆನ್ಸಿಂಗ್ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ಕನ್ನಡತಿ ಪ್ರಣೀತಾ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ