ಇತ್ತೀಚಿಗಷ್ಟೇ ಹೃದಯಾಘಾತಕ್ಕೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmitha Sen) ತನ್ನ ಮಾಜಿ ಗೆಳೆಯ ರೋಹ್ಮನ್ ಶಾಲ್ (Rohman Shawl) ಜೊತೆ ಕಾಣಿಸಿಕೊಂಡಿದ್ದರು. ಮೂಲಗಳ ಪ್ರಕಾರ ಅವರು ರೋಹ್ಮನ್ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇತ್ತೀಚಿಗೆ ಸುಶ್ಮಿತಾ ಮತ್ತು ರೋಹ್ಮನ್ ಮತ್ತೆ ಒಟ್ಟಿಗೆ ಶಾಪಿಂಗ್ ಮಾಡಿದ್ದು, ಅವರ ಜೊತೆ ಸುಶ್ಮಿತಾ ಸೇನ್ ಮಗಳು ಅಲಿಸಾರನ್ನು (Alisa) ಕೂಡ ಕರೆದೊಯ್ದಿದ್ದರು.
ಆದರೆ ಈ ಮೂವರು ಶಾಪ್ ಒಂದರಿಂದ ಹೊರಬಂದು ಕಾರ್ ಹತ್ತೋವಾಗಿನ ವಿಡಿಯೋವೊಂದು ವೈರಲ್ ಆಗಿದೆ. ಅದಕ್ಕೆ ಕಾರಣ ಕಾರ್ ಹತ್ತಿದ ತಕ್ಷಣ ಬಿದ್ದಂತಹ ಪ್ಲಾಸ್ಟಿಕ್ ವಾಟರ್ ಬಾಟಲ್! ಹೌದು, ಸುಶ್ಮಿತಾ ಕಾರಿನಿಂದ ವಾಟರ್ ಬಾಟಲ್ ಬೀಳಿಸಿರುವುದು ಟ್ರೋಲ್‌ಗೆ ಕಾರಣವಾಗಿದೆ.
ಸುಶ್ಮಿತಾ ಕಾರ್‌ನಿಂದ ಬಿದ್ದ ಪ್ಲಾಸ್ಟಿಕ್ ವಾಟರ್ ಬಾಟಲ್
ವೈರಲ್‌ಭಯಾನಿ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಸುಶ್ಮಿತಾ ಸೇನ್ ಕೆಂಪು ಶರ್ಟ್ ಧರಿಸಿ ಶಾಪ್‌ನಿಂದ ಹೊರಬರುವುದನ್ನು ಕಾಣಬಹುದು. ಸುಶ್ಮಿತಾ ಮಗಳು ಅಲಿಸಾ ಮತ್ತು ರೋಹ್ಮನ್ ಶಾಲ್ ಜೊತೆಗಿರುವುದನ್ನೂ ನೋಡಬಹುದು. ರೋಹ್ಮನ್ ಗುಲಾಬಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿ ಕಾಣಿಸಿಕೊಂಡಿದ್ದಾರೆ.
ಸುಶ್ಮಿತಾ ಮುಂದಿನ ಸೀಟಿನಲ್ಲಿ ಕುಳಿತರೆ, ಅಲಿಸಾ ಹಿಂದಿನ ಸೀಟ್‌ನಲ್ಲಿ ಕೂರುತ್ತಾರೆ. ಇದೇ ವೇಳೆ ಸುಶ್ಮಿತಾ ಕಾರ್ ಡೋರ್‌ಅನ್ನು ಮುಚ್ಚಿದ ರೋಹ್ಮನ್, ತಾನು ಅಲಿಸಾಳೊಂದಿಗೆ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ಆಗ, ಸುಶ್ಮಿತಾ ಬಾಗಿಲು ಮುಚ್ಚುತ್ತಿದ್ದಂತೆಯೇ ಒಂದು ಸಣ್ಣ ಮಿನರಲ್ ವಾಟರ್ ಬಾಟಲ್ ಕೆಳಗೆ ಬೀಳುತ್ತದೆ.
ಪ್ಲಾಸ್ಟಿಕ್ ಬಾಟಲಿ ಎಸೆದಿದ್ದಕ್ಕೆ ನೆಟ್ಟಿಗರಿಂದ ಟ್ರೋಲ್
ಇನ್ನು, ಸುಶ್ಮಿತಾ ಕಾರಿನಿಂದ ಪ್ಲಾಸ್ಟಿಕ್ ನೀರಿನ ಬಾಟಲಿಯ ಬಿದ್ದ ಬಗ್ಗೆ ನೆಟಿಜನ್‌ಗಳು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಒಬ್ಬರು, “ಅವರು ಮಿನರಲ್ ವಾಟರ್ ಪ್ಲಾಸ್ಟಿಕ್ ಬಾಟಲ್ ಅನ್ನು ರಸ್ತೆಯ ಮೇಲೆ ಎಸೆದಿದ್ದಾರೆಯೇ! ಸ್ಯಾಡ್! ಅವಳು ಕಸ ಹಾಕುವುದನ್ನು ಪ್ರೋತ್ಸಾಹಿಸುವ ರೋಲ್ ಮಾಡೆಲ್ ಆಗಬೇಕು! ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ಆ ಬಾಟಲಿಯನ್ನು ಡಸ್ಟ್‌ಬಿನ್‌ಗೆ ಎಸೆಯಬೇಕಾಗಿತ್ತು" ಎಂದು ಪ್ರತಿಕ್ರಿಯಿಸಿದ್ದಾರೆ.
View this post on Instagram
ಮತ್ತೊಬ್ಬರು ಯಾರೋ ಅವರನ್ನು ಬೆಂಬಲಿಸಿ ಹೀಗೆ ಬರೆದಿದ್ದಾರೆ, "ಅವರು ಬಾಟಲಿಯನ್ನು ಎಸೆದರು ಎಂದು ಹೇಳುತ್ತಿರುವ ಜನರು, ಅವರು ಕುಳಿತಿರುವಾಗ ಕಾರಿನಿಂದ ಬಿದ್ದ ಬಾಟಲಿಯನ್ನು ಎಚ್ಚರಿಕೆಯಿಂದ ನೋಡಿ, ಇದೇ ರೀತಿ ನಮ್ಮಿಂದಲೂ ಕೆಲವೊಮ್ಮೆ ಆಗುತ್ತದೆ. ಅದನ್ನು ಅಷ್ಟು ದೊಡ್ಡ ಸಂಗತಿಯನ್ನಾಗಿ ಮಾಡಬೇಡಿ” ಎಂದು ಬರೆದಿದ್ದಾರೆ.
ಫೆಬ್ರವರಿಯಲ್ಲಿ ಆಗಿತ್ತು ಹೃದಯಾಘಾತ
ಅಂದಹಾಗೆ, ಇದೇ ವರ್ಷ ಫೆಬ್ರವರಿಯಲ್ಲಿ,ಸುಶ್ಮಿತಾ ಸೇನ್‌ಗೆ ಹೃದಯಾಘಾತವಾಗಿತ್ತು. ನಂತರ ಅವರು ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.
ಇನ್ನು, ಇತ್ತೀಚೆಗೆ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್, ಇನ್ಸ್ಟಾಗ್ರಾಮ್ನಲ್ಲಿ ವರ್ಕೌಟ್ ವಿಡಿಯೋವನ್ನು ಹಂಚಿಕೊಂಡಿದ್ದರು. ಇದರಲ್ಲಿ ಅಲಿಸಾ ಮತ್ತು ರೋಹ್ಮನ್ ಶಾಲ್ ಕೂಡ ಕಾಣಿಸಿಕೊಂಡಿದ್ದರು. ಈಗ ಹೆಚ್ಚಿನ ತರಬೇತಿಗೆ ಅನುಮತಿ ನೀಡಲಾಗಿದೆ. ನಾನು ಶೀಘ್ರದಲ್ಲೇ ಜೈಪುರದಲ್ಲಿ ಆರ್ಯ ಚಿತ್ರೀಕರಣಕ್ಕೆ ಹೊರಡುತ್ತೇನೆ. ಇಲ್ಲಿ ನನ್ನ ಪ್ರೀತಿಪಾತ್ರರಿದ್ದಾರೆ. ನನ್ನ ಜೊತೆಯಲ್ಲಿ ಇರುತ್ತಾರೆ ಎಂದು ಸುಶ್ಮಿತಾ ಬರೆದುಕೊಂಡಿದ್ದರು.
ನಟಿ ಸುಶ್ಮಿತಾ ಸೇನ್ ಅವರು ರಾಮ್ ಮಾಧವಾನಿ ರಚಿಸಿದ ವೆಬ್-ಸರಣಿ ಆರ್ಯ 3 ನಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಸುಶ್ಮಿತಾ ತಮ್ಮ ಜೀವನಚರಿತ್ರೆ ತಾಲಿಯಲ್ಲಿ ಗೌರಿ ಸಾವಂತ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅಂದಹಾಗೆ ತಾಲಿ ಟ್ರಾನ್ಸ್‌ವುಮನ್ ಗೌರಿ ಸಾವಂತ್ ಅವರ ಜೀವನಚರಿತ್ರೆಯಾಗಿದ್ದು, ಅಲ್ಲಿ ಸುಶ್ಮಿತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ