1994 ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೆದ್ದು ಕಿರೀಟ ತೊಟ್ಟು ಬೀಗಿದ್ದ ಸುಷ್ಮಿತಾ ಸೇನ್ ಒಂದು ಹಂತದಲ್ಲಿ, ಈ ಸ್ಪರ್ಧೆಯಲ್ಲಿ ನಾನು ಭಾಗವಹಿಸುವುದಿಲ್ಲ ಅಂತ ತಮ್ಮ ಅರ್ಜಿ ವಾಪಾಸ್ ತಗೊಂಡಿದ್ರಂತೆ. ಹೌದು, ಅದಕ್ಕೆ ಐಶ್ವರ್ಯಾ ರೈ ಕಾರಣ ಅಂತ ಅವರು ಟಿವಿ ಸಂದರ್ಶನವೊಂದರಲ್ಲಿ ಹೇಳಿರೋ ವಿಡೀಯೋ ಈಗ ಎಲ್ಲೆಡೆ ಸದ್ದು ಮಾಡ್ತಿದೆ. ಹೌದು, ಹೀಗೆ ಸುಷ್ಮಿತಾ ಸೇನ್ ಹೇಳಿರೋ ವಿಡಿಯೋವನ್ನ ರೆಡಿಟ್ ತನ್ನ ಪೇಜ್ ನಲ್ಲಿ ಶೇರ್ ಮಾಡಿದೆ.
ನಾನು ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ನಿರ್ಧರಿಸಿ ಅರ್ಜಿ ಸಲ್ಲಿಸಲು ಹೋದಾಗ ಈಗಾಗಲೇ ಸುಮಾರು 25 ಹುಡುಗಿಯರು ತಮ್ಮ ಅರ್ಜಿಗಳನ್ನು ವಾಪಸ್ ತಗೊಂಡಿದ್ದಾರೆ. ನೀವು ಖಚಿತವಾಗಿ ಭಾಗವಹಿಸುತ್ತೀರಾ, ಯೋಚಿಸಿ ತಿಳಿಸಿ ಅಂತ ಸಂಘಟಕರು ಕೇಳಿದ್ದರಂತೆ. ಅದಕ್ಕೆ ಕಾರಣ ಕೇಳಿದಾಗ ಈ ಬಾರಿ ಐಶ್ವರ್ಯ ರೈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ ಅಂತ ಹೇಳಿದರಂತೆ. ಐಶ್ವರ್ಯಾ ರೈ ಎಂತಹ ಅದ್ಬುತ ಸುಂದರಿ! ಅಲ್ಲದೆ, ಆಕೆಗೆ ಆಗಲೇ ಇದ್ದ ಪ್ರಖ್ಯಾತಿ ಬಗ್ಗೆ ನನಗೆ ತಿಳಿದಿತ್ತು.
ಹಾಗಾಗಿ, ನಾನು ಅವಳೊಂದಿಗೆ ಸ್ಪರ್ಧಿಸಲಾರೆ ಎಂದು ನಿರ್ಧರಿಸಿ ಅರ್ಜಿ ವಾಪಾಸ್ ತೆಗೆದುಕೊಂಡುಬಿಟ್ಟೆ”ಎಂದು ಸಂದರ್ಶನದಲ್ಲಿ ಹೇಳಿರುವುದು ಈ ವಿಡಿಯೋದಲ್ಲಿದೆ.
ಹಾಗಾದರೆ, ಸುಷ್ಮಿತಾ ಸೇನ್ 1994ರ ಫೆಮಿನಾ ಮಿಸ್ ಇಂಡಿಯಾ ಕಿರೀಟ ಗೆದ್ದಿದ್ದು ಹೇಗೆ?
ಅರ್ಜಿ ವಾಪಾಸ್ ತೆಗೆದುಕೊಂಡು ಮನೆಗೆ ಬಂದಾಗ ಸುಷ್ಮಿತಾ ಸೇನ್ ಅವರ ಅಮ್ಮನಿಗೆ ವಿಷಯ ತಿಳಿಯಿತಂತೆ. ಆಗ ಆಕೆ “ಸ್ಪರ್ಧಿಸುವ ಮೊದಲೇ ಸೊಲೋಪ್ಪಿಕೊಳ್ಳುವುದು ಎಷ್ಟು ಸರಿ. ಐಶ್ವರ್ಯಾ ರೈ ಅತಿ ಸುಂದರಿಯಾದರೆ, ಆಕೆಯೊಂದಿಗೆ ಸ್ಪರ್ಧಿಸಿ ಕನಿಷ್ಠ ಸೋತರೂ ಸರಿಯೇ, ಸ್ಪರ್ಧೆಯಿಂದ ಹಿಂದೆ ಸರಿಯುವುದು ಬೇಡ. ಸಾಧ್ಯವಾದಲ್ಲಿ, ಗೆದ್ದು ಬಾ” ಎಂದು ಹೇಳಿದ್ದರಂತೆ. ನಂತರ, ಸುಷ್ಮಿತಾ ಸೇನ್ ಮತ್ತೆ ಅರ್ಜಿ ಸಲ್ಲಿಸಿದ್ದರು.
ಗೆಲುವು ಸಾಧಿಸಿದ್ದು ಹೀಗೆ
ಸ್ಪರ್ಧೆಯಲ್ಲಿ ಸುಶ್ಮಿತಾ ಸೇನ್ ಅವರ ಗೆಲುವು ಟೈ-ಬ್ರೇಕರ್ ಸುತ್ತಿನ ಫಲಿತಾಂಶ ಎಂದು ಅನೇಕರಿಗೆ ತಿಳಿದಿಲ್ಲ. ಮಿಸ್ ಇಂಡಿಯಾ 1994 ರ ಸ್ಪರ್ಧೆಯ ಸಂದರ್ಭದಲ್ಲಿ, ತೀರ್ಪುಗಾರರು ಐಶ್ವರ್ಯಾ ರೈಗೆ ಒಂದು ವಿಶಿಷ್ಟವಾದ ಪ್ರಶ್ನೆಯನ್ನು ಕೇಳಿದ್ದರು.
'ದಿ ಬೋಲ್ಡ್ & ಬ್ಯೂಟಿಫುಲ್' ನಿಂದ ರಿಡ್ಜ್ ಫಾರೆಸ್ಟರ್ ಮತ್ತು 'ಸಾಂಟಾ ಬಾರ್ಬರಾ' ದಿಂದ ಮೇಸನ್ ಕ್ಯಾಪ್ವೆಲ್ ಎಂಬ ಎರಡು ಸಾಂಪ್ರದಾಯಿಕ ದೂರದರ್ಶನ ಪಾತ್ರಗಳ ನಡುವೆ ನೀವು ಯಾವುದನ್ನು ಆಯ್ಕೆ ಮಾಡುತ್ತೀರಿ?
ನೀವು ಈ ಯಾವ ಪಾತ್ರಗಳಲ್ಲಿನ ಗುಣಗಳು ನಿಮ್ಮ ಭಾವಿಪತಿಯಲ್ಲಿರಬೇಕು ಎಂದು ಬಯಸುತ್ತೀರಿ? ಎಂಬುದು ಆ ಪ್ರಶ್ನೆಯಾಗಿತ್ತು. ಅದಕ್ಕೆ ಐಶ್ವರ್ಯಾ ರೈ ಅವರು ಮೇಸನ್ ಅವರನ್ನು ಆಯ್ಕೆ ಮಾಡಿ “ಆ ಪಾತ್ರದ ಕಾಳಜಿ ತೋರುವ ಗುಣ ಮತ್ತು ಉತ್ತಮ ಹಾಸ್ಯ ಪ್ರಜ್ಞೆ ನನಗೆ ಇಷ್ಟವಾಗುತ್ತವೆ. ಅಂತಹ ಗುಣಗುಳುಳ್ಳ ವ್ಯಕ್ತಿಯು ನನ್ನ ಭಾವಿಪತಿಯಾಗಬೇಕೆಂದು ಇಚ್ಛಿಸುತ್ತೇನೆ” ಎಂದು ಉತ್ತರಿಸಿದ್ದರು.
ಸುಷ್ಮಿತಾ ಸೇನ್ ಗೆ ಕೇಳಲಾದ ಪ್ರಶ್ನೆ ಹೀಗಿತ್ತು!
ತೀರ್ಪುಗಾರರು 1994ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸುಷ್ಮಿನಾ ಸೇನ್ ಗೆ ಕೇಳಿದ ಪ್ರಶ್ನೆ ವಿಶೇಷವಾಗಿತ್ತು. ಅದೇನೆಂದರೆ, “ದೇಶದ ಜವಳಿ ಪರಂಪರೆ ಯಾವುದು ಮತ್ತು ಬಟ್ಟೆಯಲ್ಲಿ ನಿಮ್ಮ ವೈಯಕ್ತಿಕ ಆದ್ಯತೆ ಏನು? ಅದಕ್ಕೆ ಉತ್ತರಿಸಿದ ಸುಷ್ಮಿತಾ ಸೇನ್, “ಮಹಾತ್ಮ ಗಾಂಧಿಯವರ ಖಾದಿಯ ಪ್ರಚಾರವೇ ಭಾರತದ ಜವಳಿ ಪರಂಪರೆಯ ಪ್ರಾರಂಭ’’ ಎಂದು ಹೇಳಿ ಮೆಚ್ಚುಗೆ ಗಳಿಸಿದ್ದರು.
ನಂತರ ಸುಷ್ಮಿತಾ ಸೇನ್ 1994 ರ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಲ್ಲದೆ, ಅಲ್ಲಿಂದ ಆಯ್ಕೆಯಾಗಿ ‘’ಮಿಸ್ ಯುನಿವರ್ಸ್’’ ಆಗಿ ಸಹ ಹೊರಹೊಮ್ಮಿದ್ರು.
ಇದನ್ನೂ ಓದಿ: Yash-Rashmika: ಯಶ್ ಶೋ ಆಫ್ ನಟ ಎಂದಿದ್ದ ರಶ್ಮಿಕಾ, ಈಗ ರಾಕಿ ಭಾಯ್ ಬಗ್ಗೆ ಹೇಳಿದ್ದೇನು ಗೊತ್ತಾ?
ಇದಕ್ಕೆ ಸುಷ್ಮಿತಾ ಆಕೆಯ ತಾಯಿಗೆ ಧನ್ಯವಾದ ಹೇಳಿದ್ದಾರೆ. ಅಂದು “ನನ್ನ ಅಮ್ಮ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ನನ್ನನ್ನು ಪ್ರೋತ್ಸಾಹಿಸದಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ. ಆಕೆಗೆ ನನ್ನ ಥ್ಯಾಂಕ್ಸ್” ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ