• Home
  • »
  • News
  • »
  • entertainment
  • »
  • Charu and Rajeev Sen: ಸುಶ್ಮಿತಾ ಸೇನ್ ಸಹೋದರ, ಅತ್ತಿಗೆ ದಾಂಪತ್ಯದಲ್ಲಿ ಮತ್ತೆ ಬಿರುಕು?

Charu and Rajeev Sen: ಸುಶ್ಮಿತಾ ಸೇನ್ ಸಹೋದರ, ಅತ್ತಿಗೆ ದಾಂಪತ್ಯದಲ್ಲಿ ಮತ್ತೆ ಬಿರುಕು?

ಚಾರು ಅಸೋಪಾ ಮತ್ತು ರಾಜೀವ್ ಸೇನ್

ಚಾರು ಅಸೋಪಾ ಮತ್ತು ರಾಜೀವ್ ಸೇನ್

ಸುಶ್ಮಿತಾ ಸಹೋದರ ರಾಜೀವ್ 2019 ರಲ್ಲಿ ನಟಿ ಚಾರು ಅಸೋಪಾ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ ಸರಿಯಾಗಿ ನಾಲ್ಕು ವರ್ಷ ಸಹ ಆಗಿಲ್ಲ, ನಟಿ ಚಾರು ಅಸೋಪಾ ಮತ್ತು ಆಕೆಯ ಗಂಡ ರಾಜೀವ್ ಸೇನ್ ಬೇರೆಯಾಗುವ ಮನಸ್ಸು ಮಾಡಿದ್ದಾರೆ ಅಂತ ಅನ್ನಿಸುತ್ತಿದೆ.

  • Share this:

ಈಗಂತೂ ಈ ಒತ್ತಡದಿಂದ ಕೂಡಿದಂತಹ ಜೀವನದಲ್ಲಿ ಸಂಬಂಧಗಳು (Relationship) ನೀರಿನ ಮೇಲೆ ಇರುವ ಗುಳ್ಳೆಯಂತೆ ಆಗಿವೆ. ಏಕೆಂದರೆ ಇಂದು ಚೆನ್ನಾಗಿ ಪ್ರೀತಿಯಿಂದ ಮದುವೆಯಾದ (Marriage) ಜೋಡಿ, ಕೆಲವು ವರ್ಷಗಳ ನಂತರ ಅವರಿಬ್ಬರ ಮಧ್ಯೆ ಇದ್ದ ಆ ಪ್ರೀತಿ ಎಲ್ಲೋ ಮಾಯವಾಗಿರುತ್ತದೆ. ಈಗಾಗಲೇ ನಾವು ಈ ಸಿನೆಮಾ ಮಂದಿಗಳ ಬದುಕಿನಲ್ಲಿ ಈ ರೀತಿಯ ಪ್ರೀತಿ (Love) ಮಾಡಿ ದಿಢೀರನೆ ಮದುವೆಯಾಗಿ, ನಂತರ ಕೆಲವು ವರ್ಷಗಳಲ್ಲಿಯೇ ‘ಯಾಕೋ ಸಂಬಂಧ ಸರಿ ಬರುತ್ತಿಲ್ಲ’ ಅಂತ ಹೇಳಿ ವೈವಾಹಿಕ ಜೀವನದಿಂದ ಪತಿ ಮತ್ತು ಪತ್ನಿ (Husband and Wife) ಹೊರ ಬರುವುದನ್ನು ನಾವು ನೋಡಿದ್ದೇವೆ. ಇದೆಲ್ಲಾ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು, ಇಲ್ಲಿ ಇನ್ನೊಂದು ಜೋಡಿ ವೈವಾಹಿಕ ಜೀವನ ಸರಿಯಾಗಿ ನಡಿತಿಲ್ವಂತೆ ಅಂತ ಸುದ್ದಿಗಳು ಕೇಳಿ ಬರುತ್ತಿವೆ.


ನಾವು ಇಲ್ಲಿ ಹೇಳಲು ಹೊರಟಿರುವ ಸ್ಟೋರಿ ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಅವರ ಸಹೋದರರಾದ ರಾಜೀವ್ ಸೇನ್ ಮತ್ತು ಅವರ ಪತ್ನಿ ಚಾರು ಅಸೋಪಾ ಅವರ ವೈವಾಹಿಕ ಜೀವನದ ಬಗ್ಗೆ.


ಯಾರಿವರು ರಾಜೀವ್ ಸೇನ್ ಮತ್ತು ಚಾರು ಅಸೋಪಾ?
ಸುಶ್ಮಿತಾ ಸಹೋದರ ರಾಜೀವ್ 2019 ರಲ್ಲಿ ನಟಿ ಚಾರು ಅಸೋಪಾ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ ಸರಿಯಾಗಿ ನಾಲ್ಕು ವರ್ಷ ಸಹ ಆಗಿಲ್ಲ, ನಟಿ ಚಾರು ಅಸೋಪಾ ಮತ್ತು ಆಕೆಯ ಗಂಡ ರಾಜೀವ್ ಸೇನ್ ಬೇರೆಯಾಗುವ ಮನಸ್ಸು ಮಾಡಿದ್ದಾರೆ ಅಂತ ಅನ್ನಿಸುತ್ತಿದೆ.


ಈಗಾಗಲೇ ಇವರು ಜಿಯಾನಾ ಎಂಬ ಪುಟ್ಟ ಮಗುವಿಗೆ ಪೋಷಕರಾಗಿದ್ದಾರೆ. ಇವರು ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಮಯದಲ್ಲಿ ಸ್ವಲ್ಪ ಸಮಯದವರೆಗೆ ಇಬ್ಬರು ಬೇರ್ಪಟ್ಟಿದ್ದರು, ಆದರೆ ನಂತರದಲ್ಲಿ ಮತ್ತೆ ಇಬ್ಬರು ಒಂದಾಗಿದ್ದರು ಎಂದು ಹೇಳಲಾಗುತ್ತಿದೆ. ಇವರಿಬ್ಬರ ವೈವಾಹಿಕ ಜೀವನದ ಬಗ್ಗೆ ಈ ವರ್ಷದ ಜುಲೈ ತಿಂಗಳಲ್ಲಿ ಅನೇಕ ಸುದ್ದಿಗಳು ಹರಿದಾಡಿದ್ದವು.


ಈ ಹಿಂದೆ ಚಾರು ತಮ್ಮ ಗಂಡನ ಬಗ್ಗೆ ಹೇಳಿದ್ದೇನು ನೋಡಿ..
ಹೌದು.. ಈ ಹಿಂದೆ ರಾಜೀವ್ ಗೆ ಇನ್ನಾವುದೇ ಅವಕಾಶಗಳನ್ನು ನೀಡುವುದರಿಂದ ಪ್ರಯೋಜನವಿಲ್ಲ, ತಾನು ಅವಕಾಶಗಳನ್ನು ನೀಡಿ ನೀಡಿ ಸುಸ್ತಾಗಿದ್ದೇನೆ ಎಂದು ಚಾರು ಹೇಳಿಕೊಂಡಿದ್ದರು. ಇವರಿಬ್ಬರ ಮಧ್ಯೆ 'ವಿಶ್ವಾಸದ ಸಮಸ್ಯೆ' ಇದೆಯಂತೆ ಮತ್ತು ತಮ್ಮ ಸಂಬಂಧದಲ್ಲಿ ಇನ್ನೂ ಏನೂ ಉಳಿದಿಲ್ಲ ಎಂದು ಚಾರು ಹೇಳಿದ್ದರು. "ನನ್ನ ಮಗಳು ಅಸಭ್ಯ ಮತ್ತು ನಿಂದನಾತ್ಮಕ ವಾತಾವರಣದಲ್ಲಿ ಬೆಳೆಯುವುದನ್ನು ನಾನು ಬಯಸದ ಕಾರಣ ನಾನು ನನ್ನ ಗಂಡನಿಂದ ಬೇರ್ಪಡಲು ಬಯಸುತ್ತೇನೆ" ಅಂತ ಹೇಳಿದ್ದರು.


ಇದನ್ನೂ ಓದಿ: Kantara Bhutakola: ಗುಡುಗಿದ ಹಿಂದೂ ಜಾಗರಣ ವೇದಿಕೆ; ನಟ ಚೇತನ್ ವಿರುದ್ಧ ಪೊಲೀಸರಿಗೆ ದೂರುಕೆಲವು ತಿಂಗಳ ಹಿಂದೆ, ದಂಪತಿಗಳಿಬ್ಬರೂ ಬೇರ್ಪಡುತ್ತಿದ್ದೇವೆ ಎಂದು ಘೋಷಿಸಿದ್ದರು, ಆದರೆ ನಂತರ ತಮ್ಮ ಮನಸ್ಸನ್ನು ಬದಲಾಯಿಸಿದರು. ಆದಾಗ್ಯೂ, ವಿಷಯಗಳು ಮಾತ್ರ ಡೆಡ್ ಎಂಡ್ ತಲುಪಿವೆ ಮತ್ತು ಚಾರು ಇನ್ನು ಮುಂದೆ ಇನ್‌ಸ್ಟಾಗ್ರಾಮ್ ನಲ್ಲಿ ರಾಜೀವ್ ಅವರನ್ನು ಫಾಲೋ ಮಾಡುತ್ತಿಲ್ಲ.


ಪತ್ನಿ ಚಾರು ಅವರನ್ನ ಸಾಮಾಜಿಕ ಮಾಧ್ಯಮದಲ್ಲಿ ಬ್ಲಾಕ್ ಮಾಡಿದ ರಾಜೀವ್
ಟಿವಿ ನಟಿ ಚಾರು ಈಗ ಹೊಸ ಸಂದರ್ಶನವೊಂದರಲ್ಲಿ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ನಲ್ಲಿ ತನ್ನ ಪತಿ ತನ್ನನ್ನು ಬ್ಲಾಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. "ರಾಜೀವ್ ದೆಹಲಿಗೆ ಹೋಗಿದ್ದಾರೆ ಮತ್ತು ಅಲ್ಲಿ ಹೋದ ನಂತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ನಲ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾರೆ. ಅವರು ದೆಹಲಿಯಲ್ಲಿ ಏನು ಮಾಡುತ್ತಿದ್ದಾರೆ ಅಥವಾ ಅಲ್ಲಿಂದ ಬೇರೆಡೆಗೆ ಹೋಗಿದ್ದಾರೆಯೇ ಎಂಬುದರ ಬಗ್ಗೆ ನನಗೆ ಯಾವುದೇ ಸುಳಿವು ಇಲ್ಲ" ಎಂದು ಚಾರು ಹೇಳಿದರು.


ಇದನ್ನೂ ಓದಿ:  Rishab Shetty: ರಿಷಬ್​​ಗೆ ಗಜಕೇಸರಿ ಯೋಗ! ಇನ್ನು 15 ವರ್ಷ ಟಚ್ ಮಾಡೋಕೇ ಆಗಲ್ಲ


"ನಮ್ಮ ಮಧ್ಯೆ ಇರುವ ಕೆಲವು ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿಕೊಳ್ಳಲು ನಿಜವಾಗಿಯೂ ಪ್ರಯತ್ನಿಸುತ್ತಿದ್ದೆವು. ಆದರೆ ಅದು ಕೆಲಸ ಮಾಡುತ್ತಿಲ್ಲ ಅಂತ ಅನ್ನಿಸುತ್ತಿದೆ" ಎಂದು ಹೇಳಿದರು. ಏತನ್ಮಧ್ಯೆ, ಚಾರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದ ರಾಜೀವ್ ಅವರೊಂದಿಗಿನ ಎಲ್ಲಾ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಚಾರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಕರ್ವಾ ಚೌತ್ ದಿನದಂದು ಮಗಳು ಜಿಯಾನಾಳ ಜೊತೆಗೆ ತೆಗೆಸಿಕೊಂಡ ಫೋಟೋವೊಂದನ್ನು ಹಂಚಿಕೊಂಡಿದ್ದರು, ಆದರೆ ಆ ಫೋಟೋದಲ್ಲಿ ಗಂಡ ರಾಜೀವ್ ಇರಲಿಲ್ಲ.

Published by:Ashwini Prabhu
First published: