Sushmita Sen: ಮಿಸ್ ಯೂನಿವರ್ಸ್ ಆದಾಗ ಈ ನಟಿಗೆ ಇಂಗ್ಲೀಷ್ ಬರ್ತಿರ್ಲಿಲ್ವಂತೆ! ನಟಿ ಬಿಚ್ಚಿಟ್ಟ ಸತ್ಯ ಕೇಳಿ

ಮಿಸ್ ಯೂನಿವರ್ಸ್ ಪ್ರಶಸ್ತಿ ಸಮಾರಂಭದ ಸಮಯದಲ್ಲಿ ತನ್ನನ್ನು ಕೇಳಿದ ಅಂತಿಮ ಪ್ರಶ್ನೆಯನ್ನು ಸಂಪೂರ್ಣವಾಗಿ  ಅರ್ಥಮಾಡಿಕೊಳ್ಳಲು ಆಗಲಿಲ್ಲ ಎಂದು ಸುಶ್ಮಿತಾ ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.

ಸುಶ್ಮಿತಾ ಸೇನ್

ಸುಶ್ಮಿತಾ ಸೇನ್

  • Share this:
ಭುವನ ಸುಂದರಿ (Miss Universe) ಎಂಬ ಪ್ರಶಸ್ತಿಯನ್ನು 1994 ರಲ್ಲಿ ತನ್ನ ಮುಡಿಗೇರಿಸಿಕೊಂಡ ನಟಿ ಸುಶ್ಮಿತಾ ಸೇನ್ (Sushmita Sen) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ನಂತರ ಇವರು ಬಾಲಿವುಡ್ (Bollywood )ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದು, ದೊಡ್ಡ ನಟಿಯಾಗಿ ಬೆಳೆದದ್ದು ಎಲ್ಲವೂ ಈಗ ಇತಿಹಾಸ (History) ಎಂದು ಹೇಳಬಹುದು. ಅವರು ಭುವನ ಸುಂದರಿ ಎಂಬ ಪ್ರಶಸ್ತಿಯನ್ನು ನಮ್ಮ ದೇಶಕ್ಕೆ ತಂದು ಕೊಟ್ಟ ಮೊದಲ ಭಾರತೀಯರಾಗಿದ್ದರು, ನಂತರ ಯುಕ್ತಾ ಮುಖಿ, ಲಾರಾ ದತ್ತಾ ಮತ್ತು ತೀರಾ ಇತ್ತೀಚೆಗೆ ಹರ್ನಾಜ್ ಸಂಧು ಅವರಂತಹವರು ಈ ಸಾಲಿನಲ್ಲಿ ಬರುತ್ತಾರೆ. ಆ ಸಮಯದಲ್ಲಿ ನಡೆದ ಒಂದು ಸಂಗತಿಯ ಬಗ್ಗೆ ನಿಮಗೆ ಹೇಳುತ್ತೇವೆ ಕೇಳಿ. ಮಿಸ್ ಯೂನಿವರ್ಸ್ ಪ್ರಶಸ್ತಿ ಸಮಾರಂಭದ ಸಮಯದಲ್ಲಿ ತನ್ನನ್ನು ಕೇಳಿದ ಅಂತಿಮ ಪ್ರಶ್ನೆಯನ್ನು ಸಂಪೂರ್ಣವಾಗಿ  ಅರ್ಥಮಾಡಿಕೊಳ್ಳಲು ಆಗಲಿಲ್ಲ ಎಂದು ಸುಶ್ಮಿತಾ ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.

ಅಂತಿಮ ಸುತ್ತಿನ ಪ್ರಶ್ನೆಗೆ ಸುಶ್ಮಿತಾ ಉತ್ತರ:

ಅಂತಿಮ ಸುತ್ತಿನಲ್ಲಿ ಮಹಿಳೆಯಾಗಿರುವುದಕ್ಕೆ ನಿಮ್ಮ ನಿಲುವೇನು? ಎಂದು ಕೇಳಿದ ಪ್ರಶ್ನೆಗೆ ನಟಿ, ’ಮಹಿಳೆಯಾಗಿರುವುದೇ ನಾವೆಲ್ಲರೂ ಮೆಚ್ಚಬೇಕಾದ ದೇವರ ಕೊಡುಗೆಯಾಗಿದೆ. ಮಗುವಿನ ಮೂಲ ತಾಯಿ, ಅವಳು ಮಹಿಳೆ. ಕಾಳಜಿ, ಹಂಚಿಕೆ ಮತ್ತು ಪ್ರೀತಿ ಎಂದರೇನು ಎಂಬುದನ್ನು ಅವಳು ಆ ಮಗುವಿಗೆ ಹೇಳಿಕೊಡುತ್ತಾಳೆ ಮತ್ತು ತೋರಿಸುತ್ತಾಳೆ, ಅದು ಮಹಿಳೆ’ ಎಂದು ಹೇಳಿದರಂತೆ.

ಭುವನ ಸುಂದರಿಗೆ ಇಂಗ್ಲೀಷ್ ತಿಳಿದಿರಲಿಲ್ಲವಂತೆ:

ತನ್ನ ಮಗಳು ಅಲಿಸಾಳ ಶಾಲಾ ನಿಯತಕಾಲಿಕೆಗೆ ನೀಡಿದ ಒಂದು ಸಂದರ್ಶನದಲ್ಲಿ, ಇಷ್ಟು ವರ್ಷಗಳ ನಂತರ ನೀವು ನೀಡಿದ ಆ ಉತ್ತರದ ಬಗ್ಗೆ ಏನಾದರೂ ಬದಲಾಯಿಸಲು ಬಯಸುವಿರಾ ಎಂದು ಅವರನ್ನು ಕೇಳಲಾಯಿತು. ಆಗ ಸುಶ್ಮಿತಾ "ನಾನು ಆ ಪ್ರಶ್ನೆಯನ್ನು ಎಷ್ಟೊಂದು ಇಷ್ಟ ಪಟ್ಟೆ ಎಂಬುದು ನಿಮಗೆ ತಿಳಿದಿದೆ ಮತ್ತು ನಾನು ಅದನ್ನು ಅನೇಕ ವರ್ಷಗಳ ನಂತರ ಹಿಂತಿರುಗಿ ನೋಡಿರುವುದರಿಂದ ಆ ಉತ್ತರವೆಂದರೆ ಅವರು ಮಹಿಳೆಯ ಗುಣಗಳು ಅಥವಾ ಮಹಿಳೆಯ ಗುಣಲಕ್ಷಣಗಳು ಯಾವುವು ಎಂದು ಎಂದಿಗೂ ಕೇಳಿರಲಿಲ್ಲ. ಅವರು ಕೇಳಿದ್ದು ಮಹಿಳೆಯಾಗಿರುವುದಕ್ಕೆ ನಿಮ್ಮ ನಿಲುವೇನು? ಅಂತ" ಎಂದು ಹೇಳಿದರು.

ಇದನ್ನೂ ಓದಿ: ವೈರಲ್​ ಆಗುತ್ತಿದೆ ಬಾಯ್​ಫ್ರೆಂಡ್​ ಜೊತೆ ಸುಶ್ಮಿತಾ ಸೇನ್​ರ​ ರೊಮ್ಯಾಂಟಿಕ್​ ವರ್ಕೌಟ್​ ವಿಡಿಯೋ..!

ನಾನು ಹಿಂದಿ ಮಾಧ್ಯಮ ಶಾಲೆಯಲ್ಲಿ ಓದಿದ್ದರಿಂದ ಆ ದಿನದಲ್ಲಿ ನನಗೆ ಅಷ್ಟು ಇಂಗ್ಲಿಷ್ ತಿಳಿದಿರಲಿಲ್ಲ. ನಾನು ಆ ಪ್ರಶ್ನೆ ಹೇಗೆ ಅರ್ಥಮಾಡಿಕೊಂಡೆ ಮತ್ತು ಅಂತಹ ಸ್ಪಷ್ಟತೆ ಮತ್ತು ಅಂತಹ ಅನುಭವದಿಂದ ಹೇಗೆ ಉತ್ತರಿಸಿದೆ ಎಂದು ನನಗೆ ತಿಳಿದಿಲ್ಲ, ನನಗೆ ಅದರ ಕೊರತೆಯಿದ್ದರೂ, ದೇವರೇ ನನ್ನ ಬಾಯಿಯಿಂದ ಅದನ್ನು ಹೇಳಿಸಿರಬಹುದು. ಮಹಿಳೆಯಾಗಿ ಹುಟ್ಟುವುದೇ ದೇವರು ನೀಡಿದ ದೊಡ್ಡ ಕೊಡುಗೆ ಎಂದು ನಾನು ಹೇಳಿದೆ ಎಂದು ಹೇಳಿದರು.

ನಾನು ಆಗ ಹೇಳಿದ್ದು ತುಂಬಾ ನಿಜ, ಏಕೆಂದರೆ ಜೀವನವು ಯಾವಾಗಲೂ ಮೆಚ್ಚುಗೆಗೆ ಅರ್ಹವಾಗಿದೆ. ಒಬ್ಬ ಮಹಿಳೆ ಜೀವನವು ಬರೇ ಮಕ್ಕಳಿಗೆ ಜನ್ಮ ನೀಡುವುದು ಅಲ್ಲ, ಹುಟ್ಟೋ ಮಗುವಿಗೆ ಪ್ರೀತಿ ಮತ್ತು ಕಾಳಜಿ ಎಂದರೆ ಏನು ಎಂಬುದನ್ನು ತಿಳಿಸಿ ಕೊಡುತ್ತಾಳೆ ಎಂದು ಅವರು ಹೇಳಿದರು.

ನನ್ನ ಉತ್ತರದಲ್ಲಿ ಬದಲಾವಣೆ ಇಲ್ಲ:

ತನ್ನ ಉತ್ತರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ. ಏಕೆಂದರೆ ಅಲ್ಲಿ ನಾನು ಅದನ್ನು ಒಬ್ಬ ವ್ಯಕ್ತಿಗೆ ತೋರಿಸುವ ಸಲುವಾಗಿ ಮಾತನಾಡಲಿಲ್ಲ. ಜೊತೆಗೆ ನಾನು ಅದನ್ನು ರೋಮ್ಯಾಂಟಿಕ್ ಲೈನ್ ಎಂದು ಹೇಳಿರಲಿಲ್ಲ. ತಾಯಿ ಒಂದು ಪೀಳಿಗೆಯ ಮಹಿಳೆಯರು ಮತ್ತು ಪುರುಷರಿಗೆ ಜನ್ಮ ನೀಡುತ್ತಾಳೆ ಎಂದು ಹೇಳುವುದು. ಆದ್ದರಿಂದ ನಾವು ಬೆಳೆಸುವ ಗಂಡು ಮಕ್ಕಳು ಸಹ ನಮ್ಮ ಸಾರದ ಒಂದು ಭಾಗವಾಗಿರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: Sushmita Sen-Rohman Shawl: ಸುಶ್ಮಿತಾ-ರೊಹ್ಮಾನ್​ ಲವ್​ ಸ್ಟೋರಿಗೆ ಎರಡರ ಸಂಭ್ರಮ: ಇಲ್ಲಿದೆ ಮಾಜಿ ಭುವನ ಸುಂದರಿ ಬರೆದ ರೊಮ್ಯಾಂಟಿಕ್​ ಪೋಸ್ಟ್​..!

ಮಹಿಳೆ ಆಂತರಿಕವಾಗಿ ಅವಳು ಯಾರೆಂದು ಕಂಡು ಕೊಳ್ಳಬೇಕು:

ನಾನು ಈಗ ಅದನ್ನು ಹಿಂತಿರುಗಿ ನೋಡಿದರೆ ನಿಜವಾಗಿಯೂ ಮಹಿಳೆಯಾಗಿರುವುದು ಒಂದು ಶಕ್ತಿಯುತವಾಗಿದೆ ಅನಿಸುತ್ತದೆ. ನಾನು 28 ವರ್ಷಗಳ ನಂತರ ಈ ಉತ್ತರಕ್ಕೆ ಏನಾದರೂ ಸೇರಿಸುವುದಾದರೆ ಒಬ್ಬ ಮಹಿಳೆ ಆಂತರಿಕವಾಗಿ ಅವಳು ಯಾರೆಂದು ಕಂಡು ಕೊಳ್ಳಬೇಕು, ಇದು ಮಹಿಳೆಯ ಸಾರವಾಗಿದೆ ಎಂಬುದನ್ನು ಸೇರಿಸಬಹುದು ಎಂದು ಹೇಳಿದರು.
Published by:shrikrishna bhat
First published: