ಸಸ್ಪೆನ್ಸ್​ ಜೊತೆ ಕನಸುಗಳನ್ನು ಹೊತ್ತುಬಂದ ‘ನೃತಿ’; ಡಿ ಬೀಟ್ಸ್​​ನಲ್ಲಿ ರಿಲೀಸ್ ಆಯ್ತು ವಿಭಿನ್ನ ಕಿರುಚಿತ್ರ

ಗುರುವಾರ ಡಿ ಬೀಟ್ಸ್​​ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಕಿರುಚಿತ್ರ ರಿಲೀಸ್​ ಆಗಿದ್ದು, ಎಲ್ಲ ಕಡೆ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ‘ನುಡಿ’ ಕಿರುಚಿತ್ರ ಖ್ಯಾತಿಯ ಕೀರ್ತಿ ಶೇಖರ್​ ಹಾಗೂ ವೈಶಾಖ್​ ಪುಷ್ಪಲತಾ ‘ನೃತಿ’ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Rajesh Duggumane | news18-kannada
Updated:October 10, 2019, 6:10 PM IST
ಸಸ್ಪೆನ್ಸ್​ ಜೊತೆ ಕನಸುಗಳನ್ನು ಹೊತ್ತುಬಂದ ‘ನೃತಿ’; ಡಿ ಬೀಟ್ಸ್​​ನಲ್ಲಿ ರಿಲೀಸ್ ಆಯ್ತು ವಿಭಿನ್ನ ಕಿರುಚಿತ್ರ
ಶಾರ್ಟ್​ ಮೂವಿ ಸ್ಟಿಲ್​
  • Share this:
ನಾವು ನಿತ್ಯ ಹೊಸ ಹೊಸ ಕನಸು ಕಾಣುತ್ತೇವೆ. ನಿತ್ಯ ಕಚೇರಿಯಲ್ಲಿ ಕೂತು ಬಾಸ್​​ ಬೈಗುಳ ಕೇಳುತ್ತಾ ನಮ್ಮ ಪ್ಯಾಷನ್​ ಕನಸು ಕಾಣುತ್ತೇವೆ. ಆದರೆ, ಎಲ್ಲ ಕಟ್ಟಳೆಗಳನ್ನು ಒಡೆದು ಹೊರ ಬಂದಾಗ ಮಾತ್ರ ನಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಲು ಸಾಧ್ಯ. ಇಂಥ ಸೂಕ್ಷ್ಮ ಸಂದೇಶ ಹೊತ್ತು ಬಂದಿದೆ ‘ನೃತಿ’ ಕಿರುಚಿತ್ರ.

ಗುರುವಾರ ಡಿ ಬೀಟ್ಸ್​​ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಕಿರುಚಿತ್ರ ರಿಲೀಸ್​ ಆಗಿದ್ದು, ಎಲ್ಲ ಕಡೆ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ‘ನುಡಿ’ ಕಿರುಚಿತ್ರ ಖ್ಯಾತಿಯ ಕೀರ್ತಿ ಶೇಖರ್​ ಹಾಗೂ ವೈಶಾಖ್​ ಪುಷ್ಪಲತಾ ‘ನೃತಿ’ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಯುವತಿಯೊಬ್ಬಳು ಮನೆಯಿಂದ ಕಾಣೆಯಾಗುತ್ತಾಳೆ. ಆತಂಕಗೊಂಡ ಪಾಲಕರು ಪೊಲೀಸರಿಗೆ ಕರೆ ಮಾಡುತ್ತಾರೆ. ಪೊಲೀಸರು ಬಂದು ತನಿಖೆ ಕೂಡ ನಡೆಸುತ್ತಾರೆ. ನಂತರ ಆಕೆ ಎಲ್ಲಿ ಹೋಗಿರುತ್ತಾಳೆ? ಅವಳು ನಿಜಕ್ಕೂ ಅಪಹರಣಕ್ಕೊಳಗಾಗಿರುತ್ತಾರಾ? ಎಂಬುದೇ ಕಿರುಚಿತ್ರದ ಹೈಲೈಟ್​. ಇದು ಕಿರುಚಿತ್ರವಾದರೂ ಸಿನಿಮಾ ಗುಣಮಟ್ಟ ಹೊಂದಿದೆ. ಕ್ಯಾಮೆರಾ ಹಾಗೂ ಸಂಗೀತ ಪ್ರೇಕ್ಷಕನನ್ನು ಕಾಡುತ್ತೆ.ಈ ಬಗ್ಗೆ ಮಾಹಿತಿ ನೀಡುವ ಕೀರ್ತಿ ಶೇಖರ್​, “ಈ ಕಿರು ಚಿತ್ರಕ್ಕೆ ನಮ್ಮ ಜೀವನವೇ ಸ್ಫೂರ್ತಿ. ಒಂದು ಕಡೆ ಕೆಲಸ ಮತ್ತೊಂದೆಡೆ ಸಿನಿಮಾ ಮಾಡಬೇಕೆನ್ನುವ ಕನಸು. ನಂತರ ಎಲ್ಲವನ್ನೂ ತೊರೆದು ನಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮುಂದಾದೆ. ಇದು ಕಿರುಚಿತ್ರಕ್ಕೆ ಸ್ಫೂರ್ತಿಯಾಯಿತು,” ಎನ್ನುತ್ತಾರೆ.

‘ನೃತಿ’ ಕಿರುಚಿತ್ರವನ್ನು ಈ ಮೊದಲು ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಮಾಡುವ ಆಲೋಚನೆಯಲ್ಲಿದ್ದರು ವೈಶಾಖ್​. ಆದರೆ, ಕಿರುಚಿತ್ರ ಹೆಚ್ಚು ಜನರಿಗೆ ತಲುಪಬೇಕು ಎನ್ನುವ ಉದ್ದೇಶದಿಂದ ಡಿ ಬೀಟ್ಸ್​​ ಯೂಟ್ಯೂಬ್​ ಚಾನೆಲ್​ನಲ್ಲಿ ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರಂತೆ ಅವರು.

ಈ ಶಾರ್ಟ್​ಫಿಲ್ಮ್ಂಗೆ ಕೀರ್ತಿ ಶೇಖರ್​, ವೈಶಾಖ್​ ಪುಷ್ಪಲತಾ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ನಿರ್ದೇಶನ ಮಾಡಿದ್ದಾರೆ. ರಾಕೇಶ್​ ರಾವ್​ಕೆ ಛಾಯಾಗ್ರಹಣ, ಆದಿಲ್ ನಡಾಫ್​ ಸಂಗೀತ ಸಂಯೋಜನೆ, ರಂಜೀತ್​ ಸೇತು ಸಂಕಲನ ಇದೆ. ಅಶ್ವಿನಿ ಶಿವಣ್ಣ ಸೇರಿ ಮೊದಲಾದವರು ಬಣ್ಣ ಹಚ್ಚಿದ್ದಾರೆ.
First published: October 10, 2019, 6:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading